Friday, November 22, 2024
Homeರಾಷ್ಟ್ರೀಯ | Nationalನೂತನ ಕೇಂದ್ರ ಸಚಿವರಿಗೆ ಖಾತೆ ಹಂಚಿದ ಪ್ರಧಾನಿ ಮೋದಿ । ಇಲ್ಲಿದೆ ಲಿಸ್ಟ್

ನೂತನ ಕೇಂದ್ರ ಸಚಿವರಿಗೆ ಖಾತೆ ಹಂಚಿದ ಪ್ರಧಾನಿ ಮೋದಿ । ಇಲ್ಲಿದೆ ಲಿಸ್ಟ್

ಹೊಸದಿಲ್ಲಿ.ಜೂ.10: ಅಧಿಕಾರಕ್ಕೆ ಮರುದಿನವೇ ಪ್ರದಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಖಾತೆಯನ್ನು ಹಂಚಿಕೆ ಮಾಡಿದ್ದು, ನಿರೀಕ್ಷೆಯಂತೆ ಪ್ರಮುಖ ಖಾತೆಗಳನ್ನು ಬಿಜೆಪಿ ತನ್ನಲ್ಲೇ ಉಳಿಸಿಕೊಂಡಿದೆ. ಭಾನುವಾರ ಪ್ರಮಾಣ ವಚನ ಸಮಾರಂಭ ಮುಗಿದ ಬಳಿಕ ಸೋಮವಾರ ಸಂಜೆ ಮೊದಲ ಸಚಿವ ಸಂಪುಟ ಸಭೆ ನಡೆಯಿತು.

ಈ ಸಭೆಯಲ್ಲಿ ಯಾರು ಯಾವ ಖಾತೆ ನಿರ್ವಹಣೆ ಮಾಡಿದರೆ ಉತ್ತಮ ಎಂಬ ಚರ್ಚೆಗಳಾದವು.ನಂತರ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಗೃಹ, ಹಣಕಾಸು, ವಿದೇಶಾಂಗ, ರಕ್ಷಣಾ, ರೈಲ್ವೇ, ಕೃಷಿ, ಶಿಕ್ಷಣ, ರಸ್ತೆ, ಸೇರಿದಂತೆ ಪ್ರಮುಖ ಖಾತೆಗಳನ್ನು ಬಿಜೆಪಿ ತನ್ನಲ್ಲೇ ಉಳಿಸಿಕೊಂಡಿದೆ.ನರೇಂದ್ರ ಮೋದಿ ಅವರ ಎರಡನೇ ಅವಧಿಯಲ್ಲಿ ಸಚಿವರಾಗಿದ್ದ ಅಮಿತ್ ಷಾ, ರಾಜ್ ನಾಥ್ ಸಿಂಗ್, ನಿರ್ಮಲ ಸೀತರಾಮನ್, ಎನ್.ಜೈ ಶಂಕರ್, ನಿತಿನ್ ಗಡ್ಕರಿ, ಪಿಯೂಷ್ ಗೋಯಲ್,ಧರ್ಮೇಂದ್ರ ಪ್ರಧಾನ್ ಅವರುಗಳು ಪುನಃ ಅದೇ ಖಾತೆಯಲ್ಲಿ ಮುಂದುವರೆದಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕೃಷಿ ನೀಡಲಾಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಬದಲಿಗೆ ಅತ್ಯಂತ ಮಹತ್ವದ ಬೃಹತ್ ಕೈಗಾರಿಕಾ ಹಾಗೂ ಉಕ್ಕು ಹೊಣೆಗಾರಿಕೆಯನ್ನು ನೀಡಲಾಗಿದೆ.

ಹಿಂದಿನ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳು ಹಾಗೂ ಗಣಿಗಾರಿಕೆ ಸಚಿವರಾಗಿದ್ದ ಪ್ರಹ್ಲಾದ್ ಜೋಶಿ ಅವರಿಗೆ ಮುಂಬಡ್ತೀ ಎನ್ನುವಂತೆ ಮಹತ್ವದ ಆಹಾರ ಮತ್ತು ಗ್ರಾಹಕ ವ್ಯವಹಾರ, ನವೀಕರಿಸಬಹುದಾದ ಇಂಧನ ಖಾತೆ ನೀಡಲಾಗಿದೆ.

ಅಚ್ಚರಿಯ ಬೆಳವಣಿಗೆಯಲ್ಲಿ ಮೊದಲ ಬಾರಿಗೆ ಕೇಂದ್ರದಲ್ಲಿ ರಾಜ್ಯ ಸಚಿವರಾಗಿ ಸೇರ್ಪಡೆಯಾಗಿದ್ದ ವಿ.ಸೋಮಣ್ಣ ಅವರಿಗೆ ರಾಜ್ಯ ರೈಲ್ವೇ ಹಾಗೂ ‌ಜಲಶಕ್ತೀ ಖಾತೆಯನ್ನು ನೀಡಿರುವುದು ಹಲವರನ್ನು ಹುಬ್ಬೇರುವಂತೆ ಮಾಡಿದೆ.

ಈ ಹಿಂದೆ 2019 ರ ಮೋದಿ ಸಂಪುಟದಲ್ಲಿ ಬೆಳಗಾವಿಯ ಸಂಸದರಾಗಿದ್ದ ಸುರೇಶ್ ಅಂಗಡಿ ಕೂಡ ರಾಜ್ಯ ರೈಲ್ವೇ ಖಾತೆಯ ಸಚಿವರಾಗಿದ್ದರು.ಕಳೆದ ಬಾರಿ ರಾಜ್ಯ ಕೃಷಿ ಖಾತೆಯ ಸಚಿವರಾಗಿದ್ದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸದಸ್ಯೆ ಶೋಭಾ ಕರಂದ್ಲಾಜೆ ಅವರಿಗೆ ‌ಈ ಬಾರಿ ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಕೈಗಾರಿಕೆ, ಕಾರ್ಮಿಕ ಇಲಾಖೆಯ ಹೊಣೆಗಾರಿಕೆ ನೀಡಲಾಗಿದೆ.

ಮನೋಹರ್ ಲಾಲ್ ಖಟ್ಟರ್‌ಗೆ ಇಂಧನ ಹಾಗೂ ವಸತಿ ಖಾತೆ ನೀಡಲಾಗಿದೆ. ಜೆಪಿ ನಡ್ಡಾಗೆ ಆರೋಗ್ಯ ಖಾತೆ ನೀಡಲಾಗಿದೆ. ಪಿಯೂಷ್ ಗೋಯೆಲ್‌ಗೆ ವಾಣಿಜ್ಯ ಖಾತೆ ನೀಡಲಾಗಿದೆ. ಧರ್ಮೇಂದ್ರ ಪ್ರಧಾನ್‌ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ನೀಡಲಾಗಿದೆ. ಮಾನ್ಸುಕ್ ಮಾಂಡವಿಯಾಗೆ ಕಾರ್ಮಿಕ ಸಚಿವಾಲಯ ಖಾತೆ ನೀಡಲಾಗಿದೆ. ಶಿವರಾಜ್ ಸಿಂಗ್‌ಗೆ ಕೃಷಿ ಖಾತೆ ನೀಡಲಾಗಿದೆ. ಶೋಭಾ ಕರಂದ್ಲಾಜೆಗೆ ಸಣ್ಣ ಮತ್ತು ಅತೀ ಸೂಕ್ಷ್ಮ ಕೈಗಾರಿಕೆ ರಾಜ್ಯ ಖಾತೆ ಹಂಚಿಕೆ ಮಾಡಲಾಗಿದೆ.

ಅನ್ನಪೂರ್ಣ ದೇವಿಗೆ ಮಹಿಳಾ ಮತ್ತು ಕಲ್ಯಾಣ ಇಲಾಖೆ ನೀಡಲಾಗಿದೆ. ನರೇಂದ್ರ ಮೋದಿ 2.0 ಸರ್ಕಾರದಲ್ಲಿ ಪ್ರಮುಖ ಖಾತೆ ನಿರ್ವಹಿಸಿದ ಸಚಿವರಿಗೆ ಅದೇ ಖಾತೆ ಹಂಚಿಕೆ ಮಾಡಲಾಗಿದೆ. ಪ್ರಮುಖ ಖಾತೆಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸಾರಿಗೆ ಹೆದ್ದಾರಿ ರಾಜ್ಯ ಖಾತೆಯನ್ನು ಇಬ್ಬರಿಗೆ ಹಂಚಲಾಗಿದೆ. ಹರ್ಷ ಮಲ್ಹೋತ್ರ ಹಾಗೂ ಅಜಯ್ ತಮ್ತಾ ಇಬ್ಬರಿಗೆ ಕೊಡಲಾಗಿದೆ.

ಅಮಿತ್ ಶಾ ಈ ಹಿಂದೆ ಕೇಂದ್ರ ಸರ್ಕಾರದಲ್ಲಿ ಗೃಹ ಖಾತೆಯನ್ನು ನಿಭಾಯಿಸಿದ್ದರು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ 370 ಸೆಕ್ಷನ್ ರದ್ಧತಿ, ತ್ರಿವಳಿ ತಲಾಖ್ ರದ್ಧತಿ ಸೇರಿದಂತೆ ಹಲವು ಕಾನೂನು ಜಾರಿಯಲ್ಲಿ ಅಮಿತ್ ಶಾ ಪಾತ್ರ ಪ್ರಮುಖವಾಗಿತ್ತು. ಇದೀಗ ಮೋದಿ 3.0 ಅವಧಿಯಲ್ಲೂ ಅಮಿತ್ ಶಾಗೆ ಪ್ರಬಲವಾದ ಗೃಹ ಖಾತೆಯನ್ನೇ ನೀಡಲಾಗಿದೆ.

ಈ ಹಿಂದೆ ಹಣಕಾಸು ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ನಿರ್ಮಲಾ ಸೀತಾರಾಮನ್‌ಗೆ ಮತ್ತೆ ಅದೇ ಖಾತೆಯನ್ನು ನೀಡಲಾಗಿದೆ.ಮೋದಿ ಸಂಪುಟದ ಅತ್ಯಂತ ಹಿರಿಯ ಹಾಗೂ ಅನುಭವಿ ಸಚಿವರಾಗಿರುವ ರಾಜನಾಥ್ ಸಿಂಗ್‌ಗೆ ಮತ್ತೆ ಪ್ರಬಲ ಖಾತೆಯೇ ಸಿಕ್ಕಿದೆ. ಈ ಹಿಂದೆ ರಕ್ಷಣಾ ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ರಾಜನಾಥ್ ಸಿಂಗ್, ಮತ್ತದೇ ಇಲಾಖೆಯ ಹೊಣೆ ಹೊತ್ತಿದ್ದಾರೆ.

ವಿದೇಶದಲ್ಲಿ ಭಾರತದ ಹಿರಿಮೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೈಶಂಕರ್‌ಗೆ ಮತ್ತದೇ ಖಾತೆ ನೀಡಲಾಗಿದೆ. ಈ ಬಾರಿಯೂ ವಿದೇಶಾಂಗ ವ್ಯವಹಾರಗಳ ಖಾತೆಯನ್ನು ಜೈಶಂಕರ್‌ಗೆ ನೀಡಲಾಗಿದೆ.
ಹಲವು ದಶಪಥ ಹೆದ್ದಾರಿ ಯೋಜನೆ ಮಾಡಿ, ಸಾರಿಗೆ ಇಲಾಖೆಯಲ್ಲಿ ಮಹತ್ವದ ಸಾಧನೆ ಮಾಡಿದ್ದ ನಿತಿನ್ ಗಡ್ಕರಿಗೆ ಮತ್ತೇದ ಖಾತೆ ನಿಭಾಯಿಸೋ ಜವಾಬ್ದಾರಿ ಸಿಕ್ಕಿದೆ.

ನೂತನ ಸಚಿವರು ಹಾಗೂ ಖಾತೆ

ರಾಜನಾಥ್‌ ಸಿಂಗ್‌ – ರಕ್ಷಣಾ ಸಚಿವಾಲಯ
ಜೆಡಿ ನಡ್ಡಾ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ/ ಕೆಮಿಕಲ್‌ ಫರ್ಟಿಲೈಜರ್‌
ಅಮಿತ್‌ ಶಾ – ಗೃಹ ಸಚಿವಾಲಯ / ಸಹಕಾರ ಸಚಿವಾಲಯ
ನಿತಿನ್‌ ಗಡ್ಕರಿ – ರಸ್ತೆ ಸಾರಿಗೆ ಮತ್ತು ಹೆದ್ದಾರಿ
ಎಸ್‌.ಎಸ್‌. ಚೌಹಾಣ್‌ – ಕೃಷಿ ಮತ್ತು ರೈತರ ಕಲ್ಯಾಣ/ ಗ್ರಾಮೀಣಾಭಿವೃದ್ಧಿ.
ನಿ.ಸೀತಾರಾಮನ್‌ – ಹಣಕಾಸು ಸಚಿವಾಲಯ
ಎಸ್‌.ಜೈಶಂಕರ್‌ – ವಿದೇಶಾಂಗ ಸಚಿವಾಲಯ
ಎಚ್‌ಡಿ.ಕುಮಾರಸ್ವಾಮಿ – ಬೃಹತ್‌ ಕೈಗಾರಿಕೆ/ ಉಕ್ಕು
ಗಜೇಂದ್ರ ಸಿಂಗ್‌ ಶೇಖಾವತ್‌ – ಪ್ರವಾಸೋದ್ಯಮ/ ಸಂಸ್ಕೃತಿ
ಅಶ್ವಿನಿ ವೈಷ್ಣವ್‌ – ಮಾಹಿತಿ ಮತ್ತು ಪ್ರಸಾರ/ ರೈಲ್ವೆ
ರಾಮಮೋಹನ ನಾಯ್ಡು – ನಾಗರೀಕ ವಿಮಾನಯಾನ
ಧರ್ಮೇಂದ್ರ ಪ್ರದಾನ – ಮಾನವ ಸಂಪನ್ಮೂಲ ಅಭಿವೃದ್ಧಿ
ಅನ್ನಪೂರ್ಣಾ ದೇವಿ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಭೂಪೇಂದ್ರ ಯಾದವ್‌ – ಪರಿಸರ ಅರಣ್ಯ ಹವಾಮಾನ ಬದಲಾವಣೆ
ಸಿಆರ್‌ ಪಾಟೀಲ್‌ – ಜಲಶಕ್ತಿ
ಕಿರಣ್‌ ರಿಜಿಜು – ಸಂಸದೀಯ ವ್ಯವಹಾರ
ರವನೀತ್‌ ಸಿಂಗ್‌ ಬಿಟ್ಟು – ಅಲ್ಪಸಂಖ್ಯಾತ ವ್ಯವಹಾರ
ಜ್ಯೋತಿರಾಧಿತ್ಯ ಸಿಂಧ್ಯಾ – ಟೆಲಿಕಾಂ
ಗಿರಿರಾಜ್‌ ಸಿಂಗ್‌ – ಜವಳಿ
ಪ್ರಹ್ಲಾದ್‌ ಜೋಶಿ – ಗ್ರಾಹಕರ ವ್ಯವಹಾರ, ಆಹಾರ ಮತ್ತು ನಾಗರೀಕ ಸರಬರಾಜು
ಹರ್ದೀಪ್‌ ಸಿಂಗ್‌ ಪುರಿ – ಪೆಟ್ರೋಲಿಯಂ.
ಪಿಯುಷ್‌ ಗೋಯಲ್‌ – ವಾಣಿಜ್ಯ ಮತ್ತು ಕೈಗಾರಿಕೆ.
ಜಿತನ್‌ರಾಮ್‌ ಮಾಂಝಿ – ಸಣ್ಣ ಮತ್ತು ಮಧ್ಯಮ ಕೈಗಾರಿಕೆ.
ರಾಜೀವ್‌ ರಂಜನ್‌ಸಿಂಗ್‌ – ಪಂಚಾಯತ್‌ ರಾಜ್‌, ಮೀನುಗಾರಿಕೆ, ಪಶುಸಂಗೋಪನೆ.
ಸರ್ಬಾನಂದ ಸೋನಾವಾಲ್‌ – ಬಂದರು, ಜಲಸಾರಿಗೆ.
ಡಾ.ವೀರೇಂದ್ರ ಕುಮಾರ್‌ – ಸಾಮಾಜಿಕ ನ್ಯಾಯ ಸಬಲೀಕರಣ.
ರಾಮ್‌ ಮೋಹನ್‌ ನಾಯ್ಡು – ನಾಗರೀಕ ವಿಮಾನಯಾನ
ಜೋಯಲ್‌ ಓರಾಂ – ಬುಡಕಟ್ಟು ಅಭಿವೃದ್ಧಿ.
ಡಾಎಂ.ಮಂಡಾವಿಯ – ಕಾರ್ಮಿಕ ಕಲ್ಯಾಣ/ ಯುವಜನ ಮತ್ತು ಕ್ರೀಡೆ.
ಜಿ.ಕಿಶನ್‌ ರೆಡ್ಡಿ – ಕಲ್ಲಿದ್ದಲು/ ಗಣಿ
ಚಿರಾಗ್‌ ಪಾಸ್ವಾನ್‌ – ಆಹಾರ ಸಂಸ್ಕರಣಾ ಕೈಗಾರಿಕೆ

ರಾಜ್ಯ ಸಚಿವರು :
ರಾವ್‌ ಇಂದ್ರಜಿತ್‌ಸಿಂಗ್‌ – ವಿಜ್ಞಾನ ತಂತ್ರಜ್ಞಾನ.
ಜಿತೇಂದ್ರ ಸಿಂಗ್‌ – ಭೂ ವಿಜ್ಞಾನ
ಎ.ರಾಮ್‌ಮೇಘವಾಲ್‌ – ಕಾನೂನು ಮತ್ತು ನ್ಯಾಯ/ ಸಂಸದೀಯ ವ್ಯವಹಾರ
ಪ್ರತಾಪ್‌ರಾವ್‌ ಜಾಧವ್‌ – ಆಯುಷ್‌ ಇಲಾಖೆ (ಆರೋಗ್ಯ ರಾಜ್ಯ ಖಾತೆ)
ಜಯಂತ್‌ ಚೌಧರಿ – ಕೌಶಲ್ಯಾಭಿವೃದ್ಧಿ / ಶಿಕ್ಷಣ (ರಾಜ್ಯಖಾತೆ)

ವಿವಿಧ ಖಾತೆಗಳ ರಾಜ್ಯ ಸಚಿವರು :
1.ಜಿತಿನ್‌ ಪ್ರಸಾದ್‌ – ವಾಣಿಜ್ಯ ಮತ್ತು ಕೈಗಾರಿಕೆ / ಮಾಹಿತಿ ತಂತ್ರಜ್ಞಾನ
2.ಶ್ರೀಪಾದ್‌ ನಾಯ್ಕ್‌ – ಇಂಧನ
3.ಪಂಕಜ್‌ ಚೌಧರಿ – ಹಣಕಾಸು
4.ಕ್ರಿಷನ್‌ಪಾಲ್‌ ಗುರ್ಜಾರ್‌ – ಸಹಕಾರ
5.ರಾಮ್‌ದಾಸ್‌ ಅಠಾವಳೆ – ನ್ಯಾಯ ಸಬಲೀಕರಣ
6.ರಾಮನಾಥ್‌ ಠಾಕೂರ್‌ – ಕೃಷಿ/ ರೈತರ ಸಬಲೀಕರಣ
7.ನಿತ್ಯಾನಂದ ರಾಯ್‌ – ಗೃಹ ಸಚಿವಾಲಯ
8.ಅನುಪ್ರಿಯಾ ಪಟೇಲ್‌ – ಆರೋಗ್ಯ/ ರಾಸಾಯನಿಕ, ಗೊಬ್ಬರ
10.ವಿ.ಸೋಮಣ್ಣ – ಜಲಶಕ್ತಿ/ ರೈಲ್ವೆ
11.ಚಂದ್ರಶೇಖರ್‌ ಪೆಮ್ಮಸಾನಿ- ಗ್ರಾಮೀಣ ಅಭಿವೃದ್ಧಿ/ ಸಂವಹನ
12.ಎಸ್‌.ಸಿ.ಸಿಂಗ್‌ ಬಘೇಲ್‌ – ಪಶುಸಂಗೋಪನೆ/ ಮೀನುಗಾರಿಕೆ/ ಪಂಚಾಯತ್‌ ರಾಜ್‌
13.ಶೋಭಾ ಕರಂದ್ಲಾಜೆ – ಸಣ್ಣ, ಮಧ್ಯಮ ಕೈಗಾರಿಕೆ/ ಕಾರ್ಮಿಕ
14.ಕೀರ್ತಿವಧನ್‌ ಸಿಂಗ್‌- ಪರಿಸರ/ ಅರಣ್ಯ/ ವಿದೇಶಾಂಗ ವ್ಯವಹಾರ/ ಹವಾಮಾನ ಬದಲಾವಣೆ
15.ಬಿ.ಎಲ್‌.ವರ್ಮಾ- ಗ್ರಾಹಕ ವ್ಯವಹಾರ/ ಆಹಾರ ಪೂರೈಕೆ/ ಸಾಮಾಜಿ ನ್ಯಾಯ ಸಬಲೀಕರಣ
16.ಶಾಂತನು ಠಾಕೂರ್‌- ಬಂದರು, ಜಲಸಾರಿಗೆ
17.ಸುರೇಶ್‌ ಗೋಪಿ- ನೈಸರ್ಗಿಕ ಅನಿಲ/ ಪ್ರವಾಸೋದ್ಯಮ
18.ಡಾ.ಎಲ್‌.ಮುರುಗನ್‌ – ಮಾಹಿತಿ ಪ್ರಸಾರ/ ಸಂಸದೀಯ ವ್ಯವಹಾರ
19.ಅಜಯ್‌ ಟಮ್ಟಾ- ಸಾರಿಗೆ/ ಹೆದ್ದಾರಿ
20.ಬಂಡಿ ಸಂಜಯ್‌ ಕುಮಾರ್‌ – ಗೃಹ ಸಚಿವಲಾಯ
21.ಕಮಲೇಶ್‌ ಪಾಸ್ವಾನ್‌- ಗ್ರಾಮೀಣ ಅಭಿವೃದ್ಧಿ
22.ಭಾಗೀರಥ ಚೌಧರಿ- ಕೃಷಿ/ ರೈತರ ಸಬಲೀಕರಣ
23.ಸತೀಶ್‌ಚಂದ್ರ ದುಬೆ- ಕಲ್ಲಿದ್ದಲು/ ಗಣಿಗಾರಿಕೆ
24.ಸಂಜಯ್‌ ಸೇಠ್‌- ರಕ್ಷಣಾ ಇಲಾಖೆ
25.ರವನೀತ್‌ ಸಿಂಗ್‌ ಬಿಟ್ಟು- ಆಹಾರ ಸಂಸ್ಕರಣೆ ಕೈಗಾರಿಕೆ/ ರೈಲ್ವೆ
26.ದುರ್ಗಾದಾಸ್‌ ಉಕೆ – ಬುಡಕಟ್ಟು ವ್ಯವಹಾರ
27.ರಕ್ಷಾ ನಿಖಿಲ್‌ ಖಡ್ಸೆ – ಯುವಜನ ಕ್ರೀಡೆ.
28.ಸುಖಾಂತಾ ಮಜುಂದಾರ್‌ – ಶಿಕ್ಷಣ, ಈಶಾನ್ಯ ರಾಜ್ಯಗಳ ಅಭಿವೃದ್ದಿ
29.ಸಾವಿತ್ರಿ ಠಾಕೂರ್‌ – ಮಹಿಳೆ ಮತ್ತು ಮಕ್ಕಳ ಅಭಿವೃದ್ಧೊ
30.ತೋಕನ್‌ ಸಾಹುಲ್‌ –
31.ರಾಜ್‌ಭೂಷಣ್‌ ಚೌಧರಿ
32.ಭೂಪತಿರಾಜು ಶ್ರೀನಿವಾಸ್‌ ವರ್ಮಾ
33.ಹರ್ಷ ಮಲ್ಹೋತ್ರಾ-
34.ನಿಮುಬೆನ್‌ ಬಂಬಿನಿಯಾ –
35.ಮುರಳಿಧರ್‌ ಮೊಹಲ್‌
36.ಜಾರ್ಜ್‌ ಕುರಿಯನ್‌
37.ಪಬಿತ್ರ ಮಾರ್ಗರಿಟ

RELATED ARTICLES

Latest News