ಮುಂಬೈ,ಫೆ.25- ರಾಷ್ಟ್ರಾದ್ಯಂತ ಸಂಚಲನ ಮೂಡಿಸಿದ್ದ ಮಹಾರಾಷ್ಟ್ರದ ಬುಲ್ಬನಾ ಜಿಲ್ಲೆಯ ಹಠಾತ್ ಕೂದಲುರುವ ಘಟನೆಗಳಿಗೆ ಪಂಜಾಬ್ ಮತ್ತು ಹರಿಯಾಣದಿಂದ ಪೂರೈಕೆಯಾದ, ಸ್ಥಳೀಯ ನ್ಯಾಬೆಲೆ ಅಂಗಡಗಳಿಂದ ವಿತರಣೆಯಾದ ಗೋಧಿಯಲ್ಲಿನ ಅಧಿಕ ಸೆಲೆನಿಯಂ ಅಂಶವೇ ಕಾರಣ ಎಂದು ವೈದ್ಯಕೀಯ ತಜ್ಞರ ವರದಿ ತಿಳಿಸಿದೆ.
ಸೆಲೆನಿಯಂ ಮಣ್ಣು ಮತ್ತು ನೈಸರ್ಗಿಕವಾಗಿ ನೀರಿನಲ್ಲಿ ಮತ್ತು ಕೆಲವು ಆಹಾರ ಪದಾರ್ಥಗಳಲ್ಲಿ ಕಂಡುಬರುವ ಒಂದು ಖನಿಜವಾಗಿದೆ. ಚಯಪಚಯ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸೆಲೆನಿಯಂ ಸಣ್ಣ ಪ್ರಮಾಣವಷ್ಟೇ ವ್ಯಕ್ತಿಗಳಲ್ಲಿದ್ದರೆ ಸಾಕಾಗುತ್ತದೆ.
2024ರ ಡಿಸೆಂಬ್‌ನಿಂದ ಈ ವರ್ಷದ ಜನವರಿ ನಡುವೆ ಬುಲ್ದಾನಾದ 18 ಗ್ರಾಮಗಳ 279 ವ್ಯಕ್ತಿಗಳಲ್ಲಿ ಹಠಾತ್ ಕೂದುಲು ಉದುರುವಿಕೆ ಬಗ್ಗೆ ವರದಿಯಾಗಿತ್ತು. ಬಾಧಿತ ವ್ಯಕ್ತಿಗಳಲ್ಲಿ ಅನೇಕರು ಕಾಲೇಜು ವಿದ್ಯಾರ್ಥಿಗಳು ಮತ್ತು ಯುವತಿಯರಅಗಿದ್ದು, ಈ ಸಮಸ್ಯೆಯಿಂದಾಗಿ ಶೈಕ್ಷಣಿಕ ವ್ಯಾಸಂಗ ಮುಂದುವರಿಸಲಾಗದಿರುವಂತೆ ಮತ್ತು ಮದುವೆ ರದ್ದತಿಯಂತಹ ಗಣನೀಯ ಸಾಮಾಜಿಕ ಸವಾಲುಗಳನ್ನು ಎದುರಿಸಬೇಕಾಗಿತ್ತು.
ಮುಜುಗರ ತಪ್ಪಿಸಿಕೊಳ್ಳಲು ಅಲೋಪೇಶಿಯಾ ಬಾಧಿತರಲ್ಲಿ ಹಲವು ತಮ್ಮ ಇಈ ತಲೆಯ ಕೇಶ ಮುಂಡನ ಮಾಡಿಸಿಕೊಂಡಿದ್ದರು. ಬಾಧಿತ ಸ್ಥಳಗಳಿಗೆ ತಲುಪಿ ಮಾದರಿಗಳನ್ನು ಸಂಗ್ರಹಿಸಿದ ಬಳಿಕ ವ್ಯಕ್ತಿಗಳಲ್ಲಿ ಮುಖ್ಯವಾಗಿ ಯುವತಿಯರಲ್ಲಿ ತಲೆನೋವು, ಜ್ವರ, ತಲೆಕೆರೆತ, ಕೆಲವು ಪ್ರಕರಣಗಳಲ್ಲಿ ವಾಂತಿ ಮತ್ತು ಬೇಧಿಯಂತರ ರೋಗಲಕ್ಷಣಗಳು ಕಂಡುಬಂದಿದ್ದವು ಎಂದು ರಾಯಘಡದ ಬವಾಸ್ಕರ್ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಎಂಡಿ ಡಾಹಿಮ್ಮತ್ ರಾವ್ ಬವಾಸ್ಕರ್ ತಿಳಿಸಿದ್ದಾರೆ.