ಪಾಟ್ನಾ,ಮೇ17- ಇಲ್ಲಿನ ಖಾಸಗಿ ಶಾಲೆಯ ಚರಂಡಿಯೊಳಗೆ 3 ವರ್ಷದ ಬಾಲಕನ ಶವ ಪತ್ತೆಯಾಗಿದ್ದು, ಆಕ್ರೋಶಗೊಂಡ ಮೃತನ ಮನೆಯವರು ಶಾಲಾ ಆವರಣಕ್ಕೆ ಬೆಂಕಿ ಹಚ್ಚಿದ್ದಾರೆ.ಕುಟುಂಬಸ್ಥರು ರಸ್ತೆಗಳನ್ನು ನಿರ್ಬಂಧಿಸಿ, ವಾಹನ ಸಂಚಾರಕ್ಕೆ ಅಡ್ಡಿಪಡಿಸಿ, ಬೀದಿಗಳಲ್ಲಿ ಟೈರ್‌ಗಳನ್ನು ಸುಟ್ಟುಹಾಕಿದ್ದಾರೆ.
ಬಾಲಕ ಶಾಲೆಯಿಂದ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದ್ದರು. ಅವರು ಶಾಲೆಯವರನ್ನು ವಿಚಾರಿಸಿದಾಗ ಆತ ಮನೆಗೆ ಹೋಗಿರುವುದಾಗಿ ತಿಳಿಸಿದ್ದರೆ. ಹುಡುಕಾಟ ಮುಂದುವರೆಸಿದ ಕುಟುಂಬಸ್ಥರು ಅಂತಿಮವಾಗಿ ಶಾಲೆಯ ಆವರಣದ ಆಳದಲ್ಲಿ, ಒಳಚರಂಡಿ ಗಟಾರದೊಳಗೆ ಬಚ್ಚಿಟ್ಟಿದ್ದ ಬಾಲಕನ ಶವ ಪತ್ತೆಯಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ನಿನ್ನೆ ಮಕ್ಕಳ ಅಪಹರಣ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಗು ಶಾಲೆಯೊಳಗೆ ಹೋಗಿದ್ದರೂ ಹೊರಗೆ ಬಾರದಿರುವುದು ಕಂಡುಬಂದಿದೆ.
ತನಿಖೆ ವೇಳೆ ಬಾಲಕನ ಶವವನ್ನು ಶಾಲಾ ಕೊಠಡಿಯ ಚರಂಡಿಯಲ್ಲಿ ಇಡಲಾಗಿದೆ ಎಂದು ಶಾಲೆಯ ಇಬ್ಬರು ಮಕ್ಕಳು ಒಪ್ಪಿಕೊಂಡಿದ್ದಾರೆ.ಪ್ರಕರಣ ಸಂಬಂಧ ಪೊಲೀಸರು ಇದುವರೆಗೆ ಮೂವರನ್ನು ವಶಕ್ಕೆ ಪಡೆದಿದ್ದಾರೆ.