Tuesday, February 25, 2025
Homeಜಿಲ್ಲಾ ಸುದ್ದಿಗಳು | District Newsಕೋಲಾರ | Kolarಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಕಾರು ಚಾಲಕನಿಗೆ 20 ವರ್ಷ ಜೈಲು ಶಿಕ್ಷೆ

ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಕಾರು ಚಾಲಕನಿಗೆ 20 ವರ್ಷ ಜೈಲು ಶಿಕ್ಷೆ

Car driver sentenced to 20 years in prison for kidnapping and raping a minor girl

ಕೋಲಾರ,ಫೆ.15- ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಕಾರು ಚಾಲಕನಿಗೆ ಕೋಲಾರ ಪೋಕ್ಸೋ ವಿಶೇಷನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಹಾಗೂ 45 ಸಾವಿರ ದಂಡ ವಿಧಿಸಿದೆ.

ಮುಳಬಾಗಿಲು ಮಾರುತಿನಗರದ ವಾಸಿ ಗಂಗಾಧರ್ ಅಲಿಯಾಸ್ ತೇಜು ಬಿನ್ ಸಾದಪ್ಪ ಅತ್ಯಾಚಾರವೆಸಗಿ ಜೈಲು ಶಿಕ್ಷೆಗೊಳಗಾದ ಕಾರು ಚಾಲಕ. ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿಕೊಂಡು ಹೋಗಿ ಅತ್ಯಾಚಾರ ಮಾಡಿದ ಸಂಬಂಧ 2023ರ ಮೇ 17ರಂದು ನೀಡಿದ ದೂರಿನ ಮೇರೆಗೆ ಕಲಂ 6. ಪೊಕ್ಸೋ ಕಾಯ್ದೆಯಡಿ ಹಾಗು ಕಲಂ 9 ಬಾಲ್ಯ ವಿವಾಹ ನಿಷೇಧ ಕಾಯ್ದೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ತನಿಖೆ ನಡೆಸಿದ ಬೇತಮಂಗಲ ಠಾಣೆಯ ವೃತ್ತ ನಿರೀಕ್ಷಕರು ಆರೋಪಿಯ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಬಿ.ಪ್ರಸಾದ್ ಅವರು ಅಪರಾಧಿಗೆ ಕಲಂ 6 ಪೋಟೊ ಕಾಯ್ದೆಯಡಿ ಹಾಗು ಕಲಂ 9 ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿಯಲ್ಲಿ 20 ವರ್ಷ ಜೈಲು ಶಿಕ್ಷೆ ಹಾಗೂ 45 ಸಾವಿರ ದಂಡ ವಿಧಿಸಿದ್ದಾರೆ. ಜೊತೆಗೆ ಸಂತ್ರಸ್ತ ಬಾಲಕಿಗೆ ಸರ್ಕಾರದ ವತಿಯಿಂದ 4 ಲಕ್ಷ ಪರಿಹಾರ ನೀಡಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷಸರ್ಕಾರಿ ಅಭಿಯೋಜಕಿ ಡಿ.ಲಲಿತಕುಮಾರಿ ವಾದ ಮಂಡಿಸಿದ್ದರು.

RELATED ARTICLES

Latest News