Wednesday, November 27, 2024
Homeರಾಜ್ಯರಾಜ್ಯ ಸಂಪುಟ ಸರ್ಜರಿ ಗ್ಯಾರಂಟಿ..? ಯಾವಾಗ..? ಯಾರು ಔಟ್.?. ಯಾರು ಇನ್..?

ರಾಜ್ಯ ಸಂಪುಟ ಸರ್ಜರಿ ಗ್ಯಾರಂಟಿ..? ಯಾವಾಗ..? ಯಾರು ಔಟ್.?. ಯಾರು ಇನ್..?

Cabinet Expansion in Karnataka? Aspirants lobby intensely

ಬೆಂಗಳೂರು,ನ.27- ಸಚಿವ ಸಂಪುಟ ಪುನರ್ ರಚನೆಯಾಗಬೇಕು ಎಂಬ ಸುದ್ದಿಯಿದೆ. ಆದರೆ ಯಾವಾಗ, ಯಾರನ್ನು ಬದಲಾವಣೆ ಮಾಡಲಾಗುತ್ತದೆ ಎಂಬುದರ ಮಾಹಿತಿ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿಮಂಡಲ ಪುನರ್ ರಚನೆಯಾಗಬಹುದು ಅಥವಾ ಆಗದೇ ಇರಬಹುದು. ಖಾತೆ ಬದಲಾವಣೆಯ ಬಗ್ಗೆಯೂ ಚರ್ಚೆ ಇದೆ ಎಂದು ಹೇಳಿದರು.

ದೆಹಲಿಯಲ್ಲಿ ಯಾವುದೇ ತೀರ್ಮಾನವಾದರೂ ಅದೇ ಅಂತಿಮ. ದೆಹಲಿಯಿಂದ ಪಟ್ಟಿ ಬಂದರೆ ಕಥೆ ಮುಗಿಯಿತು. ಮನೆ ಖಾಲಿ ಮಾಡಿಕೊಂಡು ಹೋಗುತ್ತಿರಬೇಕು ಎಂದು ಹೇಳಿದರು.
ಕಾಂಗ್ರೆಸ್ ಶಾಸಕರು ಪದೇಪದೇ ಪ್ರವಾಸ ಹೋಗುತ್ತಲೇ ಇರುತ್ತೇವೆ. ಬಹಿರಂಗವಾಗಿ ಹೇಳಿದರೆ ವಿವಾದವಾಗುತ್ತದೆ. ಕೊನೆಗೆ ಪ್ರವಾಸವೇ ರದ್ದಾಗುತ್ತದೆ. ಈ ಮೊದಲು ಮೈಸೂರಿಗೆ ಹೋಗಿದ್ದೆವು. ದುಬೈ ಪ್ರವಾಸ ಪ್ರಸ್ತಾಪವಿಲ್ಲ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳು ಅಭಾಧಿತ. ಯಾರು, ಏನು ಹೇಳಿದರೂ ಅವುಗಳನ್ನು ಹಿಂಪಡೆಯುವುದಿಲ್ಲ. ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ ಜನರ ಸೌಲಭ್ಯಗಳನ್ನು ನಿಲ್ಲಿಸುವುದಿಲ್ಲ. ಸಂಪನೂಲ ಕ್ರೂಢೀಕರಣಕ್ಕೆ ಹೊಸ ಹೊಸ ಮೂಲಗಳನ್ನು ಹುಡುಕಿ ಮುಂದಿನ ಬಜೆಟ್ನಲ್ಲಿ ಅನುದಾನ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಲೋಕೋಪಯೋಗಿ ಇಲಾಖೆಯಲ್ಲಿ ಅನುದಾನದ ಕೊರತೆಯಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಹಣ ನೀಡುತ್ತಿದ್ದೇವೆ ಎಂದರು.

ಹಾಸನದಲ್ಲಿ ಡಿ.5 ರಂದು ಸಮಾವೇಶ ನಡೆಯುವ ಬಗ್ಗೆ ಕೇಳಿದ್ದೇನೆ. ಆದರೆ ಹೆಚ್ಚಿನ ಮಾಹಿತಿ ಇಲ್ಲ. ಕಾಂಗ್ರೆಸ್ ಪಕ್ಷದ ತಾವೂ ಸಮಾವೇಶದಲ್ಲಿ ಭಾಗವಹಿಸುತ್ತೇನೆ. ಸಿದ್ದರಾಮಯ್ಯ ಬೆಂಬಲಿಗರು ಸಮಾವೇಶ ನಡೆಸುತ್ತಿರುವುದಕ್ಕೆ ವ್ಯಕ್ತಿಪೂಜೆ ಎಂಬ ಟೀಕೆ 12 ವರ್ಷಗಳಿಂದಲೂ ಇದೆ. ಅಭಿಮಾನಿಗಳು ಮಾಡುವ ಕಾರ್ಯಕ್ರಮಕ್ಕೆ ತಡೆ ಹಾಕಲು ಸಾಧ್ಯವಿಲ್ಲ ಎಂದರು.

ಅಹಿಂದ ಕಾರ್ಯಕ್ರಮ ಹಲವು ಸಂದರ್ಭದಲ್ಲಿ ನಡೆಯುತ್ತಲೇ ಇದೆ. ಬಜೆಟ್ ನಂತರ ಸಿದ್ದರಾಮಯ್ಯ ಅವರ ಅಧಿಕಾರ ಬದಲಾವಣೆಯಾಗುತ್ತದೆ ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ. ಇದನ್ನು ಹೈಕಮಾಂಡ್ ನಿರ್ಧಾರ ಮಾಡಬೇಕು. ಈ ಸಮಾವೇಶಕ್ಕೂ ಈ ರೀತಿಯ ಚರ್ಚೆಗಳಿಗೂ ಸಂಬಂಧವಿಲ್ಲ ಎಂದು ಹೇಳಿದರು.

ಎರಡೂವರೆ ವರ್ಷದ ಬಳಿಕ ಸಂಪುಟದ ಸಚಿವರ ಬದಲಾವಣೆಯಾಗಲಿದೆ ಎಂಬ ಕುರಿತು ತಮಗೆ ಮಾಹಿತಿ ಇಲ್ಲ. ಅಧಿಕಾರ ಎಲ್ಲರಿಗೂ ಸಿಗಬೇಕು. ಕೆಲವರು ಶಾಸಕರಾಗಿದ್ದಾರೆ. ಸಾಮರ್ಥ್ಯವಿದ್ದರೂ ಬಹಳಷ್ಟು ಮಂದಿ ಅಧಿಕಾರ ಇಲ್ಲದೇ ಉಳಿದಿದ್ದಾರೆ ಎಂದರು. ಈ ಅವಧಿಗೆ ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ. 2028 ಕ್ಕೆ ಹಕ್ಕು ಪ್ರತಿಪಾದಿಸುತ್ತೇನೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಮುಳ್ಳಿನ ಮೇಲೆ ನಿಂತಂತೆ. ಅದನ್ನು ನಿಭಾಯಿಸುವುದು ಕಷ್ಟದ ಜವಾಬ್ದಾರಿ. ಚರ್ಚೆ ನಡೆಯಬೇಕು, ಎಲ್ಲರ ಸಹಕಾರ ಬೇಕು, ಸದ್ಯಕ್ಕೆ ತಾವು ಅದರ ಕುರಿತು ಚಿಂತನೆ ನಡೆಸಿಲ್ಲ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷರಾಗಬೇಕಾದರೆ 2-3 ತಿಂಗಳ ಮೊದಲೇ ತಯಾರಿ ಮಾಡಿಕೊಳ್ಳಬೇಕು. ಈಗಿನ ಪರಿಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಚರ್ಚೆಯಿಲ್ಲ. ಒಂದು ವೇಳೆ ಹೈಕಮಾಂಡ್ ಈ ಬಗ್ಗೆ ಸೂಚಿನೆ ನೀಡಿದರೆ ಆ ಸಂದರ್ಭದಲ್ಲಿ ಪರಿಶೀಲನೆ ನಡೆಸಲಾಗುವುದು ಎಂದರು.

RELATED ARTICLES

Latest News