ಯಾದಗಿರಿ,ಸೆ.2-ಅಣ್ಣ ಹೃದಯಾಘಾತದಿಂದ ಸಾವನ್ನಪ್ಪಿರುವ ಸುದ್ದಿ ತಿಳಿದ ತಮನಿಗೂ ಹೃದಯಾಘಾತವಾಗಿ ಮೃತಪಟ್ಟಿದ್ದು ಸಾವಿನಲ್ಲೂ ಅಣ್ತಮ್ಮ ಒಂದಾಗಿರುವ ಮನಕಲಕುವ ಘಟನೆ ನಡೆದಿದೆ.
ಸುರಪುರ ತಾಲ್ಲೂಕಿನ ಕೆಂಬಾವಿ ಗ್ರಾಮದ ನಿವಾಸಿಗಳಾದ ಅಣ್ಣ ಶಂಶುದ್ದೀನ್ (50) ಮತ್ತು ತಮ ಇರ್ಫಾನ್ (45) ಮೃತಪಟ್ಟವರು.ನಿನ್ನೆ ಸಂಜೆ ಶಂಶುದ್ದೀನ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಅಣ್ಣನ ಸಾವಿನ ಸುದ್ದಿ ತಿಳಿದ ತಮ ಇರ್ಫಾನ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಒಂದೇ ದಿನ ಇಬ್ಬರು ಮಕ್ಕಳ ಸಾವಿನಿಂದ ಕುಟುಂಬವೇ ಶೋಕ ಸಾಗರದಲ್ಲಿ ಮುಳುಗಿದೆ. ಕೆಂಬಾವಿ ಗ್ರಾಮದಲ್ಲಿ ಸಹೋದರರ ಸಾವಿನಿಂದ ನೀರವ ಮೌನ ಆವರಿಸಿದೆ.
ಇತ್ತೀಚಿನ ದಿನಗಳಲ್ಲಿ ಹಣ-ಆಸ್ತಿಗಾಗಿ ಅಣ್ಣ ತಮಂದಿರು ಹೊಡೆದಾಡಿಕೊಳ್ಳುವ ಘಟನೆಗಳು ನೋಡುತ್ತಿರುತ್ತೇವೆ. ಆದರೆ ಅಣ್ಣನ ಸಾವಿನ ಸುದ್ದಿ ಕೇಳಿದ ತಮನೂ ಸಹ ಹಠಾತ್ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವುದು ವಿಷಾದಕರ.ಕೆಂಬಾವಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
- ಧರ್ಮಸ್ಥಳ ಪ್ರಕರಣವನ್ನು ಎನ್ಐಎಗೆ ವಹಿಸುವ ಅಗತ್ಯವಿಲ್ಲ : ಪರಮೇಶ್ವರ್
- ಟಿ20 ಕ್ರಿಕೆಟ್ಗೆ ಮಿಚೆಲ್ ಸ್ಟಾರ್ಕ್ ವಿದಾಯ
- ಶಾಸಕ ಪಪ್ಪಿ ಮನೆ ಮೇಲೆ ಮತ್ತೆ ಇಡಿ ದಾಳಿ
- ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಹಾರೈಕೆ
- ಉದ್ಯಮಿ ಅಪಹರಿಸಿ ಜೀವ ಬೆದರಿಕೆ ಹಾಕಿ 3 ಲಕ್ಷ ರೂ. ಪಡೆದಿದ್ದ ನಾಲ್ವರು ರೌಡಿ ಸೇರಿ 6 ಮಂದಿ ಅರೆಸ್ಟ್