ಬೆಂಗಳೂರು,ಸೆ.18- ಬಿಗ್‌ಬಾಸ್‌ನ ರಂಜಿತ್ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.ರಂಜಿತ್‌ನಿಂದ ನನಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಅವರ ಭಾವ ಜಗದೀಶ್‌ರವರು ದೂರು ಕೊಟ್ಟಿದ್ದಾರೆ.
ಅಮೃತಹಳ್ಳಿ ಫ್ಲ್ಯಾಟ್‌ವೊಂದರಲ್ಲಿ 2018 ರಿಂದ ಭಾವ ಜಗದೀಶ್ ಕುಟುಂಬ ವಾಸವಾಗಿದ್ದು, 2025 ರಿಂದ ಇದೇ ಫ್ಲ್ಯಾಟ್‌ನಲ್ಲಿ ಅಕ್ಕ, ಭಾವನ ಜೊತೆ ರಂಜಿತ್ ವಾಸವಿದ್ದರು.ಇದೀಗ ಈ ಮನೆ ನನ್ನದು ಎಂದು ಅಕ್ಕ, ತಮನ ನಡುವೆ ಗಲಾಟೆ ನಡೆದಿದೆ. ಆ ವೇಳೆ ರಂಜಿತ್ ಹಾಗೂ ಅವರ ಪತ್ನಿ ಜೊತೆ ಅಕ್ಕ ಗಲಾಟೆ ಮಾಡಿ ಕೈ ಕೈ ಮಿಲಾಯಿಸಿಕೊಂಡಿದ್ದಾರೆ.
ಈ ಮನೆ ನನ್ನದು ಎಂದು ಮನೆ ಬಿಟ್ಟು ಹೋಗದೆ ರಂಜಿತ್ ಜೀವ ಬೆದರಿಕೆ ಹಾಕಿದ್ದಾನೆಂದು ಭಾವ ಜಗದೀಶ್ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಈ ನಡುವೆ ರಂಜಿತ್ ಅವರ ಪತ್ನಿ ಸಹ ದೂರು ನೀಡಿದ್ದಾರೆ.
ಈ ಎರಡೂ ದೂರುಗಳನ್ನು ಪೊಲೀಸರು ಎನ್‌ಸಿಆರ್ ಮಾಡಿಕೊಂಡಿದ್ದಾರೆ. ನಂತರ ರಂಜಿತ್ ಅವರನ್ನು ಪೊಲೀಸರು ಠಾಣೆಗೆ ಕರೆಸಿ, ಮತ್ತೊಮೆ ಗಲಾಟೆ ಮಾಡಿಕೊಳ್ಳಬೇಡಿ, ಇಬ್ಬರೂ ಕೂತು ಇತ್ಯರ್ಥಪಡಿಸಿಕೊಳ್ಳಿ, ಇಲ್ಲದಿದ್ದರೆ ನ್ಯಾಯಾಲಯದಲ್ಲಿ ವಿವಾದ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿ ಕಳುಹಿಸಿದ್ದಾರೆ.