Thursday, January 16, 2025
Homeರಾಷ್ಟ್ರೀಯ | Nationalಬಸ್‍ಗೆ ಗುದ್ದಿದ ಟ್ರಕ್ : 12 ಮಂದಿ ಸಾವು

ಬಸ್‍ಗೆ ಗುದ್ದಿದ ಟ್ರಕ್ : 12 ಮಂದಿ ಸಾವು

ಗೋಲಾಘಾಟ್, ಜ.3 ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಕಲ್ಲಿದ್ದಲು ತುಂಬಿದ ಟ್ರಕ್ ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 12 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 30 ಮಂದಿ ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ ದೇಗಾರ್ಂವ್ ಬಳಿಯ ಬಲಿಜಾನ್ ಎಂಬಲ್ಲಿ 45 ಜನರಿದ್ದ ಬಸ್‍ಗೆ ಟ್ರಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಗೋಲಘಾಟ್ ಪೊಲೀಸ್ ವರಿಷ್ಠಾದಿಕಾರಿ ರಾಜೇನ್ ಸಿಂಗ್ ತಿಳಿಸಿದ್ದಾರೆ.

ಅಪಘಾತದಲ್ಲಿ 12 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ ತನಿಖೆ ನಡೆಯುತ್ತಿದೆ ಮತ್ತು ಹೆಚ್ಚಿನ ವಿವರಗಳನ್ನು ನಂತರ ತಿಳಿಸಲಾಗುವುದು ಎಂದು ಸಿಂಗ್ ಹೇಳಿದರು.
ಜೋರ್ಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹಿರಿಯ ವೈದ್ಯರು ಸುದ್ದಿಗಾರರೊಂದಿಗೆ ಮಾತನಾಡಿ, ಗಾಯಗೊಂಡ 30 ಜನರು ಆರೋಗ್ಯ ಸೌಲಭ್ಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ನಾವು ಅವರ ಮೇಲೆ ನಿಗಾ ವಹಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಹಿಂದೂ ಕಾರ್ಯಕರ್ತರ ಬಂಧನ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಯ ಪ್ರಕಾರ, ಮುಂಜಾನೆ 4:30 ರ ಸುಮಾರಿಗೆ ಗೋಲಾಘಾಟ್‍ನ ಕಮರ್‍ಗಾಂವ್‍ನಿಂದ ಪಿಕ್ನಿಕ್‍ಗಾಗಿ ತಿನ್ಸುಕಿಯಾ ಜಿಲ್ಲೆಯ ತಿಲಿಂಗ ಮಂದಿರಕ್ಕೆ ತೆರಳುತ್ತಿದ್ದ ಬಸ್ ಟ್ರಕ್‍ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ದಟ್ಟ ಮಂಜಿನ ನಡುವೆ ಎರಡೂ ವಾಹನಗಳು ಹೆಚ್ಚಿನ ವೇಗದಲ್ಲಿ ಚಲಿಸುತ್ತಿದ್ದವು ನಾಲ್ಕು-ಪಥದ ಹೆದ್ದಾರಿಯ ಒಂದು ಭಾಗದಲ್ಲಿ ರಸ್ತೆ ಸ್ವಲ್ಪ ಹಾಳಾಗಿತ್ತು ಇದರಿಂದ ಟ್ರಕ್ ಜೋರ್ಹತ್ ದಿಕ್ಕಿನಿಂದ ತಪ್ಪು ಭಾಗದಲ್ಲಿ ಬಂದು ಸರಿಯಾದ ಮಾರ್ಗದಲ್ಲಿದ ಬಸ್‍ಗೆ ಗುದ್ದಿದೆ ಎಂದು ತಿಳಿಸಿದ್ದಾರೆ.

RELATED ARTICLES

Latest News