ಹಾಸನ,ಜು.10- ಆಸ್ತಿ ವಿಚಾರವಾಗಿ ಜನ್ಮ ಕೊಟ್ಟ ತಂದೆ ಹಾಗೂ ಅಣ್ಣನನ್ನು ತಮ್ಮನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹೊಳೆನರಸೀಪುರ ತಾಲ್ಲೂಕಿನ ಗಂಗೂರು ಗ್ರಾಮದಲ್ಲಿ ನಡೆದಿದೆ.ದೇವೇಗೌಡ (70), ಮಂಜುನಾಥ (50) ಕೊಲೆಯಾದ ದುರ್ದೈವಿಗಳು.
ಒಂದೇ ಮನೆಯಲ್ಲಿ ತಂದೆ, ತಾಯಿ ಜೊತೆ ಮಂಜುನಾಥ ವಾಸವಾಗಿದ್ದು, ಅದೇ ಮನೆಯಲ್ಲಿ ಆರೋಪಿ ಮೋಹನ್ ಕೂಡ ಪ್ರತ್ಯೇಕವಾಗಿ ವಾಸವಾಗಿದ್ದ. ಇಬ್ಬರೂ ಮಕ್ಕಳು ಕೂಡ ಅವಿವಾಹಿತರಾಗಿದ್ದರು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದಲ್ಲಿ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ನಿನ್ನೆಯೂ ಕೂಡ ಆಸ್ತಿವಿಚಾರಕ್ಕೆ ಜಗಳ ನಡೆದಿದ್ದು, ಇದರಿಂದ ರೊಚ್ಚಿಗೆದ್ದ ಆರೋಪಿ ಮೋಹನ್ ಕಂಠಪೂರ್ತಿ ಕುಡಿದುಬಂದು ವಿನಾಕಾರಣ ಜಗಳ ತೆಗೆದು ಮಾರಕಾಸ್ತ್ರಗಳಿಂದ ತಂದೆ ಹಾಗೂ ಅಣ್ಣನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ ಎನ್ನಲಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದ್ದು, ಸುದ್ದಿ ತಿಳಿದ ಕೂಡಲೇ ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-08-2025)
- ಬೆಂಗಳೂರಲ್ಲಿ ಅನಧಿಕೃತ ಪಾರ್ಕಿಂಗ್ ಮಾಡಿದ 12 ಸಾವಿರ ವಾಹನ ಸವಾರರ ವಿರುದ್ಧ ಎಫ್ಐಆರ್
- ಶೇ.50 ರಷ್ಟು ರಿಯಾಯಿತಿ ಹಿನ್ನೆಲೆಯಲ್ಲಿ ಮುಗಿಬಿದ್ದು ದಂಡ ಕಟ್ಟಿದ ವಾಹನ ಸವಾರರು
- ಶಾಂತಿಯುತ ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಆಚರಣೆಗೆ ಸೂಕ್ತ ಭದ್ರತೆ : ಆಯುಕ್ತರು
- ಸೆ.1ರಿಂದ ಬಿಜೆಪಿ ‘ಧರ್ಮಸ್ಥಳ ಚಲೋ’