Thursday, September 18, 2025
Homeಬೆಂಗಳೂರುಬುಲೆಟ್ ಬೈಕ್-ಸ್ಕೂಟರ್ ಡಿಕ್ಕಿ : ಬಿಎಸ್‍ಎಫ್ ಯೋಧ ಸೇರಿ ಇಬ್ಬರು ಸಾವು

ಬುಲೆಟ್ ಬೈಕ್-ಸ್ಕೂಟರ್ ಡಿಕ್ಕಿ : ಬಿಎಸ್‍ಎಫ್ ಯೋಧ ಸೇರಿ ಇಬ್ಬರು ಸಾವು

ಬೆಂಗಳೂರು,ಅ.29-ಬೈಕ್ ಹಾಗೂ ಮೊಪೆಡ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬಿಎಸ್‍ಎಫ್ ಯೋಧ ಸೇರಿದಂತೆ ಇಬ್ಬರು ಮೃತಪಟ್ಟಿದ್ದು ಒಬ್ಬ ಗಾಯಗೊಂಡಿರುವ ಘಟನೆ ಕಳೆದ ರಾತ್ರಿ ಬಳ್ಳಾರಿ ರಸ್ತೆಯ ಗಡಿ ಭದ್ರತಾ ಪಡೆಯ ಗೇಟ್-2ರ ಬಳಿ ಸಂಭವಿಸಿದೆ.

ಬಾಗಲೂರಿನ ನಿವಾಸಿ ಹಾಗೂ ಬಿಎಸ್‍ಎಫ್ ಕೇಂದ್ರದಲ್ಲಿ ಹೆಡ್ ಕುಕ್ ಆಗಿ ಸೇವೆ ಸಲ್ಲಿಸುತ್ತಿದ್ದ ಸುಧಾಕರ್ ಹಾಗೂ ಯೂಟೂಬರ್ ಗಿರೀಶ್ ಅಲಿಯಾಸ್ ಗಣಿ ಮೃತ ದುರ್ದೈವಿಗಳಾಗಿದ್ದಾರೆ. ಕಳೆದ ರಾತ್ರಿ 10.30ರ ಸಂದರ್ಭದಲ್ಲಿ ತಮ್ಮ ಬುಲೆಟ್ ಬೈಕ್‍ನಲ್ಲಿ ಗಿರಿ ಮತ್ತು ಆತನ ಸ್ನೇಹಿತ ಬಾಗಲೂರು ಕಡೆಗೆ ಹೋಗುತ್ತಿದ್ದರು.

ಹಿಂದುಳಿದ ವರ್ಗ ಆಯೋಗದ ವರದಿ ಸ್ವೀಕರಿಸುತ್ತೇವೆ : ಸಿದ್ದರಾಮಯ್ಯ

ಈ ವೇಳೆ ಗೇಟ್-2ರಿಂದ ಮುಖ್ಯರಸ್ತೆಗೆ ತಮ್ಮ ಆ್ಯಕ್ಟಿವಾ ಹೋಂಡಾದಲ್ಲಿಸುಧಾಕರ್ ಹೊರ ಬಂದಾಗ ಪರಸ್ಪರ ಡಿಕ್ಕಿ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡ ಮೂವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಸುಧಾಕರ್ ಹಾಗೂ ಗಿರಿ ಮೃತಪಟ್ಟಿದ್ದಾರೆ.

ಮತ್ತೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ತಿಳಿದ ಯಲಹಂಕ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News