Saturday, June 7, 2025
Homeರಾಜ್ಯಸಿಎಂ ನಿವಾಸ -ಪಾಸ್‌‍ಪೋರ್ಟ್‌ ಕಚೇರಿಗೆ ಬಾಂಬ್‌ ಬೆದರಿಕೆ

ಸಿಎಂ ನಿವಾಸ -ಪಾಸ್‌‍ಪೋರ್ಟ್‌ ಕಚೇರಿಗೆ ಬಾಂಬ್‌ ಬೆದರಿಕೆ

Bomb threat to CM's residence and passport office

ಬೆಂಗಳೂರು, ಜೂ.6-ಸಿಎಂ ಅಧಿಕೃತ ನಿವಾಸ ಹಾಗೂ ಕೋರಮಂಗಲದ ಪಾಸ್‌‍ ಪೋರ್ಟ್‌ ಕಚೇರಿಗೆ ಇಂದು ಬೆಳಗ್ಗೆ ಇ-ಮೇಲ್‌ ನಲ್ಲಿ ಬಾಂಬ್‌ ಬೆದರಿಕೆ ಸಂದೇಶ ಬಂದಿದ್ದರಿಂದ ಕೆಲ ಕಾಲ ಎರಡು ಸ್ಥಳಗಳಲ್ಲಿ ಆತಂಕದ ವಾತಾವರಣ ಉಂಟಾಯಿತು.

ಸಿಎಂ ನಿವಾಸದ ಸಿಬ್ಬಂದಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಇ-ಮೇಲ್‌ಗೆ ಬಂದಿದ್ದಂತಹ ಮಾಹಿತಿಗಳನ್ನು ನೋಡುತ್ತಿದ್ದಾಗ ಬಾಂಬ್‌ ಬೆದರಿಕೆ ಸಂದೇಶ ಬಂದಿರುವುದು ಗೊತ್ತಾಗಿದೆ.
ತಕ್ಷಣ ಅವರು ಪೊಲೀಸರಿಗೆ ಹಾಗೂ ಬಾಂಬ್‌ ಪತ್ತೆ ದಳ ಹಾಗೂ ಬಾಂಬ್‌ ನಿಷ್ಕ್ರೀಯ ದಳಕ್ಕೆ ವಿಷಯ ತಿಳಿಸಿದ್ದಾರೆ.

ಸುದ್ದಿ ತಿಳಿದು ಹೈಗ್ರೌಂಡ್‌್ಸ ಠಾಣೆ ಪೊಲೀಸರು ಹಾಗೂ ಬಾಂಬ್‌ ಪತ್ತೆ ಮತ್ತು ನಿಷ್ಕ್ರೀಯ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರಾದರೂ ಯಾವುದೇ ಬಾಂಬ್‌ ಪತ್ತೆಯಾಗಿಲ್ಲ.
ಅದೇ ರೀತಿ ಕೋರಮಂಗಲದಲ್ಲಿರುವ ಪಾಸ್‌‍ಪೋರ್ಟ್‌ ಕಚೇರಿಗೆ ಬಂದಂತಹ ಇ-ಮೇಲ್‌ಗಳನ್ನು ಸಿಬ್ಬಂದಿ ಗಮನಿಸುತ್ತಿದ್ದಾಗ ಬಾಂಬ್‌ ಬೆದರಿಕೆ ಸಂದೇಶ ನೋಡಿ ಆತಂಕಗೊಂಡು ತಕ್ಷಣ ಪೊಲೀಸರಿಗೆ ಹಾಗೂ ಬಾಂಬ್‌ ಪತ್ತೆ ದಳ ಹಾಗೂ ಬಾಂಬ್‌ ನಿಷ್ಕ್ರೀಯ ದಳಕ್ಕೆ ವಿಷಯ ತಿಳಿಸಿದ್ದಾರೆ.

ಸುದ್ದಿ ತಿಳಿದು ಕೋರಮಂಗಲ ಠಾಣೆ ಪೊಲೀಸರು ಹಾಗೂ ಬಾಂಬ್‌ ಪತ್ತೆ ಮತ್ತು ನಿಷ್ಕ್ರೀಯ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರಾದರೂ ಯಾವುದೇ ಬಾಂಬ್‌ ಪತ್ತೆಯಾಗಿಲ್ಲ.ಎರಡು ಪೊಲೀಸ್‌‍ ಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇ-ಮೇಲ್‌ ಸಂದೇಶ ಯಾರು ಕಳುಹಿಸಿದ್ದಾರೆ,ಎಲ್ಲಿಂದ ಬಂದಿದೆ,ಯಾವ ಉದ್ದೇಶಕ್ಕಾಗಿ ಇ-ಮೇಲ್‌ ಸಂದೇಶ ಕಳುಹಿಸಲಾಗಿದೆ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News