Monday, April 21, 2025
Homeರಾಜ್ಯಓಂ ಪ್ರಕಾಶ್‌ ಹತ್ಯೆ ಪ್ರಕರಣದಲ್ಲಿ ತನಿಖೆಯಾಗದೆ ಹೇಳಿಕೆ ನೀಡಲು ಸಾಧ್ಯವಿಲ್ಲ : ಗೃಹಸಚಿವ ಪರಮೇಶ್ವರ್‌

ಓಂ ಪ್ರಕಾಶ್‌ ಹತ್ಯೆ ಪ್ರಕರಣದಲ್ಲಿ ತನಿಖೆಯಾಗದೆ ಹೇಳಿಕೆ ನೀಡಲು ಸಾಧ್ಯವಿಲ್ಲ : ಗೃಹಸಚಿವ ಪರಮೇಶ್ವರ್‌

Cannot make statement without investigation in Om Prakash murder case

ಬೆಂಗಳೂರು,ಏ.21- ನಿವೃತ್ತ ಡಿಜಿಪಿ ಓಂ ಪ್ರಕಾಶ್‌ ಹತ್ಯೆ ಪ್ರಕರಣದಲ್ಲಿ ಅವರ ಶ್ರೀಮತಿಯವರನ್ನು ವಿಚಾರಣೆ ನಡೆಸಲಾ ಗುತ್ತಿದ್ದು, ಎಲ್ಲಾ ದೃಷ್ಟಿಕೋನಗಳಲ್ಲೂ ಮಾಹಿತಿ ಕಲೆಹಾಕಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ತನಿಖೆಯಾಗದೇ ಯಾವುದೇ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓಂ ಪ್ರಕಾಶ್‌ರವರು ತಮ ಜೊತೆಯಲ್ಲೂ ಕೆಲಸ ಮಾಡಿದ್ದರು. ತುಂಬಾ ಒಳ್ಳೆಯ ವ್ಯಕ್ತಿ. ಈ ರೀತಿ ಆಗಬಾರದಿತ್ತು ಎಂದು ವಿಷಾದಿಸಿದರು.
ನಿನ್ನೆ ನನಗೆ ಅಧಿಕಾರಿಗಳು ಮಾಹಿತಿ ನೀಡಿ ಕೊಲೆಯಾಗಿರುವ ಬಗ್ಗೆ ತಿಳಿಸಿದರು. ಅವರ ಶ್ರೀಮತಿಯವರು ಕೊಲೆ ಮಾಡಿರುವ ಶಂಕೆಯಿದ್ದು, ವಿಚಾರಣೆ ನಡೆಯುತ್ತಿದೆ. ಯಾವ ಕಾರಣಕ್ಕೆ ಹತ್ಯೆಯಾಗಿದೆ ಎಂಬುದನ್ನು ತನಿಖೆಯ ಬಳಿಕವೇ ಹೇಳಲು ಸಾಧ್ಯ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ಇದೇ ಕಾರಣಕ್ಕೆ ಕೃತ್ಯ ನಡೆದಿದೆ ಎಂದು ಹೇಳಲು ಸಾಧ್ಯವಿಲ್ಲ. ಐಪಿಎಸ್‌‍ ಅಧಿಕಾರಿಗಳ ವಾಟ್ಸಪ್‌ ಗ್ರೂಪ್‌ನಲ್ಲೂ ಸಂದೇಶಗಳು ರವಾನೆಯಾಗಿದ್ದರೆ ಅದರ ಬಗ್ಗೆಯೂ ತನಿಖೆ ನಡೆಸಲಾಗುವುದು. ಅಕ್ರಮ ಸಂಬಂಧ ಸೇರಿದಂತೆ ಯಾವುದೇ ವಿಚಾರಗಳಿದ್ದರೂ ತನಿಖೆ ನಡೆಯಲಿದೆ ಎಂದು ತಿಳಿಸಿದರು.

ಕಿರುಕುಳ ತಾಳಲಾರದೇ ಆತರಕ್ಷಣೆಗಾಗಿ ಕೊಲೆ ಮಾಡಿದ್ದೇನೆ ಎಂದು ಅವರ ಶ್ರೀಮತಿಯವರು ಹೇಳಿಕೆ ನೀಡಿದ್ದಾರೆ ಅದನ್ನೂ ಪರಿಶೀಲನೆ ನಡೆಸಲಾಗುವುದು. ಪೊಲೀಸರು ನನಗೆ ಬೇರೆ ಯಾವ ವಿಚಾರಗಳನ್ನೂ ತಿಳಿಸಿಲ್ಲ. ಊಹಾಪೋಹ ಮಾಡಿ ಏನೋ ಒಂದು ಹೇಳಲು ಸಾಧ್ಯವಿಲ್ಲ ಎಂದರು. ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಗಂಭೀರ ಚರ್ಚೆ ನಡೆಯುತ್ತಿದೆ. ಯಾವ್ಯಾವ ಶಸಾ್ತ್ರಸ್ತ್ರಗಳನ್ನು ಬಳಸಿದ್ದಾರೆ, ಯಾವುದಾದರೂ ಕುರುಹುಗಳು ಸಿಗಲಿವೆಯೇ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಇಂತಹ ಘಟನೆಗಳನ್ನು ನಿಯಂತ್ರಣ ಮಾಡಲು ಹೆಚ್ಚು ಒತ್ತು ನೀಡುವುದಾಗಿ ತಿಳಿಸಿದರು.

RELATED ARTICLES

Latest News