Wednesday, November 13, 2024
Homeರಾಜಕೀಯ | Politicsಸಿದ್ದರಾಮಯ್ಯನವರ ಬೆದರಿಕೆಗೆ ಜಗ್ಗುವುದಿಲ್ಲ, ಪಾದಯಾತ್ರೆ ನಿಲ್ಲಲ್ಲ : ವಿಜಯೇಂದ್ರ ಸವಾಲು

ಸಿದ್ದರಾಮಯ್ಯನವರ ಬೆದರಿಕೆಗೆ ಜಗ್ಗುವುದಿಲ್ಲ, ಪಾದಯಾತ್ರೆ ನಿಲ್ಲಲ್ಲ : ವಿಜಯೇಂದ್ರ ಸವಾಲು

ಬೆಂಗಳೂರು,ಆ.3- ಭ್ರಷ್ಟಾಚಾರದ ಬಗ್ಗೆ ನಾವು ಮಾತನಾಡಿದರೆ ನಮಗೆ ಬೆದರಿಕೆ ಹಾಕಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆದರಿಕೆಗೆ ಹೆದರಿ ನಾವು ಪಾದಯಾತ್ರೆ ನಿಲ್ಲಿಸುವುದಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬಹಿರಂಗ ಸವಾಲು ಹಾಕಿದ್ದಾರೆ.

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಗೆ ಒತ್ತಾಯಿಸಿ ಜೆ.ಕೆ.ಗ್ರ್ಯಾಂಡ್‌ ಅರೇನ ಸೆಂಟರ್‌ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಮುಡಾ ಹಗರಣದ ಬಗ್ಗೆ ಪ್ರಸ್ತಾಪಿಸಿದರೆ ನಮಗೆ ಸಿದ್ದರಾಮಯ್ಯನವರು ಬೆದರಿಕೆ ಹಾಕುತ್ತಿದ್ದಾರೆ. ನಿಮ ಗೊಡ್ಡು ಬೆದರಿಕೆಗೆ ಹೆದರಿ ನಾವು ಪಾದಯಾತ್ರೆ ನಿಲ್ಲಿಸುತ್ತೇವೆ ಎಂದುಕೊಂಡಿದ್ದರೆ ಅದು ನಿಮ ಭ್ರಮೆ ಎಂದು ತಿರುಗೇಟು ನೀಡಿದರು.

ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸುವುದಿಲ್ಲ. ಎಷ್ಟೇ ಸವಾಲುಗಳು ಬಂದರೂ ಅದನ್ನು ಎದರಿಸುವ ಶಕ್ತಿ ನಮಗಿದೆ. ಸಮಾಜವಾದಿ ಎನ್ನುತ್ತಿರುವ ಸಿದ್ದರಾಮಯ್ಯನವರ ಮುಖವಾಡವು ಕಳಚಿ ಬಿದ್ದಿದೆ ಎಂದು ವಾಗ್ದಾಳಿ ನಡೆಸಿದರು.

ಮುಡಾ ಹಗರಣದಲ್ಲಿ ಖುದ್ದು ಸಿದ್ದರಾಮಯ್ಯನವರ ಕುಟುಂಬದವರೇ ಸಿಕ್ಕಿಕೊಂಡಿದ್ದಾರೆ. ಈ ಪ್ರಕರಣದ ಬಗ್ಗೆ ನೀವು ಏಕೆ ಮಾತನಾಡುತ್ತಿಲ್ಲ ಎಂದು ಕಾಂಗ್ರೆಸ್‌‍ ಶಾಸಕರೇ ನಮಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌‍ ಎಂದರೆ ಭ್ರಷ್ಟಾಚಾರ. ಭ್ರಷ್ಟಾಚಾರ ಎಂದರೆ ಕಾಂಗ್ರೆಸ್‌‍. ರಾಜ್ಯಪಾಲರು ನೀಡಿರುವ ಒಂದೇ ಒಂದು ಶೋಕಾಸ್‌‍ ನೋಟಿಸ್‌‍ಗೆ ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್‌‍ ಸರ್ಕಾರದ ಜಂಘಾಬಲವೇ ಉಡುಗಿ ಹೋಗಿದೆ. ಈಗ ನಮ ಮೇಲೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮುಡಾ ಹಗರಣದ ಬಗ್ಗೆ ಸದನದಲ್ಲಿ ನಿಲುವಳಿ ಸೂಚನೆ ಮಂಡಿಸಿದರೆ ಅಲ್ಲಿಯೂ ನಮಗೆ ಅವಕಾಶ ಸಿಗುವುದಿಲ್ಲ. ನೂರೊಂದು ಕಾರಣಗಳನ್ನು ನೀಡಿ ನಿಲುವಳಿ ಸೂಚನೆಯನ್ನು ತಿರಸ್ಕರಿಸಿದರು. ಹೀಗಾಗಿ ಪಾದಯಾತ್ರೆ ಹಮಿಕೊಂಡಿದ್ದೇವೆ ಎಂದು ಸಮರ್ಥಿಸಿಕೊಂಡರು.

ಸಿದ್ದರಾಮಯ್ಯನವರೇ ನೇಮಕ ಮಾಡಿದ್ದ ಮುಡಾ ಅಧ್ಯಕ್ಷರೇ ಈ ಪ್ರಕರಣದಲ್ಲಿ 5 ಸಾವಿರ ಕೋಟಿ ಹಗರಣ ನಡೆದಿದೆ ಎಂದು ಹೇಳಿದ್ದಾರೆ. ಆದರೆ ಇಲ್ಲಿ ಏನೇನೂ ನಡೆದಿಲ್ಲ ಎಂದು ಸರ್ಕಾರ ತಿಪ್ಪೇ ಸಾರಿಸುವ ಕೆಲಸ ಮಾಡುತ್ತಿದ್ದಾರೆ. ಸಿಎಂ ರಾಜೀನಾಮೆ ನೀಡುವವರೆಗೂ ನಾವು ವಿರಮಿಸುವುದಿಲ್ಲ ಎಂದು ಶಪಥ ಮಾಡಿದರು.

ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಇದು. ವಚನಭ್ರಷ್ಟ ಸರ್ಕಾರ ಆಗಿದೆ. ಅಹಿಂದ ಎಂದು ಹೇಳಿ, ಸಮಾಜಗಳನ್ನು ತುಳಿದಿದೆ. ವಾಲೀಕಿ ನಿಗಮದಲ್ಲಿ ಲೂಟಿ ಮಾಡಿದೆ. ಮೈಸೂರಿನ ಮುಡಾ ಒಂದು ಲಕ್ಷ ಅರ್ಜಿಗಳನ್ನು ಹಾಕಿಕೊಂಡು ನಿವೇಶನ ಕೊಡಲು ಹಾಗೆಯೇ ಕುಳಿತಿದ್ದಾರೆ. ಅಲ್ಲಿನ ಅರ್ಜಿದಾರರಿಗೆ ನಿವೇಶನ ಕೊಡುವ ಕೆಲಸ ಸಿದ್ಧರಾಮಯ್ಯ ಮಾಡಿಲ್ಲ ಎಂದು ದೂರಿದರು.

ಈ ಎರಡು ಹಗರಣಗಳ ಭ್ರಷ್ಟಾಚಾರ ಮಾಡಿರುವ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ರಕ್ಷಣೆ ಕೊಡುತ್ತಿರುವುದು ಸಿಎಂ ಸಿದ್ಧರಾಮಯ್ಯ ಅವರೇ ಎಂದು ಆರೋಪಿಸಿದರು.

RELATED ARTICLES

Latest News