ಬೆಂಗಳೂರು,ಅ.23- 2001ರಲ್ಲಿ ಹೋಟೆಲ್ ಉದ್ಯಮಿ ಜಯಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಭೂಗತ ಪಾತಕಿ ಛೋಟಾ ರಾಜನ್ಗೆ ಮೋಕ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಅಮಾನತುಪಡಿಸಿದೆ.
ಈ ಪ್ರಕರಣದಲ್ಲಿ ನ್ಯಾಯಾಲಯ ಛೋಟಾ ರಾಜನ್ಗೆ ಜಾಮೀನು ಮಂಜೂರು ಮಾಡಿದೆ. ಆದರೆ ಬೇರೆ ಬೇರೆ ಪ್ರಕರಣದಲ್ಲಿ ಅವರ ಮೇಲೆ ಆರೋಪ ಇರುವುದರಿಂದ ಸದ್ಯ ಜೈಲು ವಾಸವೇ ಖಾಯಂ ಆಗಿದೆ.
ಬಾಂಬೆ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ರೇವತಿ ಮೊಹಿತೆ ದೇರೆ ಹಾಗೂ ಪೃಥ್ವಿರಾಜ್ ಚವ್ಹಾಣ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಒಂದು ಲಕ್ಷ ಬಾಂಬ್ ಸೇರಿದಂತೆ ವಿವಿಧ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿ ಆದೇಶ ನೀಡಿದರು.ಈ ಹಿಂದೆ ಹೋಟೆಲ್ ಉದ್ಯಮಿ ಜಯಶೆಟ್ಟ ಕೊಲೆ ಪ್ರಕರಣದಲ್ಲಿ ಮೋಕ ವಿಶೇಷ ನ್ಯಾಯಾಲಯ ಛೋಟಾ ರಾಜನ್ಗೆ ಜೀವಾವಧಿ ಶಿಕ್ಷೆ ನೀಡಿತ್ತು. ಇದನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್ಗೆ ವಿಶೇಷ ಮೇಲನವಿ ಅರ್ಜಿ ಸಲ್ಲಿಸಿದ್ದರು.
ಜಯಶೆಟ್ಟಿ ಯಾರು?:
ಮಧ್ಯ ಮುಂಬೈನ ಗಾಮ್ದೇವಿಯಲ್ಲಿ ಗೋಲ್ಡನ್ ಕ್ರೌನ್ ಹೋಟೆಲ್ ಮಾಲೀಕರಾಗಿದ್ದ ಜಯಶೆಟ್ಟಿ ಅವರನ್ನು ಛೋಟಾ ರಾಜನ್ ಗ್ಯಾಂಗ್ನ ಇಬ್ಬರು ಆರೋಪಿಗಳು ಹೋಟೆಲ್ನ ಮೊದಲ ಮಹಡಿಯಲ್ಲಿ 2001ರ ಮೇ 4ರಂದು ಗುಂಡಿಕ್ಕಿ ಕೊಂದಿದ್ದರು.
ಛೋಟಾ ರಾಜನ್ ಗ್ಯಾಂಗ್ನ ಸದಸ್ಯ ಹೇಮಂತ್ ಪೂಜಾರಿಯಿಂದ ಜಯಶೆಟ್ಟಿಗೆ ಸುಲಿಗೆ ಕರೆಗಳು ಬಂದಿದ್ದವು ಮತ್ತು ಹಣವನ್ನು ಪಾವತಿಸಲು ವಿಫಲವಾದ ಕಾರಣ ಹತ್ಯೆ ಮಾಡಲಾಗಿದೆ ತನಿಖೆಯಿಂದ ತಿಳಿದುಬಂದಿತ್ತು. ಹಿರಿಯ ಅಪರಾಧ ವರದಿಗಾರ ಜೆ ಡೇ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ರಾಜನ್ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ.