Wednesday, April 30, 2025
Homeರಾಜ್ಯBREAKING : ಜನಗಣತಿ ಜೊತೆಗೇ ಜಾತಿಗಣತಿ : ಕೇಂದ್ರ ಸರ್ಕಾರ ಮಹತ್ವದ ಘೋಷಣೆ

BREAKING : ಜನಗಣತಿ ಜೊತೆಗೇ ಜಾತಿಗಣತಿ : ಕೇಂದ್ರ ಸರ್ಕಾರ ಮಹತ್ವದ ಘೋಷಣೆ

Caste Census to be included in Population Survey: Cabinet's big decision

ನವದೆಹಲಿ : ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಜನಗಣತಿ ಜೊತೆಯಲ್ಲಿ ಜಾತಿ ಗಣತಿ ನಡೆಸಲು ನಿರ್ಧಾರ ಕೈಗೊಂಡಿದೆ. ನವದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಸಚಿವ ಅಶ್ವಿನ್ ವೈಷ್ಣವ್ ಅವರು ಪಾರದರ್ಶಕವಾಗಿ ದೇಶದಲ್ಲಿ ಜನಗಣತಿಯನ್ನ ನಡೆಸಲಾಗುತ್ತದೆ ಜೊತೆಗೆ ಜಾತಿಗಣತಿಯನ್ನು ಕೂಡ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಈಗಾಗಲೇ ಪ್ರತಿಪಕ್ಷ ಕಾಂಗ್ರೆಸ್ ಜಾತಿ ಗಣತಿಗೆ ಒತ್ತಾಯಿಸಿ ಅಧಿಕಾರದಲ್ಲಿರುವ ಕೆಲವು ರಾಜ್ಯಗಳಲ್ಲಿ ಆಯೋಗವನ್ನು ಕೂಡ ರಚಿಸಿದೆ.

ಸುಮಾರು 14 ವರ್ಷಗಳ ನಂತರ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಭಾರತದಲ್ಲಿ 150 ಕೋಟಿ ಜನರಿದ್ದಾರೆ ಎಂದು ಸಚಿವಾಲಯದ ಅಂಕಿ ಅಂಶಗಳು ವ್ಯಕ್ತವಾಗುತ್ತಿದೆ.

ವಿಶ್ವದ ಅತಿ ದೊಡ್ಡ ಜನಸಂಖ್ಯಾ ರಾಷ್ಟ್ರವೆಂಬ ಪಟ್ಟ ಕಟ್ಟಿಕೊಂಡಿರುವ ಭಾರತದಲ್ಲಿ ಈ ಜಾತಿಗಣತಿ ಮತ್ತು ಜನಗಣತಿ ಕೇಂದ್ರ ಸರ್ಕಾರ ಇದರಲ್ಲಿ ಎಷ್ಟು ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದು ಕಾದುನೋಡಬೇಕಿದೆ. ಒಟ್ಟಾರೆ ಸಚಿವ ಅಶ್ವಿನ್ ವೈಷ್ಣವ್ ಅವರ ಪ್ರಕಾರ ಸದ್ಯದಲ್ಲಿಯೇ ರಾಜ್ಯಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಗೆಳತಿಯನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ.

RELATED ARTICLES

Latest News