ನವದೆಹಲಿ,ಮೇ.11-ಪಾಕಿಸ್ತಾನದ ಗುಂಡಿನ ದಾಳಿಯಲ್ಲಿ ಬಿಎಸ್‌ಎಫ್ ಯೋಧ ಹುತಾತ್ಮನಾಗಿದ್ದು, ಏಳು ಯೋಧರು ಗಾಯಗೊಂಡಿದ್ದಾರೆ. ಆರ್‌ಎಸ್‌ಪುರ ಸೆಕ್ಟರ್‌ನಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ.
ಸೇನೆ ಪ್ರಕಾರ ಬಿಎಸ್‌ಎಫ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ಮೊಹಮದ್ ಇಮೇಯಾಜ್ ಹುತಾತ್ಮರಾಗಿದ್ದಾರೆ ಎಂದು ಹಿರಿಯ ಸೇನಾ ಅಧಿಕಾರಿ ತಿಳಿಸಿದ್ದಾರೆ. ಗಡಿ ರೇಖೆಯಲ್ಲಿ ಪಾಕಿಸ್ಥಾನದ ನಿರಂತರ ಗುಂಡಿನ ದಾಳಿಗೆ ತಿರುಗೇಟು ನೀಡಿದರು ಕೂಡ ಕೆಲವೆಡೆ ಯೋಧರು ಗಾಯಗೊಂಡಿದ್ದಾರೆ.
ಗಾಯಾಳು ಯೋಧರರಿಗೆ ಚಿಕಿತ್ಸೆ ಮುಂದುವರೆದಿದ್ದು.ಸೇನೆ ಮುಂದಿನ ಕಾರ್ಯಾಚರಣೆಗೆ ಎದುರು ನೋಡುತ್ತಿದೆ.