Tuesday, September 17, 2024
Homeರಾಜಕೀಯ | Politicsತಮ್ಮ ಕುರ್ಚಿಗೆ ಕಂಟಕವಾಗುತ್ತದೆ ಎಂದು ಸಿಎಂ ನಮ್ಮ ಪ್ರತಿಭಟನೆ ಹತ್ತಿಕ್ಕುತ್ತಿದ್ದಾರೆ : ವಿಜಯೇಂದ್ರ

ತಮ್ಮ ಕುರ್ಚಿಗೆ ಕಂಟಕವಾಗುತ್ತದೆ ಎಂದು ಸಿಎಂ ನಮ್ಮ ಪ್ರತಿಭಟನೆ ಹತ್ತಿಕ್ಕುತ್ತಿದ್ದಾರೆ : ವಿಜಯೇಂದ್ರ

ಬೆಂಗಳೂರು,ಜು.12– ಮುಡಾ ಹಗರಣ ಆಚೆ ಬಂದರೆ ತಮ್ಮ ಕುರ್ಚಿಗೆ ಕಂಟಕವಾಗುತ್ತದೆ ಎಂಬ ಏಕೈಕ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ ಪ್ರತಿಭಟನೆಯನ್ನು ಪೊಲೀಸರ ಮೂಲಕ ಹತ್ತಿಕ್ಕಿದ್ದಾರೆ. ಆದರೆ ಇದನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯುವವರೆಗೂ ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ ನಡೆಸುವುದು ನಮ ಹಕ್ಕು. ಅದನ್ನು ಹತ್ತಿಕ್ಕಲು ಸರ್ಕಾರಕ್ಕಾಗಲೀ, ಇಲ್ಲವೇ ಪೊಲೀಸರಿಗಾಗಲೀ ಅವಕಾಶವಿಲ್ಲ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೋ? ಅಥವಾ ತುಘಲಕ್‌ ದರ್ಬಾರ್‌ ಆಡಳಿತದಲ್ಲಿದ್ದೇವೋ? ಎಂದು ಪ್ರಶ್ನಿಸಿದರು.

ಮುಡಾ ಹಗರಣ ಆಚೆ ಬಂದರೆ ರಾಜೀನಾಮೆ ನೀಡಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಸಿದ್ದರಾಮಯ್ಯನವರು ಪ್ರಕರಣವನ್ನು ತಿಪ್ಪೆ ಸಾರುವ ಕೆಲಸ ಮಾಡುತ್ತಿದ್ದಾರೆ. ಹಿಂದೆ ಇವರು ಪ್ರತಿಪಕ್ಷದ ನಾಯಕರಾದಾಗ ನಮ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿರಲಿಲ್ಲವೇ? ಅವರಿಗೊಂದು ನ್ಯಾಯ, ನಮಗೊಂದು ನ್ಯಾಯವೇ? ಎಂದು ಆಕ್ರೋಶ ಹೊರಹಾಕಿದರು.

ನಾವು ಪೊಲೀಸರ ಬಗ್ಗೆ ದೂಷಣೆ ಮಾಡುವುದಿಲ್ಲ. ಅವರು ಸರ್ಕಾರದ ನಿರ್ದೇಶನದಂತೆ ಕೆಲಸ ಮಾಡುತ್ತಾರೆ. ನೀವು ಎಷ್ಟೇ ಹತ್ತಿಕ್ಕಿದರೂ ಸತ್ಯಾಂಶವನ್ನು ಮರೆಮಾಚಲು ಸಾಧ್ಯವಿಲ್ಲ. ಇಂದಲ್ಲಾ ನಾಳೆ ಸಿದ್ದರಾಮಯ್ಯನವರ ಕುರ್ಚಿಗೆ ಕಂಟಕ ಬರುವುದು ಗ್ಯಾರಂಟಿ ಎಂದು ವಿಜಯೇಂದ್ರ ಭವಿಷ್ಯ ನುಡಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದ ಹಣವನ್ನು ತೆಲಂಗಾಣ ವಿಧಾನಸಭಾ ಚುನಾವಣೆಗೆ ಬಳಸಿಕೊಳ್ಳಲಾಗಿದೆ. ಮಾಜಿ ಸಚಿವ ಬಿ.ನಾಗೇಂದ್ರ ಮೇಲೆ ಒತ್ತಡ ಹಾಕಿ ನಿಗಮದಲ್ಲಿದ್ದ ಹಣವನ್ನು ಸಾಗಿಸಲಾಗಿದೆ. ಇದರಲ್ಲಿ ಅವರು ಹರಕೆ ಕುರಿ, ಇನ್ನೂ ಕೆಲವರು ಸಿಕ್ಕಿಬೀಳಲಿದ್ದಾರೆ ಎಂದು ಹೇಳಿದರು.

ನಾನು ಹಿಂದುಳಿದ ಸಮುದಾಯದಿಂದ ಬಂದವನೆಂಬ ಕಾರಣಕ್ಕಾಗಿ ಬಿಜೆಪಿಯವರು ಷಡ್ಯಂತರ ನಡೆಸುತ್ತಿದ್ದಾರೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿದ ವಿಜಯೇಂದ್ರ, ಕಾಂಗ್ರೆಸ್‌‍ನಲ್ಲಿ ಇವರೊಬ್ಬರು ಮಾತ್ರ ಹಿಂದುಳಿದವರೇ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌‍ ಪಕ್ಷದಲ್ಲಿ ಅನೇಕ ದಲಿತ, ಹಿಂದುಳಿದ ನಾಯಕರಿದ್ದಾರೆ. ಅವರಿಗಿಂತ ಹಿಂದುಳಿದವರು ಇನ್ಯಾರಿದ್ದಾರೆ?. ಬಿ.ಕೆ.ಹರಿಪ್ರಸಾದ್‌ ನೀಡಿರುವ ಹೇಳಿಕೆಗೆ ಮೊದಲು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಉತ್ತರ ಕೊಡಬೇಕು.ಅಧಿವೇಶನದಲ್ಲೂ ನಮ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.

RELATED ARTICLES

Latest News