ಬೆಂಗಳೂರು,ಮಾ.30- ಲೋಕಸಭೆಯ 18ನೇ ಅವಧಿಗೆ ನಡೆಯುತ್ತಿರುವ ಚುನಾವಣೆಗಾಗಿ ಪ್ರಮುಖ ರಾಷ್ಟ್ರೀಯ ಪಕ್ಷಗಳು ತಮ್ಮ ಎಲ್ಲಾ ಅಭ್ಯರ್ಥಿಗಳನ್ನು ಪ್ರಕಟಿಸುವ ಮೂಲಕ ಚುನಾವಣಾ ಕಣ ಕಾವೇರಲಾರಂಭಿಸಿದೆ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿಯೊಂದಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಜೆಡಿಎಸ್, ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಹುರಿಯಾಳುಗಳನ್ನು ನಿಲ್ಲಿಸಿದ್ದರೆ, ಉಳಿದ 25 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿದ್ದಾರೆ.
ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಯಾವುದೇ ಪಕ್ಷದೊಂದಿಗೆ ಮೈತ್ರಿ ಇಲ್ಲದೆ 28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ವಿವಿಧ ಪಕ್ಷಗಳೊಂದಿಗೆ ಇಂಡಿಯಾ ರಾಜಕೀಯ ಕೂಟವನ್ನು ರಚಿಸಿಕೊಂಡಿದೆ. ಆದರೆ ಆ ಪಕ್ಷಗಳಿಂದ ಈವರೆಗೆ ಯಾವುದೇ ಅಭ್ಯರ್ಥಿಗಳು ಕಣದಲ್ಲಿರುವುದು ಕಂಡುಬಂದಿಲ್ಲ.
ನಿನ್ನೆ ಜೆಡಿಎಸ್ ತನ್ನ ಮೂರು ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಪ್ರಕಟಿಸಿತ್ತು. ಇಂದು ಬೆಳಗ್ಗೆ ಕಾಂಗ್ರೆಸ್ ಕೊನೆಯದಾಗಿ ಕೋಲಾರ ಕ್ಷೇತ್ರಕ್ಕೆ ಕೆ.ವಿ.ಗೌತಮ್ ಅವರನ್ನು ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಮೂರು ಪಕ್ಷಗಳು ತಮ್ಮ ಹುರಿಯಾಳುಗಳನ್ನು ಅಖಾಡಕ್ಕಿಳಿಸಿವೆ.
ಕಾಂಗ್ರೆಸ್‍ಗೆ 4 ಕ್ಷೇತ್ರಗಳಲ್ಲಿ ಬಂಡಾಯದ ಆತಂಕ ಇದ್ದರೆ ಬಿಜೆಪಿಗೆ 7ರಿಂದ 8 ಕ್ಷೇತ್ರಗಳಲ್ಲಿ ಅಸಮಾಧಾನಿತರ ಕಾವು ಹೆಚ್ಚಾಗಿದೆ. ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಏ.4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಕಣದಲ್ಲಿರುವ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು
ಚಿಕ್ಕೋಡಿ : ಅಣ್ಣಾಸಾಹೇಬ್‍ಜೊಲ್ಲೆ (ಬಿಜೆಪಿ) ಪ್ರಿಯಾಂಕ ಜಾರಕಿಹೊಳ್ಳಿ
ಬೆಳಗಾವಿ : ಜಗದೀಶ್ ಶೆಟ್ಟರ್(ಬಿಜೆಪಿ) ಮೃಣಾಳ್ ಹೆಬ್ಬಾಳ್ಕರ್
ಬಾಗಲಕೋಟೆ : ಪಿ.ಸಿ.ಗದ್ದೀಗೌಡರ್(ಬಿಜೆಪಿ) ಸಂಯುಕ್ತ.ಎಸ್.ಪಾಟೀಲ್
ಬಿಜಾಪುರ : ರಮೇಶ್ ಜಿಗಜಿಣಗಿ(ಬಿಜೆಪಿ) ಎ.ರಾಜು ಅಲಗೂರು
ಕಲಬುರಗಿ : ಉಮೇಶ್ ಜಾಧವ್(ಬಿಜೆಪಿ) ರಾಧಾಕೃಷ್ಣ ದೊಡ್ಡಮನಿ
ರಾಯಚೂರು : ರಾಜಾ ಅಮರೇಶ್ವರ್ ನಾಯಕ(ಬಿಜೆಪಿ) ಜಿ.ಕುಮಾರ್‍ನಾಯಕ್
ಬೀದರ್ : ಭಗವಂತ ಖೂಬಾ(ಬಿಜೆಪಿ) ಸಾಗರ್ ಖಂಡ್ರೆ
ಕೊಪ್ಪಳ : ಬಸವರಾಜ್ ಕಾವಟರ್ (ಬಿಜೆಪಿ) ರಾಜಶೇಖರ ಹಿಟ್ನಾಳ್
ಬಳ್ಳಾರಿ : ಬಿ.ಶ್ರೀರಾಮುಲು(ಬಿಜೆಪಿ) ಇ.ತುಕಾರಾಂ
ಹಾವೇರಿ : ಬಸವರಾಜ ಬೊಮ್ಮಾಯಿ(ಬಿಜೆಪಿ) ಆನಂದಸ್ವಾಮಿ ಗಡ್ಡದೇವರ ಮಠ
ಧಾರವಾಡ : ಪ್ರಹ್ಲಾದ್ ಜೋಶಿ(ಬಿಜೆಪಿ) ವಿನೋದ್ ಅಸೋಟಿ
ಉತ್ತರಕನ್ನಡ : ವಿಶ್ವೇಶ್ವರ ಹೆಗಡೆ ಕಾಗೇರಿ(ಬಿಜೆಪಿ) ಅಂಜಲಿ ನಿಂಬಾಳ್ಕರ್
ದಾವಣಗೆರೆ : ಗಾಯತ್ರಿ ಸಿದ್ಧೇಶ್ವರ್ (ಬಿಜೆಪಿ) ಪ್ರಭಾ ಮಲ್ಲಿಕಾರ್ಜುನ್
ಶಿವಮೊಗ್ಗ : ಬಿ.ವೈ.ರಾಘವೇಂದ್ರ(ಬಿಜೆಪಿ) ಗೀತಾ ಶಿವರಾಜ್‍ಕುಮಾರ್
ಉಡುಪಿ-ಚಿಕ್ಕಮಗಳೂರು : ಕೋಟಾ ಶ್ರೀನಿವಾಸಪೂಜಾರಿ(ಬಿಜೆಪಿ) ಜಯಪ್ರಕಾಶ್ ಹೆಗ್ಡೆ
ಹಾಸನ : ಪ್ರಜ್ವಲ್ ರೇವಣ್ಣ (ಜೆಡಿಎಸ್) ಶ್ರೇಯಸ್ ಪಟೇಲ್ ಗೌಡ
ದಕ್ಷಿಣ ಕನ್ನಡ : ಬ್ರಿಜೇಶ್ ಚೌಟ(ಬಿಜೆಪಿ) ಪದ್ಮರಾಜ್
ಚಿತ್ರದುರ್ಗ : ಗೋವಿಂದ ಕಾರಜೋಳ(ಬಿಜೆಪಿ) ಬಿ.ಎನ್.ಚಂದ್ರಪ್ಪ
ತುಮಕೂರು : ವಿ.ಸೋಮಣ್ಣ (ಬಿಜೆಪಿ) ಎಸ್.ಪಿ.ಮುದ್ದಹನುಮೇಗೌಡ
ಮಂಡ್ಯ : ಎಚ್.ಡಿ.ಕುಮಾರಸ್ವಾಮಿ( ಜೆಡಿಎಸ್) ವೆಂಕಟರಮಣೇ ಗೌಡ
ಮೈಸೂರು : ಯದುವೀರ್ ಒಡೆಯರ್ (ಬಿಜೆಪಿ) ಎಂ.ಲಕ್ಷ್ಮಣ್
ಚಾಮರಾಜನಗರ : ಎಸ್.ಬಾಲರಾಜ್(ಬಿಜೆಪಿ) ಸುನೀಲ್ ಬೋಸ್
ಬೆಂಗಳೂರು ಗ್ರಾ. : ಡಾ.ಸಿ.ಎನ್.ಮಂಜುನಾಥ್ (ಬಿಜೆಪಿ) ಡಿ.ಕೆ.ಸುರೇಶ್
ಬೆಂಗಳೂರು ಉತ್ತರ : ಶೋಭಾ ಕರಂದ್ಲಾಜೆ(ಬಿಜೆಪಿ) ರಾಜೀವ್ ಗೌಡ
ಬೆಂಗಳೂರು ಕೇಂದ್ರ : ಪಿ.ಸಿ.ಮೋಹನ್(ಬಿಜೆಪಿ) ಮನ್ಸೂರ್ ಆಲಿಖಾನ್
ಬೆಂಗಳೂರು ದಕ್ಷಿಣ : ತೇಜಸ್ವಿ ಸೂರ್ಯ(ಬಿಜೆಪಿ) ಸೌಮ್ಯ ರೆಡ್ಡಿ
ಚಿಕ್ಕಬಳ್ಳಾಪುರ : ಡಾ.ಕೆ.ಸುಧಾಕರ್ (ಬಿಜೆಪಿ) ರಕ್ಷಾ ರಾಮಯ್ಯ
ಕೋಲಾರ : ಎಂ.ಮಲ್ಲೇಶ್ ಬಾಬು( ಜೆಡಿಎಸ್) ಕೆ.ವಿ.ಗೌತಮ್