Sunday, September 8, 2024
Homeಅಂತಾರಾಷ್ಟ್ರೀಯ | Internationalಅಮೆರಿಕದಲ್ಲಿ ದುಷ್ಕರ್ಮಿಯಿಂದ ಗುಂಡಿನ ದಾಳಿ, 8 ಮಂದಿಗೆ ಗಾಯ

ಅಮೆರಿಕದಲ್ಲಿ ದುಷ್ಕರ್ಮಿಯಿಂದ ಗುಂಡಿನ ದಾಳಿ, 8 ಮಂದಿಗೆ ಗಾಯ

ರಾಚೆಸ್ಟರ್‌ ಹಿಲ್ಸ್ (ಅಮೆರಿಕ), ಜೂ.16- ಡೆಟ್ರಾಯಿಟ್‌ ಹೊರವಲಯದ ಸ್ಪ್ಲ್ಯಾಷ್‌ ಪ್ಯಾಡ್‌ ಒಂದರ ಮೇಲೆ ಬಂದೂಕುಧಾರಿಯೊಬ್ಬ ಗುಂಡಿನ ಸುರಿಮಳೆಗೈದ ಪರಿಣಾಮವಾಗಿ ಇಬ್ಬರು ಮಕ್ಕಳು ಸೇರಿದಂತೆ 8 ಮಂದಿ ಗಾಯಗೊಂಡಿದ್ದಾರೆ.

ತಲೆಗೆ ಗುಂಡೇಟು ಬಿದ್ದಿರುವ 8 ವರ್ಷದ ಓರ್ವ ಬಾಲಕನ ಸ್ಥಿತಿ ಗಂಭಿರವಾಗಿದೆ. ಈ ಪ್ರದೇಶದ ಕೆಲ ಕುಟುಂಬಗಳು ಬೇಸಿಗೆಯ ಬೇಗೆ ನಿವಾರಿಸಿಕೊಳ್ಳಲು ಸ್ಪ್ಲ್ಯಾಷ್‌ ಪ್ಯಾಡ್‌ನಲ್ಲಿ ಗುಂಪು ಗೂಡಿದಾಗ ದುಷ್ಕರ್ಮಿ ಈ ದುಷ್ಕೃತ್ಯ ಎಸಗಿದ್ದಾನೆ.

ಪೊಲೀಸರು ಶಂಕಿತನೊಬ್ಬನನ್ನು ಬೆನ್ನಟ್ಟಿದ್ದು, ಆತ ತನ್ನ ಮನೆಯಲ್ಲಿ ಆತಹತ್ಯೆಗೆ ಶರಣಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಗಾಯಾಳುಗಳಲ್ಲಿ ಕನಿಷ್ಠ ಪಕ್ಷ ಇಬ್ಬರು ಮಕ್ಕಳು ಸೇರಿದ್ದಾರೆ. ಗಾಯಾಳುಗಳ ಸಂಖ್ಯೆ 10ಕ್ಕೂ ಅಧಿಕ ಎಂದು ಶಂಕಿಸಲಾಗಿತ್ತು. ಆದರೆ ಈ ಪ್ರದೇಶದ ಆಸ್ಪತ್ರೆಗಳಲ್ಲಿ ಪರಿಶೀಲಿಸಿದ ಬಳಿಕ ಎಂಟು ಮಂದಿಗೆ ಗಾಯಗಳಾಗಿರುವುದು ದೃಢಪಟ್ಟಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

RELATED ARTICLES

Latest News