Monday, December 23, 2024
Homeರಾಜ್ಯಸಿ.ಟಿ ರವಿ ಪ್ರಕರಣ : ಪೊಲೀಸರ ವರ್ತನೆಗೆ ಸಭಾಪತಿ ಬಸವರಾಜ್‌ ಹೊರಟ್ಟಿ ಕೆಂಡಾಮಂಡಲ

ಸಿ.ಟಿ ರವಿ ಪ್ರಕರಣ : ಪೊಲೀಸರ ವರ್ತನೆಗೆ ಸಭಾಪತಿ ಬಸವರಾಜ್‌ ಹೊರಟ್ಟಿ ಕೆಂಡಾಮಂಡಲ

C.T. Ravi case: Speaker Basavaraj Horatti slams police for behavior

ಬೆಂಗಳೂರು,ಡಿ.23- ಬೆಳಗಾವಿಯ ಸುವರ್ಣಸೌಧದ ಕಲಾಪದ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷೀ ಹೆಬ್ಬಾಳ್ಕರ್‌ ಮೇಲೆ ಬಿಜೆಪಿ ಸದಸ್ಯ ಸಿ.ಟಿ ರವಿ ಆಶ್ಲೀಲ ಪದ ಪ್ರಯೋಗ ಬಳಸಿದ ನಿಂದನೆ ಪ್ರಕರಣ ಮುಗಿದ ಅಧ್ಯಾಯ ಎಂದು ಹೇಳಿರುವ ವಿಧಾನಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ ಅವರು ಪೊಲೀಸರ ನಡೆಗೆ ಕೆಂಡಮಂಡಲವಾಗಿದ್ದಾರೆ.

ಬೆಂಗಳೂರಿನ ತಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಿ.ಟಿ ರವಿ ಮತ್ತು ಲಕ್ಷಿ ಹೆಬ್ಬಾಳ್ಕರ್‌ ಪ್ರಕರಣ ಇದೀಗ ಮುಗಿದ ಅಧ್ಯಾಯ. ಡಿ.19ರಂದೇ ಸದನದಲ್ಲಿ ರೂಲಿಂಗ್‌ ಕೊಟ್ಟಿದ್ದೇನೆ. ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆ ಆಗಿದೆ. ಸದನದ ಒಳಗೆ ನಡೆಯುವ ಘಟನೆಗಳಿಗೆ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ. ಮಹಜರು ಮಾಡುವುದಾಗಿ ಪೊಲೀಸರು ನನ್ನ ಬಳಿ ಕೇಳಿದರೂ ನಾನು ಅದಕ್ಕೆ ನಾವು ಅನುಮತಿ ಕೊಟ್ಟಿಲ್ಲ ಎಂದು ಸ್ಷಷ್ಟಪಡಿಸಿದರು.

ಸದನದಲ್ಲಿ ನಡೆದಿದೆ ಎನ್ನಲಾದ ಘಟನೆ ಬಗ್ಗೆ ಕೂಲಂಕುಷವಾಗಿ ಚರ್ಚೆ ಮಾಡಿದ್ದೇವೆ. ಸದನದವನ್ನು ಅನಿರ್ದಿಷ್ಟವಾಧಿಗೆ ಮುಂದೂಡಿಕೆ ಬಳಿಕ ಸಿಟಿ ರವಿ ಬಂಧನ ಆಗಿತ್ತು. ಸದ್ಯ, ಎರಡೂ ಕಡೆಯಿಂದ ನಮಗೆ ಯಾವುದೇ ದೂರು ಬಂದಿಲ್ಲ. ಹಕ್ಕುಚ್ಯುತಿ ಆಗಿದೆ ಎಂದು ದೂರು ಕೊಟ್ಟರೆ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಸದನವನ್ನು ಅರ್ನಿಷ್ಟಾವಧಿವರೆಗೆ ಮುಂದೂಡಿ ಬಾಗಿಲು ಹಾಕಿದ ಮೇಲೆ ಪೊಲೀಸರು ಮಹಜರು ಮಾಡಲು ಅವಕಾಶ ನೀಡಿಲ್ಲ . ಘಟನೆಗೆ ಸಂಬಂಧಪಟ್ಟಂತೆ ಹೊರಗಿನ ವಿಚಾರಕ್ಕೆ ದೂರು ಕೊಟ್ಟಿದ್ದರೆ ಅದರ ಬಗ್ಗೆ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ಆ ದಿನ ರಾತ್ರಿ 1 ಗಂಟೆ ತನಕವೂ ಸಿ.ಟಿ.ರವಿ ಜೊತೆ ಸಂಪರ್ಕದಲ್ದೆ. ಪೊಲೀಸ್‌‍ ಆಯುಕ್ತರ ಜೊತೆಗೆ ಮಾತನಾಡಿ ಎಚ್ಚರಿಕೆ ಕೊಟ್ಟಿದ್ದೇನೆ ಎಂದರು.

ಸಿ.ಟಿ. ರವಿ ಅವರಿಗೆ ಏನಾದರೂ ಆದರೆ, ಸುಮನೆ ಬಿಡುವುದಿಲ್ಲ ಎಂದು ನೇರವಾಗಿಯೇ ಕಮೀಷನರ್‌ಗೆ ಹೇಳ್ದೆಿ. ಬೆಳಗ್ಗೆ ತನಕವೂ ನಾನು ಟ್ರ್ಯಾಕ್‌ ಮಾಡ್ದೆಿ, ಬೆಳಗ್ಗೆ 5 ಗಂಟೆಗೆ ಎಸ್ಪಿಗೂ ಕೂಡ ಮಾತನಾಡ್ದೆಿ. ಅಲ್ಲದೇ ಈಗಾಗಲೇ ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್‌‍ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ವಿವರಿಸಿದ್ದಾರೆ.

ಇನ್ನೂ ಲಕ್ಷಿ ಹೆಬ್ಬಾಳ್ಕರ್‌ ವಿರುದ್ಧ ಪರಿಷತ್ನಲ್ಲಿ ನಿಂದನೆ ಆರೋಪ ಪ್ರಕರಣದಲ್ಲಿ ಮಹಿಳಾ ಆಯೋಗಕ್ಕೆ ಸಭಾಪತಿಗೆ ಕೇಳುವ ಅಧಿಕಾರ ಇಲ್ಲ, ಅವರು ಪತ್ರ ಬರೆಯಲಿ, ಆದ್ರೆ ಅದಕ್ಕೆ ನಾನು ಉತ್ತರ ಕೊಡಬೇಕಾಗಿಯೂ ಇಲ್ಲ. ಬೇಕಾದರೆ ಬೇರೆಯವರಿಗೆ ನೋಟೀಸ್‌‍ ಕೊಡಲಿ ಎಂದು ತಿಳಿಸಿದ್ದಾರೆ.

ರಾತ್ರಿ ಒಂದೂವರೆ ಗಂಟೆಗಳ ಕಾಲ ನಾನು ಈ ಕೇಸ್‌‍ ಟ್ರಾಕ್‌ ಮಾಡಿದ್ದೀನಿ.ಸಣ್ಣ ಘಟನೆಯಾದರೆ, ನೀವೇ ಜವಾಬ್ದಾರಿ ಎಂಧು ಪೊಲೀಸರಿಗೆ ತಿಳಿಸ್ದೆಿ
ನಾನು ಮೂರು ಬಾರಿ ಫೋನ್‌ ನಲ್ಲಿ ಸಿ.ಟಿ ರವಿ ಜೊತೆಗೆ ಮಾತನಾಡಿದ್ದೇನೆ. ನಮಲ್ಲಿ ವೀಡಿಯೋ, ಆಡಿಯೋ ಇದ್ದರೆ ಮಾತ್ರ ಪರಿಗಣನೆ ಮಾಡುತ್ತೇವೆ. ಬೇರೆ ಯಾರಾದ್ರೂ ಕಳಿಸಿದರೆ, ಪರಿಶೀಲನೆಗಾಗಿ ಎಫ್‌ಎಸ್‌‍ಎಲ್‌ಗೆ ಕಳುಹಿಸುತ್ತೇವೆ. ಸದನ ಮುಗಿದ ಮೇಲೆ ಯಾವುದೇ ವಿಡಿಯೋ ಚಿತ್ರೀಕರಣ ಆಗಿಲ್ಲ. ಎಂದು ಪುನರುಚ್ಚರಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು, ರವಿಯನ್ನು ನಕಲಿ ಎನ್‌ಕೌಂಟರ್‌ ಮಾಡುವ ದುರುದ್ದೇಶದಿಂದ ಇಡೀ ರಾತ್ರಿಸುತ್ತಿಸಿದರು ಎಂಬ ಆರೋಪದ ವಿಚಾರವಾಗಿ ನನಗೆ ಗೊತ್ತಿಲ್ಲ, ನನ್ನ ಮುಂದೆ ಯಾರೂ ಹೇಳಿಲ್ಲ.ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಸಮಿತಿ ರಚನೆ ಬಗ್ಗೆ ಮಾಜಿ ಸಭಾಪತಿಗಳ ಹೇಳಿಕೆ ವಿಚಾರ ಅಂತಹ ಪರಿಸ್ಥಿತಿ ನಿರ್ಮಾಣ ಆಗಿಲ್ಲ. ನಮ ನಿಯಂತ್ರಣ ಮೀರಿದರೆ, ಸಮಿತಿ ರಚನೆ ಮಾಡಬಹುದಿತ್ತು.ಅಂತಹ ಪರಿಸ್ಥಿತಿ ಇಲ್ಲ, ಸಭೆ ಕರೆಯುವ ಅವಶ್ಯಕತೆಯೂ ಇಲ್ಲ ಎಂದು ಹೇಳಿದರು.

ಪೊಲೀಸರ ಕ್ರಮ ಸರಿಯಿಲ್ಲ :
ಸದನದ ಒಳಗೆ ನಡೆದ ಘಟನೆ ಬಗ್ಗೆ ಪೊಲೀಸರು ಹಸ್ತಕ್ಷೇಪ ಮಾಡಬಾರದು. ಅದು ಅವರ ಅಧಿಕಾರ ಮತ್ತು ಹಕ್ಕು ಎರಡೂ ಇಲ್ಲ. ಎಫ್‌ಐಆರ್‌ ಆಗಿದೆ, ನಮದೇ ಮೂಲಗಳ ಪ್ರಕಾರ ಚರ್ಚೆ ಮಾಡುತ್ತೇವೆ. ಆದರೆ ಪೊಲೀಸರು ಒಳಗೆ ಬಂದಿಲ್ಲ. ನಮಲ್ಲಿ ವಿಡಿಯೋ, ಆಡಿಯೋ ಇದ್ದರೆ ಮಾತ್ರ ಪರಿಗಣನೆ ಮಾಡುತ್ತೇವೆ. ಬೇರೆ ಯಾರಾದರೂ ಕಳುಹಿಸಿದರೆ ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌‍ಎಲ್‌‍) ಕಳುಹಿಸುತ್ತೇವೆ. ಸದನ ಮುಗಿದ ಮೇಲೆ ಯಾವುದೇ ವೀಡಿಯೋ ಚಿತ್ರೀಕರಣ ಆಗಿಲ್ಲ ಎಂದು ಹೊರಟ್ಟಿ ಹೇಳಿದರು.

ಹಿರೇಬಾಗೇವಾಡಿಯಲ್ಲಿ ಹಲ್ಲೆ ಮಾಡಿದವರ ವಿರುದ್ಧ ಎಫ್‌ಐಆರ್‌ ದಾಖಲಾದ ವಿಚಾರವಾಗಿ ಮಾತನಾಡಿದ ಹೊರಟ್ಟಿ ಅವರು, ಪೊಲೀಸ್‌‍ ಕಾಯ್ದೆಗಳು ಏನಿದೆಯೊ ಗೊತ್ತಿಲ್ಲ. ಹಲ್ಲೆಗೆ ಯತ್ನಿಸಿದವರ ವಿರುದ್ಧ ಅವರು ಕ್ರಮ ತೆಗೆದುಕೊಳ್ಳಬಹುದು. ಇಂತಹ ಒಳ್ಳೆಯ ಕ್ಷಣ ಮತ್ತೆ ಬರುವುದಿಲ್ಲ.ಈಗಿವರೆಗೆ ಒಳ್ಳೆಯ ಕಾಲ ಇತ್ತು.ಇನುಂದೆ ಯಾವುದೇ ಮೌಲ್ಯಗಳು ಉಳಿಯುವುದಿಲ್ಲ ಎಂದು ಬೇಸರ ಹೊರಹಾಕಿದರು.

ಸುವರ್ಣ ವಿಧಾನ ಸೌಧದಲ್ಲಿ ಎಂಎಲ್‌ ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನ ಪ್ರಕರಣ ಸಂಬಂಧ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಠಾಣೆಯಲ್ಲಿ 10 ಜನ ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಸೆಕ್ರೆಟರಿ ಕಚೇರಿಯಿಂದ ಕಮಿಷನರ್‌ ಕಚೇರಿಗೆ ದೂರಿನ ಪತ್ರ ಸಲ್ಲಿಕೆಯಾಗಿತ್ತು. ಎಂಎಲ್‌‍ಸಿ ಡಿ.ಎಸ್‌‍.ಅರುಣ್‌‍, ಎಸ್‌‍.ವಿ ಸಂಕನೂರ, ಕಿಶೋರ್‌ ಬಿ.ಆರ್‌. ಬೆಂಗಳೂರಿನ ಕಾರ್ಯದರ್ಶಿ ಕಚೇರಿಗೆ ದೂರು ಸಲ್ಲಿಸಿದ್ದರು. ಅಲ್ಲಿಂದ ಬೆಳಗಾವಿ ನಗರ ಪೊಲೀಸ್‌‍ ಆಯುಕ್ತರ ಕಚೇರಿಗೆ ಪತ್ರ ರವಾನೆಯಾಗಿತ್ತು. ಅದರಂತೆ, ಹಿರೇಬಾಗೇವಾಡಿ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಐಪಿಸಿ ಸೆಕ್ಷನ್‌ 189(2), 191(2), 126(2), 352, 351(4) ಕಲಂ ಹಾಗೂ 190ರ ಅಡಿ ದೂರು ಎಫ್‌ಐಆರ್‌ ದಾಖಲಿಸಲಾಗಿದೆ.

RELATED ARTICLES

Latest News