Tuesday, August 12, 2025
Homeರಾಷ್ಟ್ರೀಯ | Nationalಚೆನ್ನೈ ಬರುತ್ತಿದ್ದ ವಿದೇಶಿ ಸರಕು ವಿಮಾನದಲ್ಲಿ ಬೆಂಕಿ

ಚೆನ್ನೈ ಬರುತ್ತಿದ್ದ ವಿದೇಶಿ ಸರಕು ವಿಮಾನದಲ್ಲಿ ಬೆಂಕಿ

Cargo plane from Kuala Lumpur lands safely in Chennai after engine catches fire

ಚೆನ್ನೈ, ಆ. 12 (ಪಿಟಿಐ) ಇಲ್ಲಿಗೆ ಆಗಮಿಸುತ್ತಿದ್ದ ಅಂತರರಾಷ್ಟ್ರೀಯ ಸರಕು ವಿಮಾನದ ಒಂದು ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು, ಆದರೆ ವಿಮಾನ ಇಲ್ಲಿ ಇಳಿದ ನಂತರ ಬೆಂಕಿಯನ್ನು ನಂದಿಸಲಾಗಿದೆ.

ಅದೃಷ್ಟವಶಾತ್‌ ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ. ವಿಮಾನವು ಮಲೇಷ್ಯಾದ ಕುಲಾಲುಂಪುರ್‌ ಚೆನ್ನೈಗೆ ಆಗಮಿಸುತ್ತಿತ್ತು.ಸರಕು ವಿಮಾನದ ನಾಲ್ಕನೇ ಎಂಜಿನ್‌ನಲ್ಲಿ ಲ್ಯಾಂಡಿಂಗ್‌ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪೈಲಟ್‌ಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಯಾವುದೇ ತುರ್ತು ಲ್ಯಾಂಡಿಂಗ್‌ ಮಾಡದಿದ್ದರೂ, ಪೈಲಟ್‌ಗಳು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್‌ ಮಾಡಿದ್ದಾರೆ ಎಂದು ಅವರು ಹೇಳಿದರು.ವಾಹನವು ನಗರದ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ಸಜ್ಜಾಗಿ ನಿಂತಿದ್ದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದರು ಎಂದು ಮೂಲಗಳು ತಿಳಿಸಿವೆ.ಬೆಂಕಿಯ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ.

RELATED ARTICLES

Latest News