ಬೆಳಗಾವಿ, ಡಿ 22 (ಪಿಟಿಐ)- ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ತಮನ ಮೇಲೆಯೇ ಟ್ರ್ಯಾಕ್ಟರ್ ಹರಿಸಿ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ತನ್ನ ಸಹೋದರ ಗೋಪಾಲ್ ಎಂಬಾತನನ್ನು ಕೊಲೆ ಮಾಡಿದ ಆರೋಪಿಯನ್ನು 30 ವರ್ಷದ ಮಾರುತಿ ಬಾವಿಹಾಳ್ ಎಂದು ಗುರುತಿಸಲಾಗಿದೆ.
ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಸಹೋದರನನ್ನು ಕೊಲೆ ಮಾಡಿದ ಬಾವಿಹಾಳ್ನನ್ನು ಪೊಲೀಸರು ಬಂಧಿಸಿದ್ದಾರೆ.ಸಹೋದರರ ನಡುವೆ ಆಸ್ತಿ ವಿವಾದ ಇತ್ತು. ಹೀಗಾಗಿ ಅವರಿಬ್ಬರ ನಡುವೆ ಪದೇ ಪದೇ ಜಗಳವಾಗುತಿತ್ತು. ನಿನ್ನೆ ಕೂಡ ಇದೇ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದು ಅದು ವಿಕೋಪಕ್ಕೆ ಹೋಗಿತ್ತು.
ಜಗಳದ ಸಂದರ್ಭದಲ್ಲಿ ಸಹನೆ ಕಳೆದುಕೊಂಡ ಬಾವಿಹಾಳ್ ಟ್ರ್ಯಾಕ್ಟರ್ ಚಾಲನೆ ಮಾಡಿ ಸಹೋದರ ಗೋಪಾಲ್ ಮೇಲೆ ಹರಿಸಿದ್ದರಿಂದ ಆತ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.