Wednesday, August 20, 2025
Homeಜಿಲ್ಲಾ ಸುದ್ದಿಗಳು | District Newsಕೋಲಾರ | Kolarಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದು ಅಣ್ಣ-ತಂಗಿ ದುರಂತ ಸಾವು

ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದು ಅಣ್ಣ-ತಂಗಿ ದುರಂತ ಸಾವು

Brother and sister die after car hits bike

ಕೋಲಾರ,ಆ.20-ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಣ್ಣ-ತಂಗಿ ಸಾವನ್ನಪ್ಪಿರುವ ದುರಂತ ಘಟನೆ ತಾಲೂಕಿನ ಶ್ರೀನಿವಾಸಪುರ ರಸ್ತೆಯಲ್ಲಿರುವ ವೀರಾಪುರ ಗೇಟ್‌ ಬಳಿಯ ನಡೆದಿದೆ. ಕೋಲಾರ ತಾಲೂಕಿನ ಕೊಂಡೇನಹಳ್ಳಿ ನಿವಾಸಿಗಳಾದ ಯಶಸ್ವಿನಿ ಬಾಯಿ (16) ಹಾಗೂ ಹರ್ಷಿತ್‌ ಸಿಂಗ್‌ (20) ಮೃತ ಅಣ್ಣ-ತಂಗಿ ಎಂದು ಗುರುತಿಸಲಾಗಿದೆ.

ಕಾಲೇಜಿಗೆ ತಂಗಿಯ ಪ್ರವೇಶ ಅರ್ಜಿ ನೀಡಿ ಮನೆಗೆ ಬೈಕ್‌ನಲ್ಲಿ ಅಣ್ಣ-ತಂಗಿ ಬರುವಾಗ ವೀರಾಪುರ ಗೇಟ್‌ ಬಳಿಯ ಮಹರ್ಷಿ ಶಾಲೆ ಬಳಿ ಇನ್ನೋವಾ ಕಾರು ಡಿಕ್ಕಿ ಹೊಡೆದಿದೆ.
ತಂದೆ, ತಾಯಿ ಇಬ್ಬರು ಕೂಲಿ ಕೆಲಸ ಮಾಡಿ ತನ್ನಿಬ್ಬರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದರು.ಯಶಸ್ವಿನಿ ಬಾಯಿ ಪಿಯು ವಿದ್ಯಾರ್ಥಿನಿಯಾದರೆ ,ಹರ್ಷಿತ್‌ ಸಿಂಗ್‌ ಪದವಿ ವ್ಯಾಸಂಗ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದಾರೆ.

ಹರ್ಷಿತ್‌ ಕಾಲೇಜು ಮುಗಿಸಿಕೊಂಡು ತಂಗಿ ಯಶಸ್ವಿನಿಯನ್ನು ಕಾಲೇಜಿಗೆ ದಾಖಲು ಮಾಡಿ ವಾಪಸ್‌‍ ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ. ಪ್ರತಿನಿತ್ಯ ಅಣ್ಣ-ತಂಗಿ ಇಬ್ಬರು ಬಸ್‌‍ನಲ್ಲೇ ಕಾಲೇಜಿಗೆ ತೆರಳುತ್ತಿದ್ದರು. ಆದ್ರೆ ತಂಗಿ ಕಾಲೇಜು ದಾಖಲಾತಿಗೆ ಕೆಲವು ದಾಖಲೆಗಳನ್ನ ಮರೆತಿದ್ದರು.

ಈ ವೇಳೆ ಯಶಸ್ವಿನಿ ಹಾಗೂ ಹರ್ಷಿತ್‌ ಮನೆಯಿಂದ ಬೈಕ್‌ನಲ್ಲಿ ಹೋಗಿ ದಾಖಲೆ ಕೊಟ್ಟು ವಾಪಸ್‌‍ ಮನೆಗೆ ತೆರಳುವ ವೇಳೆ ಅಪಘಾತ ನಡೆದಿದ್ದು,ಯಶಸ್ವಿನಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಆಸ್ಪತ್ರೆಯಲ್ಲಿ ಹರ್ಷಿತ್‌ ಸಿಂಗ್‌ ಮೃತಪಟ್ಟಿದ್ದಾನೆ.ಇದೀಗ ಇಬ್ಬರು ಮಕ್ಕಳನ್ನು ಕಳೆದುಕೊಂಡ ಪೋಷಕರು ಹಾಗು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

RELATED ARTICLES

Latest News