ಬೆಂಗಳೂರು,ಅ.31– ಕಾಂಗ್ರೆಸ್ ಹೈಕಮಾಂಡ್ ಮತ್ತು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜೋಳಿಗೆ ತುಂಬಿಸಿ, ಸಿಎಂ ಕುರ್ಚಿ ಗಿಟ್ಟಿಸಿಕೊಳ್ಳಲು ಪಾಲಿಕೆ ಅಧಿಕಾರಿ ಗಳಿಗೆ ಎಷ್ಟು ಸುಲಿಗೆ ಟಾರ್ಗೆಟ್ ಕೊಟ್ಟಿದ್ದೀರಿ? ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್ ಅಶೋಕ್ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮರಣೋತ್ತರ ಪರೀಕ್ಷೆ ವರದಿ ಪಡೆಯಲು ಲಂಚ, ಮರಣ ಪ್ರಮಾಣಪತ್ರ ಪಡೆಯಲು ಲಂಚ, ಅಂತ್ಯಸಂಸ್ಕಾರ ಮಾಡೋದಕ್ಕೆ ಲಂಚ.ನಿಮ ಕುರ್ಚಿ ಆಸೆಗೆ ಜನಸಾಮಾನ್ಯರ ರಕ್ತ ಇನ್ನೆಷ್ಟು ಹೀರುತ್ತೀರಿ ಉಪಮುಖ್ಯಮಂತ್ರಿಗಳೇ? ಎಂದು ತರಾಟೆ ತೆಗೆದುಕೊಂಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ಡಿ.ಕೆ ಶಿವಕುಮಾರ್ ಅವರೇ, ಪಾಲಿಕೆ ಶಿಕ್ಷಕರಿಗೆ 6 ತಿಂಗಳಿಂದ ಸಂಬಳ ಕೊಟ್ಟಿಲ್ಲ. ಪಾಲಿಕೆಯ ಸಶಾನ ಸಿಬ್ಬಂದಿಗೆ 8 ತಿಂಗಳಿಂದ ಸಂಬಳ ಕೊಟ್ಟಿಲ್ಲ. ಪಾಲಿಕೆಯ ಕಿರಿಯ ಆರೋಗ್ಯಾಧಿಕರಿಗಳಿಗೆ 8 ತಿಂಗಳಿಂದ ಸಂಬಳ ಕೊಟ್ಟಿಲ್ಲ ಎಂದು ವಾಗ್ದಳಿ ನಡೆಸಿದ್ದಾರೆ.
ಮಾತೆತ್ತಿದರೆ ಟನಲ್ ರೋಡು, ಸ್ಕೈ ಡೆಕ್ಕು, ಬ್ರ್ಯಾಂಡ್ ಬೆಂಗಳೂರು ಎಂದು ದೊಡ್ಡ ದೊಡ್ಡ ಮಾತು ಅಡಿ ಬೊಗಳೆ ಬಿಡುವುದಲ್ಲ ಸ್ವಾಮಿ, ಮೊದಲು ಪಾಲಿಕೆ ನೌಕರರಿಗೆ ಸರಿಯಾಗಿ ಸಾಲ ಕೊಡಿ. ನಿಮ ಘನಂದಾರಿ ಆಡಳಿತದಲ್ಲಿ ದಿನಬೆಳಗಾದರೆ ದಿನಪತ್ರಿಕೆಗಳಲ್ಲಿ , ಟಿವಿಗಳಲ್ಲಿ ಬೆಂಗಳೂರಿನ ಎಡವಟ್ಟುಗಳ ಬಗ್ಗೆ ಒಂದಲ್ಲ ಒಂದು ನಕಾರಾತಕ ಸುದ್ದಿ ಬಂದು ನಗರದ ಹೆಸರು ಹಾಳಾಗುತ್ತಿದೆ. ಒಳ್ಳೆಯ ಆಡಳಿತ ಕೊಡಲು ಸಾಧ್ಯವಾದರೆ ಮುಂದುವರೆಯಿರಿ, ಇಲ್ಲವಾದರೆ ಯಾರಾದರೂ ಸಮರ್ಥರಿಗೆ ದಾರಿ ಮಾಡಿಕೊಡಿ ಎಂದು ಅಶೋಕ್ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

