Friday, November 22, 2024
Homeರಾಜಕೀಯ | Politicsಆರ್‌ಎಸ್‌‍ಎಸ್‌‍ ಪ್ರಮುಖರ ಜೊತೆ ವಿಜೇಯಂದ್ರ ಚರ್ಚೆ

ಆರ್‌ಎಸ್‌‍ಎಸ್‌‍ ಪ್ರಮುಖರ ಜೊತೆ ವಿಜೇಯಂದ್ರ ಚರ್ಚೆ

BY Vijayendra meet RSS leaders

ಹುಬ್ಬಳಿ,ಅ.19- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಲ್ಲಿನ ಗೋಕುಲ ರಸ್ತೆಯಲ್ಲಿರುವ ರಾಷ್ಟ್ರೀಯ ಸ್ವಯಂ ಸಂಘದ ಕಚೇರಿ ಕೇಶವ ಕುಂಜಕ್ಕೆ ಭೇಟಿ ನೀಡಿ, ಸಂಘದ ಪ್ರಮುಖರೊಂದಿಗೆ ಸುಮಾರು ಒಂದು ತಾಸಿನವರೆಗೆ ಚರ್ಚೆ ನಡೆಸಿದರು.

ಸಂಘದ ಕರ್ನಾಟಕ ಉತ್ತರ ಪ್ರಾಂತ ಪ್ರಚಾರಕ ನರೇಂದ್ರಜಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಅವರು ಪಕ್ಷದ ಸಂಘಟನೆ ಬಗ್ಗೆ ಹಲವಾರು ಸಲಹೆಗಳನ್ನು ಪಡೆದರು.ಪ್ರಮುಖವಾಗಿ ಶಿಗ್ಗಾಂವಿ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಸಂಸದ, ಮಾಜಿ ಸಿಎಂ ಬಸವರಾಜ ಬೊಮಾಯಿ ಅವರ ಕುಟುಂಬದವರಿಗೆ ಶಿಗ್ಗಾಂವಿ ವಿಧಾನಸಭೆ ಉಪ ಚುನಾವಣೆಯ ಟಿಕೆಟ್‌ ನೀಡಬೇಕೆಂಬ ಒತ್ತಡದ ಬಗ್ಗೆ ವಿಜಯೇಂದ್ರ ಅವರು ಸಲಹೆಗಳನ್ನು ಪಡೆದರು ಎನ್ನಲಾಗಿದೆ. ಇದರೊಂದಿಗೆ ಇತರ ಎರಡು ಕ್ಷೇತ್ರಗಳ ಉಪ ಚುನಾವಣೆ ಬಗ್ಗೆಯೂ ಚರ್ಚೆ ನಡೆಯಿತು ಎಂದು ಹೇಳಲಾಗಿದೆ. ರಾಜ್ಯ ಸರ್ಕಾರದ ಹಗರಣಗಳು, ಗ್ಯಾರಂಟಿ ಯೋಜನೆಗಳು ಉಪ ಚುನಾವಣೆ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಮಾತುಕತೆ ನಡೆದಿದೆ.

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದ ರಾಜ್ಯ ಸರ್ಕಾರದ ನಡೆ, ಮುಡಾ ಹಗರಣ ಸೇರಿದಂತೆ ಪ್ರಮುಖ ವಿಷಯಗಳನ್ನು ಬಿ.ವೈ. ವಿಜಯೇಂದ್ರ ಅವರು ನರೇಂದ್ರಜಿ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಅ. 25ರಂದು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಿದ್ದು, ಈ ಬಗ್ಗೆಯೂ ಗಂಭೀರ ಚರ್ಚೆ ನಡೆಸಿದ್ದಾರೆ.

ಮುಡಾ ಕಚೇರಿ ಮೇಲೆ ನಿನ್ನೆ ನಡೆದ ಇಡಿ ದಾಳಿ, ಮುಂದೆ ನಡೆಯಬಹುದಾದ ಕಾನೂನು ಪ್ರಕ್ರಿಯೆಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಪಡೆಯುವ ಬಗ್ಗೆ ಹೋರಾಟ ಕುರಿತು ವಿಸ್ತೃತ ಚರ್ಚೆ ನಡೆದಿದೆ.

ಬಿ.ವೈ.ವಿಜಯೇಂದ್ರ ಹಾಗೂ ನರೇಂದ್ರಜಿ ಅವರನ್ನು ಹೊರತುಪಡಿಸಿ, ಚರ್ಚೆ ಸಮಯದಲ್ಲಿ ಬೇರೆ ಯಾರಿಗೂ ಅವಕಾಶ ನೀಡಿರಲಿಲ್ಲ. ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ರಾಜಣ್ಣ ಕೊರವಿ, ಪ್ರಮುಖರಾದ ರಾಜು ಜರತಾರಘರ, ಡಾ.ಮಲ್ಲಿಕಾರ್ಜುನ ಬಾಳಿಕಾಯಿ ಹಾಗೂ ಇತರರು ಕೇಶವ ಕುಂಜದ ಹೊರಗಡೆ ಇದ್ದರು.

RELATED ARTICLES

Latest News