ಬೆಂಗಳೂರು, ಮಾ.6- ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹಾಗೂ ಇತರರಿಗೆ ಬಂದಿರುವ ಜೀವ ಬೆದರಿಕೆ ಈಮೇಲ್ ಕರೆಯ ಬೆನ್ನು ಹತ್ತಿರುವ ನಗರ ಪೊಲೀಸರು ಈಮೇಲ್ ಮೂಲ ಶೋಸಲು ಮುಂದಾಗಿದ್ದಾರೆ.
ಈ ಕುರಿತಂತೆ ಸ್ವಿಜರ್ಲ್ಯಾಂಡ್ನಲ್ಲಿರುವ ಸಂಸ್ಥೆಗೆ ಪತ್ರ ಬರೆದು ಮಾಹಿತಿ ಕೋರಿರುವ ಪೊಲೀಸರು ಅಲ್ಲಿನ ಉತ್ತರಕ್ಕಾಗಿ ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.ಶಾಹಿದ್ ಖಾನ್ ಎಂಬ ಹೆಸರಿನಲ್ಲಿ ಬಂದಿರುವ ಈ ಮೇಲ್ ವಿಷಯದ ಮಾಹಿತಿ ಕೋರಿ ಸ್ಟಿಜರ್ಲ್ಯಾಂಡ್ ಮೂಲದ ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ಸಂಸ್ಥೆಗೆ ಪೊಲೀಸರು ಪತ್ರ ಬರೆದಿದ್ದಾರೆ.
ಈ ವ್ಯಕ್ತಿ ಪೊ್ರೀಟೊಮೇಲ್.ಕಾಮ್ ಮೂಲಕ ಈಮೇಲ್ ಮಾಡಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಆ ಸಂಸ್ಥೆಗೆ ಪೊಲೀಸರು ಪತ್ರ ಬರೆದು ಸಂಸ್ಥೆಯ ಉತ್ತರಕ್ಕಾಗಿ ಕಾಯುತ್ತಿದ್ದಾರೆ. ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ಇ ಮೇಲ್ ಸರ್ವಿಸ್ ನೀಡುವ ಸ್ಟಿಜರ್ಲ್ಯಾಂಡ್ ಮೂಲದ ಕಂಪನಿಯಾಗಿದ್ದು ಈ ವ್ಯಕ್ತಿ ಕಳುಹಿಸಿರುವ ಜೀವ ಬೆದರಿಕೆ ಕರೆಯ ಬಗ್ಗೆ ಅಗತ್ಯ ಮಾಹಿತಿ ನೀಡುವಂತೆ ಕೇಳಿಕೊಳ್ಳಲಾಗಿದೆ.
2013 ರಲ್ಲಿ ಸ್ವಿಜರ್ಲ್ಯಾಂಡ್ನ ಪ್ಲಾನ್ -ಲೆಸ್-ಔಟ್ಸ್ ರಸ್ತೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಂಡ್ ಟು ಎಂಡ್ ಸಂಸ್ಥೆ ಶೀಘ್ರದಲ್ಲೇ ಮಾಹಿತಿ ನೀಡುವ ಸಾಧ್ಯತೆ ಇದ್ದು, ಅಲ್ಲಿನ ಮಾಹಿತಿ ದೊರೆತ ನಂತರ ತನಿಖೆ ಚುರುಕುಗೊಳಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಏನಿದು ಜೀವಬೆದರಿಕೆ ಪ್ರಕರಣ:
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಹಾಗೂ ನಗರ ಪೊಲೀಸ್ ಆಯುಕ್ತ ದಯಾನಂದ ಸೇರಿದಂತೆ 10ಕ್ಕೂ ಹೆಚ್ಚು ಗಣ್ಯರನ್ನು ಬಾಂಬ್ ಇಟ್ಟು ಉಡಾಯಿಸುವುದಾಗಿ ಶಾಹಿದ್ ಖಾನ್ ಎಂಬ ಹೆಸರಿನಲ್ಲಿ ಜೀವ ಬೆದರಿಕೆ ಈಮೇಲ್ ಕಳುಹಿಸಿದ್ದ ಮಾತ್ರವಲ್ಲ, ಮುಂದಿನ ಶನಿವಾರ ನಗರದಲ್ಲಿ ಅಂಬಾರಿ ಉತ್ಸವ ಬಸ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಬಾಂಬ್ ಸೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ.
ರಾಮೇಶ್ವರಂ ಕೆಫೆ ಸೋಟ ಪ್ರಕರಣದ ಬೆನ್ನಲ್ಲೇ ಈ ವ್ಯಕ್ತಿ ಈಮೇಲ್ ಮಾಡಿ ರಾಮೇಶ್ವರಂ ಕೆಫೆ ಪ್ರಕರಣ ಕೇವಲ ಟ್ರಯಲ್ ಮುಂದಿದೆ ಮಾರಿ ಹಬ್ಬ ಎಂದು ಎಚ್ಚರಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.