Sunday, July 7, 2024
Homeಬೆಂಗಳೂರುಬೆಂಗಳೂರಿನ ಫೈವ್‌ ಸ್ಟಾರ್‌ ಹೋಟೆಲ್‌ಗೆ ಬಾಂಬ್‌ ಬೆದರಿಕೆ

ಬೆಂಗಳೂರಿನ ಫೈವ್‌ ಸ್ಟಾರ್‌ ಹೋಟೆಲ್‌ಗೆ ಬಾಂಬ್‌ ಬೆದರಿಕೆ

ಬೆಂಗಳೂರು, ಮೇ 23- ನಗರದ ಫೈವ್‌ ಸ್ಟಾರ್‌ ಹೋಟೆಲ್‌ಗೆ ಬಾಂಬ್‌ ಇಡಲಾಗಿದೆ ಎಂಬ ಇ-ಮೇಲ್‌ ಸಂದೇಶ ಬಂದಿದ್ದು, ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿರುವ ಸ್ಟಾರ್‌ ಹೋಟೆಲ್‌ಗೆ ಬಾಂಬ್‌ ಇಡಲಾಗಿದೆ ಎಂದು ಇ-ಮೇಲ್‌ ಮೂಲಕ ಸಂದೇಶ ಬಂದಿದ್ದು, ಮಧ್ಯರಾತ್ರಿ 2 ಗಂಟೆಗೆ ಸ್ಫೋಟಿಸುವುದಾಗಿ ಉಲ್ಲೇಖಿಸಲಾಗಿದೆ.

ಇಂದು ಬೆಳಗ್ಗೆ ಹೋಟೆಲ್‌ ಸಿಬ್ಬಂದಿ ಮೇಲ್‌ ಪರಿಶೀಲಿಸುತ್ತಿದ್ದಾಗ ಇ-ಮೇಲ್‌ ಸಂದೇಶ ನೋಡಿ ಗಾಬರಿಯಾಗಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು, ಬಾಂಬ್‌ ನಿಷ್ಕ್ರಿಯಾ ದಳ, ಬಾಂಬ್‌ ಪತ್ತೆ ದಳ ಆಗಮಿಸಿ ಇಡೀ ಹೋಟೆಲ್‌ ಪರಿಶೀಲಿಸಿದಾಗ ಯಾವುದೇ ಬಾಂಬ್‌ ಪತ್ತೆಯಾಗಿಲ್ಲ. ಇದು ಹುಸಿ ಬಾಂಬ್‌ ಸಂದೇಶ ಎಂಬುವುದು ತಿಳಿದು ಹೊಟೆಲ್‌ ಸಿಬ್ಬಂದಿ ಹಾಗೂ ಪೊಲೀಸರು ನಿಟ್ಟುಸಿರು ಬಿಟ್ಟರು.

ನಗರದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟದ ನಂತರ ಆಗಿಂದ್ದಾಗೆ ಹುಸು ಬಾಂಬ್‌ ಬೆದರಿಕೆ ಕರೆಗಳು ಬರುತ್ತಿದ್ದು, ನಾಗರಿಕರನ್ನು ಬೆಚ್ಚಿ ಬೀಳಿಸಿದೆ.ಕೆಲ ದಿನಗಳ ಹಿಂದೆ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಶಾಲೆಯೊಂದಕ್ಕೆ ಬಾಂಬ್‌ ಬೆದರಿಕೆ ಸಂದೇಶ ಬಂದಿತ್ತು. ಮರು ದಿನ ಕಗ್ಗಲಿಪುರದ ಕನಕಪುರ ರಸ್ತೆಯ ಶಾಲೆ ಸೇರಿದಂತೆ ಒಟ್ಟು 5 ಶಾಲಾ-ಕಾಲೇಜುಗಳಿಗೆ ಇದೇ ರೀತಿ ಸಂದೇಶ ಬಂದಿತ್ತು. 5 ಶಾಲಾ-ಕಾಲೇಜುಗಳಲ್ಲಿ ಬಾಂಬ್‌ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದಾಗ ಅದು ಹುಸಿ ಸಂದೇಶಗಳು ಎಂಬುದು ಗೊತ್ತಾಗಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೊಷಕರು ನಿರಾಳರಾದರು.

ಅದೇ ರೀತಿ ಕಳೆದ ತಿಂಗಳು ಜಾಲಹಳ್ಳಿ ಠಾಣಾ ವ್ಯಾಪ್ತಿಯ ಕದಂಬ ಹೋಟೆಲ್‌ ಹಾಗೂ ಸುತ್ತ ಮುತ್ತಾ ಬಾಂಬ್‌ ಇಡಲಾಗಿದ್ದು, ಕೆಲವೇ ಗಂಟೆಗಳಲ್ಲಿ ಸ್ಫೋಟಗೊಳ್ಳಲಿದೆ ಎಂಬ ಅನಾಮಧೇಯ ಪತ್ರ ಪೊಲೀಸರಿಗೆ ಬಂದಿತ್ತು. ಪರಿಶೀಲನೆ ಬಳಿಕ ಅದು ಹುಸಿ ಬೆದರಿಕೆ ಎಂಬುವುದು ಗೊತ್ತಾಗಿದೆ.

ಹೆಚ್ಚುತ್ತಿರುವ ಹುಸಿ ಬಾಂಬ್‌ ಬೆದರಿಕೆ ಸಂದೇಶಗಳು:
ದೇಶದಾದ್ಯಂತ ಇತ್ತೀಚೆಗೆ ವಿಮಾನ ನಿಲ್ದಾಣ, ಶಾಲಾ-ಕಾಲೇಜುಗಳು, ಆಸ್ಪತ್ರೆಗಳು, ಫೈವ್‌ಸ್ಟಾರ್‌ ಹೋಟೆಲ್‌ಗಳಿಗೆ ಹುಸಿ ಬಾಂಬ್‌ ಬೆದರಿಕೆ ಸಂದೇಶಗಳು ಹೆಚ್ಚಾಗಿ ಬರುತ್ತಿದ್ದು ಪೊಲೀಸರು ಹಾಗೂ ಸಾರ್ವಜನಿಕರ ನಿದ್ದೆಗೆಡಿಸುತ್ತಿವೆ.

RELATED ARTICLES

Latest News