Tuesday, September 17, 2024
Homeರಾಷ್ಟ್ರೀಯ | Nationalಹುತಾತ್ಮ ಕ್ಯಾಪ್ಟನ್‌ ಅಂಶುಮಾನ್‌ ಸಿಂಗ್‌ ಕುಟುಂಬದಲ್ಲಿ ಒಡಕು, ಸೊಸೆ ವಿರುದ್ಧ ಪೋಷಕರ ಅಸಮಾಧಾನ

ಹುತಾತ್ಮ ಕ್ಯಾಪ್ಟನ್‌ ಅಂಶುಮಾನ್‌ ಸಿಂಗ್‌ ಕುಟುಂಬದಲ್ಲಿ ಒಡಕು, ಸೊಸೆ ವಿರುದ್ಧ ಪೋಷಕರ ಅಸಮಾಧಾನ

ನವದೆಹಲಿ,ಜು.12- ಒಡನಾಡಿಗಳನ್ನು ಉಳಿಸುವ ಸಂದರ್ಭದಲ್ಲಿ ಹುತಾತ್ಮರಾಗಿದ್ದ ಕ್ಯಾಪ್ಟನ್‌ ಅಂಶುಮಾನ್‌ ಸಿಂಗ್‌ ಕುಟುಂಬದಲ್ಲಿ ಇದೀಗ ಒಡಕು ಮೂಡಿದೆ. ಇತ್ತೀಚೆಗಷ್ಟೇ ರಾಷ್ಟ್ರಪತಿಯವರಿಂದ ಕೀರ್ತಿ ಚಕ್ರ ಸ್ವೀಕರಿಸಿದ ಬಳಿಕ ಇದೀಗ ಅವರ ಪೋಷಕರು ಹೇಳಿಕೆ ನೀಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಹುತಾತ್ಮ ಯೋಧ ಕ್ಯಾಪ್ಟನ್‌ ಅಂಶುಮಾನ್‌ ಅವರ ಪೋಷಕರು ತಮ್ಮ ಹೇಳಿಕೆಯಲ್ಲಿ ತಮ್ಮ ಮಗ ಹುತಾತ್ಮನಾಗಿದ್ದಾನೆ ಆದರೆ ಸೊಸೆ ಎಲ್ಲವನ್ನೂ ತೆಗೆದುಕೊಂಡು ಹೋಗಿದ್ದಾಳೆ ಎಂದು ಹೇಳಿದ್ದಾರೆ.

ನಮಗೆ ಉಳಿದಿರುವುದು ಕೇವಲ ಮಗನ ಫೋಟೋ ಮಾತ್ರ ಎಂದಿದ್ದಾರೆ. ಅದೂ ಅಲ್ಲದೇ ಯೋಧನ ಸಾವಿನ ಸಂದರ್ಭದಲ್ಲಿ ಕುಟುಂಬ ಸದಸ್ಯರಿಗೆ ಆರ್ಥಿಕ ನೆರವು ನೀಡಲು ಭಾರತೀಯ ಸೇನೆಯ ಮುಂದಿನ ಸಂಬಂಧಿಕರ ಮಾನದಂಡವನ್ನು ಬದಲಾಯಿಸಬೇಕೆಂದು ಒತ್ತಾಯಿಸಿದ್ದಾರೆ.

ಕಳೆದ ವರ್ಷ ಸಿಯಾಚಿನ್ನಲ್ಲಿ ಹುತಾತ್ಮರಾದ ಅಂಶುಮಾನ್‌ ಸಿಂಗ್‌ ಅವರಿಗೆ ಜುಲೈ 5 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮರಣೋತ್ತರವಾಗಿ ಕೀರ್ತಿ ಚಕ್ರವನ್ನು ನೀಡಿ ಗೌರವಿಸಿದರು.

ಹುತಾತ ಯೋಧ ಅಂಶುಮಾನ್‌ ಸಿಂಗ್‌ ಅವರ ಪತ್ನಿ ಸತಿ ಸಿಂಗ್‌ ಮತ್ತು ಅವರ ತಾಯಿ ಮಂಜು ದೇವಿ ಈ ಗೌರವವನ್ನು ಸ್ವೀಕರಿಸಿದರು. ಆದರೆ ಇದೀಗ ಮಾಧ್ಯಮದವರೊಂದಿಗೆ ಮಾತನಾಡಿದ ಹುತಾತ್ಮ ಯೋಧನ ಪೋಷಕರು ತಮ ಸೊಸೆ ಸತಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮ ಮಗ ಹುತಾತನಾಗಿದ್ದರೂ ಏನೂ ಸಿಗಲಿಲ್ಲ. ಸೊಸೆ ಗೌರವ ಮತ್ತು ಪರಿಹಾರದ ಮೊತ್ತ ಎರಡನ್ನೂ ತೆಗೆದುಕೊಂಡಿದ್ದಾಳೆ. ಮಗನೂ ಹೊರಟುಹೋದ, ಸೊಸೆಯೂ ಹೊರಟುಹೋದಳು.

ಹುತಾತ್ಮ ಯೋಧ ಕ್ಯಾಪ್ಟನ್‌ ಅಂಶುಮಾನ್‌ ಸಿಂಗ್‌ ಅವರ ತಂದೆ ರವಿ ಪ್ರತಾಪ್‌ ಸಿಂಗ್‌, ಎನ್‌ಒಕೆ (ಸಂಬಂಧಿಕರ ಮುಂದಿನ) ಮಾನದಂಡದಲ್ಲಿ ಬದಲಾವಣೆಯನ್ನು ಬಯಸುವುದಾಗಿ ಹೇಳಿದ್ದಾರೆ. ಇದಕ್ಕಾಗಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಜೊತೆಗೂ ಮಾತುಕತೆ ನಡೆಸಲಾಗಿದೆ.

ಇದಲ್ಲದೇ ಎರಡು ದಿನಗಳ ಹಿಂದೆ ರಾಹುಲ್‌ ಗಾಂಧಿಯವರನ್ನು ಭೇಟಿಯಾದ ಸಂದರ್ಭದಲ್ಲೂ ಇದರಲ್ಲಿ ಬದಲಾವಣೆಯ ಆಶಯವನ್ನು ವ್ಯಕ್ತಪಡಿಸಿದ್ದಾರೆ. ತನ್ನ ಮಗನಿಗೆ 5 ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಅವನಿಗೆ ಯಾವುದೇ ಮಗು ಇಲ್ಲ ಆದರೆ ಈಗ ನಮ ಬಳಿ ಮಗನ ಫೋಟೋ ಹೊರತುಪಡಿಸಿ ಏನೂ ಇಲ್ಲ ಎಂದು ಅವರು ಹೇಳಿದರು.

ಸೊಸೆ ಈಗ ತಮನ್ನು ಬಿಟ್ಟು ಹೋಗಿದ್ದು, ವಿಳಾಸವನ್ನೂ ಬದಲಾಯಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಕೀರ್ತಿ ಚಕ್ರ ಸ್ವೀಕರಿಸುವಾಗ ಅವರ ಪತ್ನಿ (ಹುತಾತ ಅಂಶುಮಾನ್‌ ಅವರ ತಾಯಿ) ಜೊತೆಗಿದ್ದರೂ ಈಗ ನಮ ಮಗನ ಪೆಟ್ಟಿಗೆಗೆ ಹಾಕಲು ಏನೂ ಇಲ್ಲ ಎಂದು ತಂದೆ ಹೇಳಿದರು. ನಮಗೆ ಆದದ್ದು ಯಾರಿಗೂ ಆಗಬಾರದು ಎಂದು ತಂದೆ ಹೇಳಿದರು.

ಕ್ಯಾಪ್ಟನ್‌ ಸಿಂಗ್‌ ಸಿಯಾಚಿನ್‌ ಗ್ಲೇಸಿಯರ್‌ ಪ್ರದೇಶದಲ್ಲಿ ವೈದ್ಯಕೀಯ ಅಧಿಕಾರಿಯಾಗಿ 26 ಪಂಜಾಬ್ನೊಂದಿಗೆ ನಿಯೋಜಿಸಲ್ಪಟ್ಟರು. ಜುಲೈ 19, 2023 ರಂದು, ಬೆಳಿಗ್ಗೆ 3 ಗಂಟೆಯ ಸುಮಾರಿಗೆ ಭಾರತೀಯ ಸೇನೆಯ ಮದ್ದುಗುಂಡುಗಳ ಡಂಪ್ನಲ್ಲಿ ಶಾರ್ಟ್‌ ಸರ್ಕ್ಯೂಟ್‌ ಬೆಂಕಿ ಅವಘಡ ಉಂಟಾಗಿತ್ತು. ಈ ವೇಳೆ ತಮ ಸಹೋದ್ಯೋಗಿಗಳ ರಕ್ಷಣೆಗೆ ಪ್ರಾಣವನ್ನೇ ಅರ್ಪಿಸಿದ್ದರು. ಹುತಾತ ಯೋಧ ಕ್ಯಾಪ್ಟನ್‌ ಅಂಶುಮಾನ್‌ ಸಿಂಗ್‌ ಅವರ ಪೋಷಕರ ಈ ಆರೋಪಗಳಿಗೆ ಪತ್ನಿ ಸತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

RELATED ARTICLES

Latest News