ಬೆಂಗಳೂರು,ಮಾ.25- ರಾಮನಗರ ಜಿಲ್ಲೆಯ ಬಿಡದಿ ರೈಲ್ವೆ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಕೆಲ ಕಾಲ ರೈಲ್ವೆ ನಿಲ್ದಾಣದಲ್ಲಿ ಆತಂಕ ಸೃಷ್ಟಿಯಾಗಿತ್ತು. ಬಿಡದಿ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದ್ದು, ಕೆಲವೇ ನಿಮಿಷಗಳಲ್ಲಿ ರೈಲ್ವೆ ನಿಲ್ದಾಣ ಸ್ಫೋಟಗೊಳ್ಳಲಿದೆ ಎಂಬ ಮಾಹಿತಿ ಗುಪ್ತದಳಕ್ಕೆ ಲಭಿಸಿದೆ.
ತಕ್ಷಣ ಇಂದು ಮುಂಜಾನೆ ರಾಮನಗರ ಡಿವೈಎಸ್ಪಿ ಹಾಗೂ ರೈಲ್ವೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಬಾಂಬ್ ಪತ್ತೆದಳ ಹಾಗೂ ಶ್ವಾನದಳ ಸ್ಥಳಕ್ಕೆ ದೌಡಾಯಿಸಿ ನಿಲ್ದಾಣ ಪೂರ್ತಿ ಪರಿಶೀಲಿಸಿದಾಗ ಯಾವುದೇ ಸ್ಪೋಟಕಗಳು ಪತ್ತೆಯಾಗಿಲ್ಲ. ಇದು ಹುಸಿ ಕರೆ ಎಂಬುದು ಗೊತ್ತಾಗಿ ನಿಟ್ಟುಸಿರು ಬಿಡುವಂತಾಯಿತು.