ನವದೆಹಲಿ,ಅ.18-ದಸರಾ ಹಬ್ಬಕ್ಕೂ ಮುನ್ನವೇ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಶುಭ ಸುದ್ದಿ ನೀಡಿರುವ ಕೇಂದ್ರ ಸರ್ಕಾರ ಶೇ.4ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಲು ನಿರ್ಧರಿಸಿದೆ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಶೇ.4ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಿಸಲು ಇಂದು ನಡೆಯುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗುತ್ತಿದೆ.
ಪ್ರಧಾನಿ ನರೇಂದ್ರಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಹೆಚ್ಚಳಕ್ಕೆ ಸಮ್ಮತಿ ನೀಡಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಒಂದು ವೇಳೆ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಹೆಚ್ಚಳಕ್ಕೆ ಸಮ್ಮತಿಸಿದರೆ ಕೇಂದ್ರ ಸರ್ಕಾರಿ ನೌಕರರ ಹಾಲಿ ಇರುವ ಶೇ.42ರಿಂದ 46ಕ್ಕೆ ಏರಿಕೆಯಾಗಲಿದೆ.
ಇಂಧನವಿಲ್ಲದ ಕಾರಣ 48 ವಿಮಾನ ಹಾರಾಟ ರದ್ದು ಮಾಡಿದ ಪಾಕಿಸ್ತಾನ
ಕೇಂದ್ರ ಸರ್ಕಾರದ 47 ಲಕ್ಷ ನೌಕರರು ಹಾಗೂ 68 ಲಕ್ಷ ಪಿಂಚಣಿದಾರರಿಗೆ ಇದರ ಲಾಭ ಸಿಗಲಿದೆ. ಅನುಮೋದಿತ ಡಿಎ ಹೆಚ್ಚಳವು ಜುಲೈ 1, 2023ರಿಂದ ಜಾರಿಗೆ ಬರಲಿದೆ. ಕೇಂದ್ರ ಸರ್ಕಾರಿ ನೌಕರರು ಜುಲೈ ಮತ್ತು ಅಕ್ಟೋಬರ್ ನಡುವಿನ ಅವಗೆ ಬಾಕಿಯಿರುವ ಜೊತೆಗೆ ನವೆಂಬರ್ ತಿಂಗಳಿನಿಂದ ರ್ವತ ವೇತನವನ್ನು ಪಡೆಯುತ್ತಾರೆ.