Monday, May 12, 2025
Homeರಾಷ್ಟ್ರೀಯ | Nationalಭಾರತದ ಬ್ರಹ್ಮಾಸ್ತ್ರಕ್ಕೆ ಹೆದರಿ ಕದನ ವಿರಾಮಕ್ಕೆ ಗೋಗರೆದ ಪಾಕ್

ಭಾರತದ ಬ್ರಹ್ಮಾಸ್ತ್ರಕ್ಕೆ ಹೆದರಿ ಕದನ ವಿರಾಮಕ್ಕೆ ಗೋಗರೆದ ಪಾಕ್

BrahMos likely used in precision attacks on dozen Pakistan air bases

ನವದೆಹಲಿ, ಮೇ 11- ಭಾರತದ ಬ್ರಹ್ಮೋಸ್ ಕ್ಷಿಪಣಿ ದಾಳಿಗೆ ಬೆದರಿದ ಪಾಕಿಸ್ತಾನ ಅಮೆರಿಕವನ್ನು ಗೋಗರೆದು ಕದನ ವಿರಾಮ ಮಾಡಿಸಿಕೊಂಡಿದೆ ಎಂಬ ಮಾತುಗಳು ಕೇಳಿಬಂದಿವೆ. ಭಾರತದ ಉಗ್ರರ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿದ ಬಳಿಕ ಪಾಕಿಸ್ತಾನ ಆರಂಭದಲ್ಲಿ ಡೋನ್, ಸಣ್ಣ ಕ್ಷಿಪಣಿಗಳನ್ನು ಹಾರಿಸಿ ದಾಳಿ ನಡೆಸುತ್ತಿತ್ತು, ಆದರೆ ಮೇ 9, 10 ರ ರಾತ್ರಿ ದೆಹಲಿಯನ್ನು ಗುರಿಯಾಗಿಸಿ ಪಾಜುಕ್ ಫತಾಹ್ – ಕ್ಷಿಪಣಿಯನ್ನು ಪಾಕ್ ಪ್ರಯೋಗಿಸಿತ್ತು.

ಪಾಕ್ ಖಂಡಾಂತರ ಕ್ಷಿಪಣಿಯನ್ನು ಪ್ರಯೋಗಿಸಿದ ಬೆನ್ನಲ್ಲೇ ಭಾರತ ಮೇ 10ರ ಮುಂಜಾನೆ ಮೊದಲ ಬಾರಿಗೆ ಬ್ರಹ್ಮಸ್ ಕ್ರೂಸ್ ಕ್ಷಿಪಣಿಯನ್ನು ಹಾರಿಸಿತ್ತು. ಇನ್ನೊಂದು ದೇಶದ ಮಧ್ಯೆ ಕಾದಾಟ ನಡೆಸುತ್ತಿದ್ದಾಗ ಭಾರತ ಬ್ರಹ್ಮಸ್ ಕ್ಷಿಪಣಿಯನ್ನು ಹಾರಿಸಿದ್ದು ಇದೇ ಮೊದಲು. ಪಾಕ್‌ ಯಾವುದೇ ನಗರಗಳನ್ನು ಗುರಿಯಾಗಿಸಿ ಭಾರತ ಕ್ಷಿಪಣಿಯನ್ನು ಹಾರಿಸಿರಲಿಲ್ಲ.

ಪಾಕಿಸ್ತಾನದ ಪ್ರಮುಖ ವಾಯುನೆಲೆಯನ್ನು ಗುರಿಯಾಗಿಸಿಕೊಂಡೇ ದಾಳಿ ನಡೆಸಿತ್ತು. ಭಾರತ ಮೊದಲೇ ಚೀನಾ ನಿರ್ಮಿತ ವಾಯು ರಕ್ಷಣಾ ವ್ಯವಸ್ಥೆಯನ್ನು ಧ್ವಂಸ ಮಾಡಿತ್ತು. ಹೀಗಾಗಿ ಬಹೊಸ್ ಕ್ಷಿಪಣಿ ಮೊದಲು ರಾವಲ್ಪಿಂಡಿ ಬಳಿಯ ಚವ್ಹಾಲಾ ಮತ್ತು ಪಂಜಾಬ್ ಪ್ರಾಂತ್ಯದ ಸರ್ಗೋಧಾದ ಮೇಲೆ ಬಿತ್ತು.

ಜಕೋಬಾಬಾದ್, ಭೋಲಾರಿ ಮತ್ತು ಸ್ಟಾಡುರ್ ಮೇಲೆ ದಾಳಿ ನಡೆಸಿತು. ಎಲ್ಲಾ ಸೇರಿ ಒಟ್ಟು 11 ವಾಯು ನೆಲೆ (ನೂರ್ ಖಾನ್, ಚಕ್ಲಾಲಾ, ರಫಿಕ್ಷಿ, ಮುರಿಡ್, ಸುಕ್ಕುರ್. ಸಿಯಾಲ್ ಕೋಟ್, ವಸರೂರು, ಚುನಿಯನ್, ಸರ್ಗೋಧಾ, ಸ್ಕಾಡುರ್, ಭೋಲಾರಿ, ಜಾಕೋಬಾಬಾದ್ ಮೇಲೆ ಭಾರತ ದಾಳಿ ನಡೆಸಿತ್ತು.

ದಾಳಿಯಿಂದ ಎಷ್ಟು ಪ್ರಮಾಣದ ಹಾನಿಯಾಗಿದೆ ಎನ್ನುವುದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲದೇ ಇದ್ದರೂ ಕೆಲವು ಕಡೆ ರನ್‌ ವೇ ಹಾಳಾಗಿದ್ದಾರೆ ಕೆಲವು ಕಡೆ ವಿಮಾನಗಳು ತಂಗಿದ್ದ ಶೆಡ್ ಮೇಲೆಯೇ ಡೋನ್ ಮತ್ತು ಕ್ಷಿಪಣಿಯನ್ನು ಹಾಕಲಾಗಿತ್ತು. ಮುಖ್ಯವಾಗಿ ಸರ್ಗೋಧಾ ವಾಯುನೆಲೆ ಪಾಕಿಸ್ತಾನದ ಶಕ್ತಿಶಾಲಿ ವಾಯು ನೆಲೆಯಾಗಿದ್ದು ಭಾರತದ ವಿರುದ್ಧ ದಾಳಿ ಮಾಡುವ ಎಫ್ 16 ವಿಮಾನಗಳು ಇಲ್ಲಿಂದಲೇ ಟೇಕಾಫ್ ಆಗುತ್ತಿದ್ದವು. ಈ ನೆಲೆಯ ಮೇಲಿನ ದಾಳಿಯಿಂದ ಪಾಕ್ ಬೆಚ್ಚಿ ಬಿದ್ದಿತ್ತು. ಈ ಜಾಗವನ್ನು ಉಪಗ್ರಹದ ಮೂಲಕ ನೋಡಿದಾಗ ರನ್‌ವೇಯಲ್ಲಿ ದೊಡ್ಡ ಕುಳಿ ಬಿದ್ದಿರುವುದು ನೋಡಬಹುದು.

ಈ ಸಮಯದಲ್ಲಿಯೇ ಪಾಕಿಸ್ತಾನ ತುರ್ತು ಹಸ್ತಕ್ಷೇಪಕ್ಕಾಗಿ ಅಮೆರಿಕದ ಸಹಾಯವನ್ನು ಕೋರಿದೆ. ಹಾಗೆ ನೋಡಿದರೆ ಅಮೆರಿಕ ಮೊದಲೇ ಎರಡು ದೇಶಗಳ ಜೊತೆ ಸಂಪರ್ಕದಲ್ಲಿತ್ತು, ಆದರೆ ಈಗ ಪಾಕ್ ನೇರವಾಗಿ ಮೊರೆ ಇಟ್ಟ ಕಾರಣ ಅಧಿಕೃತವಾಗಿ ಮಧ್ಯಪ್ರವೇಶ ಮಾಡಲು ಮುಂದಾಯಿತು. ಮೇ 10 ರ ಮಧ್ಯಾಹ್ನದ ವೇಳೆಗೆ ಪಾಕಿಸ್ತಾನದ ಡಿಜಿಎಂಬ ಮೇಜರ್ ಜನರಲ್ ಕಾಶಿಫ್ ಅಬ್ದುಲ್ಲಾ ಅವರು ತಮ್ಮ ಭಾರತ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಅವರಿಗೆ ನೇರ ಕರೆ ಮಾಡಿ ಕದನ ವಿರಾಮಕ್ಕೆ ಒಪ್ಪಿಗೆ ನೀಡುವಂತೆ ಮನವಿ ಮಾಡಿದರು. ಕೊನೆಗೆ ನಂಜಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಪತ್ರಿಕಾಗೋಷ್ಠಿಯಲ್ಲಿ ಎರಡು ದೇಶಗಳ ಮಧ್ಯೆ ಕದನವಿರಾಮ ನಡೆದಿರುವ ಬಗ್ಗೆ ದೃಢಪಡಿಸಿದರು.

RELATED ARTICLES

Latest News