ಬೆಂಗಳೂರು,ಆ.8-ಕರ್ನಾಟಕದ ಕೆಲವು ಕಾಂಗ್ರೆಸ್ ಮುಖಂಡರು ಕೊಟ್ಟಿರುವುದನ್ನೇ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದಾಖಲೆ ಎಂದುಕೊಂಡಿದ್ದಾರೆ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಏನೋ ಕಡಿದು ಗುಡ್ಡೆ ಹಾಕಿದವರಂತೆ ಮಾತನಾಡುತ್ತಿದ್ದಾರೆ. ಈಗಾಗಲೇ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಅವರು ಎತ್ತಿರುವ ಪ್ರಶ್ನೆಗಳಿಗೆ ಏಕೆ ಉತ್ತರಿಸಿಲ್ಲ ಎಂದು ಪ್ರಶ್ನಿಸಿದರು.ರಾಹುಲ್ ಗಾಂಧಿ ಪ್ರತಿಪಕ್ಷದ ನಾಯಕರು. ಅವರಿಗೆ ಅವರದೇ ಆದ ಜವಾಬ್ದಾರಿ ಇದೆ. ಬರೆದುಕೊಟ್ಟಿದ್ದನ್ನು ಮೂರ್ಖರಂತೆ ಓದಿ ಅಪಹಾಸ್ಯಕ್ಕೆ ಗುರಿಯಾಗಬಾರದು. ಮತಗಳ್ಳತನ ನಡೆದಿದ್ದರೆ ಈವರೆಗೂ ಆಯೋಗಕ್ಕಾಗಲಿ ಇಲ್ಲವೇ ನ್ಯಾಯಾಲಯದಲ್ಲಿ ಏಕೆ ಪ್ರಶ್ನೆ ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ನಿನ್ನೆ ದಿನ ರಾಹುಲ್ ಗಾಂಧಿ ಅವರು ದೆಹಲಿಯಲ್ಲಿ ಕರ್ನಾಟಕದಲ್ಲಿ ಸಹ ಬಹಳಷ್ಟು ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ. ನಕಲಿ ಮತದಾರರು ಸೇರಿದ್ದಾರೆ ಅಂತ ಹೇಳಿದ್ದಾರೆ. ರಾಹುಲ್ ಗಾಂಧಿ ಹೇಳಿಕೆ ನಂತರ ಕಾಂಗ್ರೆಸ್ ಹಿರಿಯ ನಾಯಕರು ಮೂರ್ಖರಂತೆ ಪ್ರಧಾನಿ ರಾಜೀನಾಮೆ ಕೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ಅದರ ಬಗ್ಗೆ ಅರವಿಂದ ಲಿಂಬಾವಳಿ ಅವರು ಮಾತನಾಡುತ್ತಾರೆ.
ನಕಲಿ ಮತದಾರರ ವಿಚಾರ ಇಟ್ಟುಕೊಂಡು ಚುನಾವಣಾ ಆಯೋಗ ಎಸ್‌ಐಆರ್‌ಮಾಡುತ್ತಿದೆ. ಬಿಹಾರದಲ್ಲಿ ವೋಟರ್ ಲೀಸ್ಟ್ ಸರಿ ಮಾಡಿ ಎಂದಿದ್ದಾರೆ. ಹಾಗಾದರೆ ಚುನಾವಣಾ ಆಯೋಗಕ್ಕೆ ಯಾಕೆ ಮನವಿ ಮಾಡಿದ್ದೀರಿ? ಎಂದು ಪ್ರಶ್ನೆ ಮಾಡಿದರು.
ದಿ.ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಮಮತ ಬ್ಯಾನರ್ಜಿ ಅವರು ಅಕ್ರಮ ಮತದಾರರಿದ್ದಾರೆ ಸರ್ವೆ ಮಾಡಬೇಕು ಎನ್ನುತ್ತಿದ್ದರು. ಆಗ ಸೋಮನಾಥ ಚಟರ್ಜಿ ಅವರು ಸ್ಪೀಕರ್ ಆಗಿದ್ದರು. ಮಮತ ಬ್ಯಾನರ್ಜಿ ಮುಖದ ಮೇಲೆ ಪೇಪರ್ ಎಸೆದಿದ್ರಿ, ಅದು ಮರೆತೋಯ್ತಾ ಕಾಂಗ್ರೆಸ್‌ಗೆ ಎಂದು ಪ್ರಸ್ತಾಪಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್16 ಸ್ಥಾನ ಗೆಲ್ಲಲಿದೆ ಎಂದು ಯಾವ ಸಮೀಕ್ಷೆಯೂ ಹೇಳಿರಲಿಲ್ಲ. ಯಡಿಯೂರಪ್ಪ ಅವರು ಲೋಕಸಭಾ ಚುನಾವಣೆಯಲ್ಲಿ ಓಡಾಡಿದರು. ಈ ರೀತಿ ಮನಬಂದಂತೆ ಮಾತಾಡಿದರು.
ಸಂಜೆ 5 ಗಂಟೆ ನಂತರ ಮತದಾನ ಸಂಖ್ಯೆ ಹೆಚ್ಚಾಗಿದೆ ಎಂದರು ಇದು ಮೂರ್ಖತನದ ಹೇಳಿಕೆ. ಎಲ್ಲಾ ಕಡೆ ಸಂಜೆ ಮೇಲೆ ಜನ ಹೆಚ್ಚು ಬಂದು ಮತದಾನ ಮಾಡುತ್ತಾರೆ. ಸೋಲಿನ ಹತಾಶೆಯಿಂದ ರಾಹುಲ್ ಗಾಂಧಿ ಈ ರೀತಿ ಮಾತಾಡಿದ್ದಾರೆ ಎಂದು ವ್ಯಂಗ್ಯವಾಡಿದರು.ಇದು ಸೋಲಿನ ಹತಾಶೆಯಿಂದ ಮತದಾರರಿಗೆ ಮಾಡಿದ ಅಪಮಾನ. ಮತದಾನ ಮುಗಿದು ಫಲಿತಾಂಶ ಬಂದ ಬಳಿಕ ಆರೋಪ ಮಾಡಬಹುದಿತ್ತು. ಏನೋ ಕಂಡು ಹಿಡಿದವರಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಯಾವ ಕ್ಷೇತ್ರದಲ್ಲಿ ಅತಿ ಹೆಚ್ಚು ಅಲ್ಪಸಂಖ್ಯಾತರಿರೋ ಕ್ಷೇತ್ರದಲ್ಲಿ ಎಷ್ಟು ನಕಲಿ ಮತದಾರರಿದ್ದಾರೆ. ಅದರ ಬಗ್ಗೆಯೂ ತನಿಖೆ ನಡೆಸಲಿ. ಲೋಕಸಭೆಯಲ್ಲಿ ಎದುರಿಸಲು ತಾಕತ್ ಇಲ್ಲ. ಲೋಕಸಭೆಯಲ್ಲಿ ಚರ್ಚೆ ಮಾಡುವ ಧೈರ್ಯ ಇಲ್ಲ ಎಂದು ಕಾಲೆಳೆದಿದೆ. ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ವಿರುದ್ಧದ ಎಫ್‌ಐಆರ್ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಚಿಕ್ಕಬಳ್ಳಾಪುರದಲ್ಲಿ ಮಹಿಳೆ ಸುಧಾಕರ್ ಹೆಸರು ತೆಗೆದುಕೊಂಡಿರಲಿಲ್ಲ ಎಂಬ ಮಾಹಿತಿ ಇದೆ. ಇದನ್ನು ಎದುರಿಸಲು ಸುಧಾಕರ್ ಅವರಿಗೆ ಶಕ್ತಿ ಇದೆ. ಅವರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ಮಾಡಲಾಗಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಧರ್ಮಸ್ಥಳದ ಗಲಾಟೆ, ಎಸ್‌ಡಿ ಪಿಐ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು, ಸತ್ಯ ಹೊರಬರಬೇಕು ಎಂಬುದು ನಮ ನಿಲುವು. ಹಾಗಂತ ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ಅಪಪ್ರಚಾರ ಮಾಡಿದರೆ ನೋಡಿಕೊಂಡು ಸುಮನೆ ಕುಳಿತುಕೊಳ್ಳಲು ಆಗುವುದಿಲ್ಲ ಎಂದರು.
ಮಾಧ್ಯಮದವರ ಮೇಲಿನ ದಾಳಿ ಸರಿಯಲ್ಲ. 13 ಪಾಯಿಂಟ್ ಅಲ್ಲ ಇನ್ನು ಬೇಕಾದರೂ 20 ಪಾಯಿಂಟ್ ಹುಡುಕಲಿ. ನಿಸ್ಪಕ್ಷಪಾತ ತನಿಖೆಯಾಗುವಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು. ಆದರೆ ಹಿಂದುತ್ವದ ಹಾಗೂ ಧಾರ್ಮಿಕ ಭಾವನೆಗೆ ದಕ್ಕೆಯಾದರೆ ನಾವು ಸಹಿಸುವುದಿಲ್ಲ ಎಂದು ವಿಜೇಯಂದ್ರ ಎಚ್ಚರಿಸಿದರು.