ಬೆಂಗಳೂರು,ಜು.8- ಕೇವಲ ಮತ ಬ್ಯಾಂಕ್ ರಾಜಕಾರಣವನ್ನು ಹೊರತುಪಡಿಸಿ ಕಾಂಗ್ರೆಸ್ ಸರ್ಕಾರ ಯಾವುದೇ ಜನಪರ ಕಾರ್ಯಗಳಿಗೂ ಕಿಂಚಿತ್ತು ಗಮನಹರಿಸಿಲ್ಲ. ಬೆಳೆ ಪರಿಹಾರದಿಂದ ವಂಚಿತರಾಗಿರುವ ರೈತರ ನೆರವಿಗೆ ಈಗಲಾದರೂ ಬೆಳೆ ಪರಿಹಾರ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ಅವರು, ಸಂಕಷ್ಟದಲ್ಲಿರುವ ರೈತರ ಗೋಳು ಕೇಳುವವರೇ ಇಲ್ಲ. ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷದ ಅವಧಿಯಿಂದಲೂ ರೈತರು ಒಂದಲ್ಲ ಒಂದು ಸಂಕಷ್ಟಕ್ಕೆ ಸಿಲುಕುತ್ತಿದ್ದರೂ ಕಾಂಗ್ರೆಸ್ ಕಾಳಜಿ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿಯ ಮುಂಗಾರು ಹಾಗೂ ಹಿಂಗಾರು ವಿಫಲತೆಯಿಂದ ನೊಂದಿರುವ ರೈತರು ಬಿಡಿಗಾಸು ಬರ ಪರಿಹಾರ ನೀಡಿ ಕೈತೊಳೆದುಕೊಂಡು ರೈತದ್ವೇಷಿ ಸರ್ಕಾರವೆಂಬ ಅಪಕೀರ್ತಿ ಅಂಟಿಸಿಕೊಂಡಿದೆ ಎಂದು ದೂರಿದ್ದಾರೆ.
ಸಂಕಷ್ಟದ ಸಮಯದಲ್ಲಾದರೂ ಸರ್ಕಾರದ ಬೆಳೆ ಪರಿಹಾರವೂ ರೈತನ ಖಾತೆಗೆ ಜಮೆಯಾಗಿಲ್ಲ, ಮಾನ್ಯ ಅವರು ನೀಡುತ್ತಿದ್ದ ಕಿಸಾನ್ ಸಮಾನ್ ಯೋಜನೆ ರಾಜ್ಯದ ಪಾಲಿನ 4000 ರೂ. ಗಳನ್ನೂ ನಿಲ್ಲಿಸಿ ಅನ್ನದಾತರಿಗೆ ದ್ರೋಹ ಬಗೆಯಲಾಗಿದೆ ಎಂದು ಆರೋಪಿಸಿದ್ದಾರೆ.