ಬೆಂಗಳೂರು, ಅ.29- ಇನ್ನು ಮುಂದೆ ಖಾಸಗಿ ಬಸ್‌ಗಳಲ್ಲಿ ಬಲ್ಕ್ ಮೊಬೈಲ್ ಸಾಗಾಟಕ್ಕೆ ನಿಷೇಧ ಹೇರಲಾಗಿದೆ.ಕರ್ನೂಲ್ ಬಳಿ ಸಂಭವಿಸಿದ ಖಾಸಗಿ ಬಸ್ ಅಪಘಾತದಲ್ಲಿ 20 ಮಂದಿ ಪ್ರಯಾಣಿಕರು ಜೀವಂತ ದಹನವಾದ ಘಟನೆ ನಡೆದ ಎಚ್ಚೆತ್ತುಕೊಂಡಿರುವ ಸಾರಿಗೆ ಇಲಾಖೆ ಇಂತಹ ಮಹತ್ವದ ತೀರ್ಮಾನ ಕೈಗೊಂಡಿದೆ.
ಕರ್ನೂಲ್ ಪ್ರಕರಣದ ನಂತರ ಖಾಸಗಿ ಬಸ್‌ಗಳಲ್ಲಿ ಬಲ್‌್ಕ ಮೊಬೈಲ್‌ಫೋನ್‌ಗಳ ಸಾಗಾಟಕ್ಕೆ ನಿಷೇಧ ಹೇರಲಾಗಿದೆ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತೆ ಓಂಕಾರೇಶ್ವರಿ ತಿಳಿಸಿದ್ದಾರೆ. ಕರ್ನೂಲ್ ಬಳಿ ಸಂಭವಿಸಿದ ಅವಘಡದಲ್ಲಿ 20 ಅಮಾಯಕರು ಸಜೀವ ದಹನವಾಗಲು ಆ ಬಸ್‌ನಲ್ಲಿ ಸಾಗಿಸಲಾಗುತ್ತಿದ್ದ 100 ಕ್ಕೂ ಹೆಚ್ಚು ಮೊಬೈಲ್‌ಗಳ ಸ್ಫೋಟವೇ ಕಾರಣ ಎನ್ನುವುದು ತನಿಖೆಯಿಂದ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಬಸ್ ಗೆ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲೇ ರಾಶಿ ರಾಶಿ ಮೊಬೈಲ್‌ಗಳು ಸ್ಫೋಟಗೊಂಡಿದ್ದವು. ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗಬಾರದು ಎಂಬ ಉದ್ದೇಶದಿಂದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಇದರ ಜೊತೆಗೆ ಪ್ರತಿ ಕ್ಯಾಬಿನ್‌ಗೆ ಫೈರ್ ಅಲರ್ಟ್ ಅಳವಡಿಸುವುದು, ಬೆಂಕಿ ಹತ್ತಿಕೊಳ್ಳದ ಕರ್ಟನ್ ಬಳಕೆ ಮಾಡುವಂತೆಯೂ ಖಾಸಗಿ ಬಸ್ ಮಾಲೀಕರಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
