ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೆ ಮಾರ್ಚ್‍ಗೆ ಉದ್ಘಾಟನೆ

ಬೆಂಗಳೂರು,ಫೆ.6- ಶ್ರೀರಂಗಪಟ್ಟಣ ಬೈಪಾಸ್ ಕಳೆದ ವಾರ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿರುವುದರಿಂದ, ಬಹುನಿರೀಕ್ಷಿತ ಬೆಂಗಳೂರು-ಮೈಸೂರು ರಸ್ತೆ ಹೆದ್ದಾರಿ ಉದ್ಘಾಟನೆಗೆ ಸಜ್ಜಾಗಿದ್ದು, ಮಾರ್ಚ್ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳುವ ಸಾಧ್ಯತೆಯಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಕಾರ ಎಕ್ಸ್ಪ್ರೆಸ್ವೇ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ 275ನ್ನು 10-ಲೇನ್ ರಸ್ತೆಗೆ ವಿಸ್ತರಿಸಿದೆ. 117-ಕಿಮೀ ಹೆದ್ದಾರಿ ಬೆಂಗಳೂರಿನ ನೈಸ್ ಪ್ರವೇಶದ್ವಾರದಿಂದ ಮೈಸೂರಿನ ರಿಂಗ್ ರೋಡ್ ಜಂಕ್ಷನ್‍ವರೆಗೆ ಪ್ರಯಾಣದ ಸಮಯವನ್ನು ಸರಾಸರಿ ಮೂರು ಗಂಟೆಗಳಿಂದ ಕೇವಲ 90 ನಿಮಿಷಗಳಿಗೆ ಕಡಿತಗೊಳಿಸಲಿದೆ. ಮಾರ್ಚ್ ಮೊದಲ ವಾರದಲ್ಲಿ […]

ಕತ್ತಲ ಕೂಪವಾಗಿದೆ ಬೌರಿಂಗ್ ಅಸ್ಪತ್ರೆ

ಬೆಂಗಳೂರು,ಫೆ.6- ಸರ್ಕಾರಿ ಆಸ್ಪತ್ರೆಗಳೆಂದರೆ ಬೇಜವಬ್ದಾರಿಯ ಕೇಂದ್ರಗಳು ಎಂಬ ಮಾತಿಗೆ ಇಂಬು ಕೊಡುವಂತೆ ನಗರದ ಬೌರಿಂಗ್ ಆಸ್ಪತ್ರೆ ಎರಡು ದಿನಗಳಿಂದ ಕತ್ತಲ ಕೂಪವಾಗಿದ್ದರೂ ಸಂಬಂಧಪಟ್ಟವರ ಕಣ್ಣಿಗೆ ಮಾತ್ರ ಕಾಣುತ್ತಿಲ್ಲ. ಸಾವಿರಾರು ಬಡ ರೋಗಿಗಳಿರುವ ಬೌರಿಂಗ್ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳಿಂದ ಕರೆಂಟ್ ಇಲ್ಲ ಹೀಗಾಗಿ ಅಲ್ಲಿನ ರೋಗಿಗಳು ಕತ್ತಲಲ್ಲೆ ಕಾಲ ಕಳೆಯುವಂತಾಗಿದೆ. ಕರೆಂಟ್ ಇಲ್ಲ ಎಂಬುದು ತಿಳಿದಿದ್ದರೂ ಸಂಬಂಧಪಟ್ಟವರು ಎರಡು ದಿನ ಕಳೆದರೂ ವಿದ್ಯುತ್ ಸಂಪರ್ಕ ಕಲ್ಪಿಸದಿರುವುದು ರೋಗಿಗಳನ್ನು ಕೆರಳಿಸಿದೆ. ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯಲ್ಲಿರುವ ಬೌರಿಂಗ್ ಆಸ್ಪತ್ರೆಗೆ […]

ನಾಳೆ ಚುನಾವಣೆ, ಯಾರಾಗುವರು ಬೆಳಗಾವಿ ಮೇಯರ್..!?

ಬೆಳಗಾವಿ,ಫೆ.5- ಚುನಾವಣೆ ನಡೆದು ಒಂದೂವರೆ ವರ್ಷದ ನಂತರ ಬೆಳಗಾವಿ ಮೇಯರ್, ಉಪಮೇಯರ್ ಹುದ್ದೆಗೆ ನಾಳೆ ಬೆಳಗ್ಗೆ ಚುನಾವಣೆ ನಡೆಯುತ್ತಿದೆ. 2021ರ ಸೆಪ್ಟಂಬರ್ 3ರಂದು ಪಾಲಿಕೆಗೆ ಚುನಾವಣೆ ನಡೆದಿತ್ತು. ಬಿಜೆಪಿ 35 ಸ್ಥಾನ, ಕಾಂಗ್ರೆಸ್ 10 ಹಾಗೂ ಪಕ್ಷೇತರರು 13 ಸ್ಥಾನಗಳನ್ನು ಗೆದ್ದಿದ್ದರು. ಆದರೆ ಈವರೆಗೂ ಸದಸ್ಯರ ಪ್ರತಿಜ್ಞೆ ಸ್ವೀಕರವಾಗಲಿ, ಮೇಯರ್, ಉಪಮೇಯರ್ ಆಯ್ಕೆಯಾಗಲಿ ನಡೆದಿರಲಿಲ್ಲ. ಇದೇ ಮೊದಲ ಬಾರಿಗೆ ಪಕ್ಷದ ಆಧಾರದ ಮೇಲೆ ಚುನಾವಣೆ ನಡೆದಿರುವುದರಿಂದ ಮೇಯರ್, ಉಪಮೇಯರ್ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ. ಕುತೂಹಲ ಕೆರಳಿಸಿದ […]

7ನೇ ವೇತನ ಆಯೋಗಕ್ಕೆ ಸಲಹೆ ಸ್ವೀಕಾರ

ಬೆಂಗಳೂರು,ಫೆ.5- ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆ ಪರಿಷ್ಕರಣೆಗೆ ರಚಿಸಲಾಗಿರುವ ಏಳನೇ ರಾಜ್ಯ ವೇತನ ಆಯೋಗಕ್ಕೆ ವಿವಿಧ ಸಂಘ-ಸಂಸ್ಥೆಗಳು, ಇಲಾಖೆಗಳು ನೀಡಬಹುದಾದ ಸಲಹೆಯನ್ನು ಫೆ.10ರೊಳಗೆಸಲ್ಲಿಸಬಹುದು. ಆಯೋಗಕ್ಕೆ ವಹಿಸಲಾಗಿರುವ ಪರಿಶೀಲನಾ ಅಂಶಗಳಿಗೆ ಸಾರ್ವಜನಿಕರು, ಸೇವಾ ಸಂಘಗಳು, ಸರ್ಕಾರಿ ನೌಕರರು, ಸಂಘಸಂಸ್ಥೆಗಳು, ಇಲಾಖೆಗಳಿಂದ ಮಾಹಿತಿ, ಅನಿಸಿಕೆ ಹಾಗೂ ಮುಕ್ತ ಸಲಹೆ ಪಡೆಯುವ ಉದ್ದೇಶದಿಂದ ವಿವಿಧ ಪ್ರಶ್ನಾವಳಿಗಳನ್ನು ಜ.17ರಂದು ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ಈ ಪ್ರಶ್ನಾವಳಿಗಳು ಆಯೋಗದ ವೆಬ್‍ಸೈಟ್ 7spc.karnataka.gov.in ನಲ್ಲಿ ಲಭ್ಯವಿದ್ದು, ಪ್ರಶ್ನಾವಳಿಗಳಿಗೆ ಉತ್ತರ ಹಾಗೂ ಸಲಹೆಗಳನ್ನು ಫೆ.10ರೊಳಗೆ […]

ಯಡಿಯೂರಪ್ಪನವರನ್ನ ಬಿಜೆಪಿ ಹೈಕಮಾಂಡ್ ಪಂಕ್ಚರ್ ಮಾಡಿದೆ : ಸಿದ್ದರಾಮಯ್ಯ

ಕಲಬುರಗಿ,ಫೆ.5-ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದ್ದು ಏಕೆ ಎಂದು ಬಿಜೆಪಿಯವರು ಮೊದಲು ಉತ್ತರಿಸಲಿ. ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದಾಗಲೇ ಆ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿಲ್ಲ. ಇನ್ನೂ ಈಗ ಯಡಿಯೂರಪ್ಪರನ್ನು ಮೂಲೆ ಗುಂಪು ಮಾಡಲಾಗಿದೆ, ಜನ ಈಗ ಬಿಜೆಪಿಯನ್ನು ನಂಬುತ್ತಾರಾ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ರಥ ಪಂಚರ್ ಆಗದಿದ್ದರೆ ಸಾಕು. ಈಗಾಗಲೇ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಪಂಚರ್ ಮಾಡಿಬಿಟ್ಟಿದೆ. ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು […]

‘ಕಮಿಷನ್ ಪೇ ಚರ್ಚಾ’ ನಡೆಸುವಂತೆ ಕಾಂಗ್ರೆಸ್ ಆಗ್ರಹ

ಬೆಂಗಳೂರು,ಫೆ.5- ಬಿಬಿಎಂಪಿ ವ್ಯಾಪ್ತಿಯ ರಸ್ತೆ ಗುಂಡಿ ಮುಚ್ಚುವಲ್ಲಿ ಭ್ರಹ್ಮಾಂಡ ಭ್ರಷ್ಟಚಾರ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರು ಕಮಿಷನ್ ಪೇ ಚರ್ಚಾ 2023ನ್ನು ನಡೆಸಿ ಎಂದುಮನವಿ ಮಾಡಿದೆ. ಇತ್ತೀಚೆಗೆ ಕಾಂಗ್ರೆಸ್‍ನ್ನು ಅವಹೇಳನ ಮಾಡುವ ಮತ್ತು ಅದರ ಮೇಲಿನ ಆರೋಪಗಳನ್ನು ವೈಭವೀಕರಿಸುವ ಹಲವಾರು ಇಮೇಜ್‍ಗಳು ಹಾಗೂ ವಿಡಿಯೋಗಳನ್ನು ಕೃತಕವಾಗಿ ಸೃಷ್ಟಿಸಿ ಬಿಜೆಪಿ ಟ್ವಿಟರ್ ಸೇರಿದಂತೆ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿತ್ತು. ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದ ಕಾಂಗ್ರೆಸ್, ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ […]

8 ಮಂದಿ ಡಿಸಿಎಂ ಮಾಡುವ ಬಗ್ಗೆ ದೆಹಲಿಯಲ್ಲಿ ಬಿಜೆಪಿ ಸಭೆ : ಹೆಚ್‌ಡಿಕೆ

ಬೆಂಗಳೂರು,ಫೆ.5- ಎಂಟು ಮಂದಿ ಉಪಮುಖ್ಯಮಂತ್ರಿ ಮಾಡುವ ಬಗ್ಗೆ ದೆಹಲಿಯಲ್ಲಿ ಸಭೆ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಂಟು ಜನ ಉಪಮುಖ್ಯಮಂತ್ರಿ ಆಗುವವರು ಯಾರು ಎಂಬ ಹೆಸರನ್ನು ಬಹಿರಂಗಪಡಿಸಬಲ್ಲೆ ಎಂದರು. ದೇಶವನ್ನು ಹಾಳು ಮಾಡುವ ಬಿಜೆಪಿಯ ಹುನ್ನಾರ, ಆರ್‍ಎಸ್‍ಎಸ್ ಕುತಂತ್ರಕ್ಕೆ ಬಲಿಯಾಗಬೇಡಿ. ಶೃಂಗೇರಿ ಮಠವನ್ನು ಒಡೆದವರು, ಮಹಾತ್ಮ ಗಾಂಯವರನ್ನು ಕೊಂದವರು, ಪೇಶ್ವೆ ಸಮುದಾಯಕ್ಕೆ ಸೇರಿದವರು ಹೀಗೆ ಎರಡುಮೂರು ವಿಧದ ಬ್ರಾಹ್ಮಣರಿದ್ದಾರೆ ಎಂದು ಹೇಳಿದರು. […]

ಬ್ಯಾಂಕಾಕ್‍ನಿಂದ ಕಳ್ಳಸಾಗಾಣಿಕೆ ಮಾಡಲಾದ ಅರ್ಧ ಕೆಜಿ ಚಿನ್ನ ವಿಮಾನ ನಿಲ್ದಾಣದಲ್ಲಿ ಪತ್ತೆ

ಬೆಂಗಳೂರು,ಫೆ.5- ಬ್ಯಾಂಕಾಕ್‍ನಿಂದ ಆಗಮಿಸಿದ ಪ್ರಯಾಣಿಕ ಕಳ್ಳ ಸಾಗಾಣಿಕೆ ಮೂಲಕ ತಂದಿದ್ದ ಅರ್ಧ ಕೆಜಿಗೂ ಹೆಚ್ಚಿನ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶ ಪಡಿಸಿಕೊಂಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಬ್ಯಾಂಕಾಕ್‍ನಿಂದ ಟಿಜಿ-325 ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರೊಬ್ಬರು ದ್ರವರೂಪದ ಚಿನ್ನವನ್ನು ಕಳ್ಳಸಾಗಾಣಿಕೆ ಮಾಡಲು ಯತ್ನಿಸಿದ್ದರು. ಕುತೂಹಲ ಕೆರಳಿಸಿದ ಬೊಮ್ಮಾಯಿ ಹಾಗೂ ಬಿಎಸ್‌ವೈ ದೆಹಲಿ ಪ್ರವಾಸ ಜಿನ್ಸ್‍ನ ಪಟ್ಟಿಯಲ್ಲಿ ಅಸ್ವಾಭಾವಿಕವಾಗಿ ಅಡಗಿಸಿಡಲಾಗಿದ್ದ 30.21 ಲಕ್ಷ ರೂಪಾಯಿ ಮೌಲ್ಯದ 525.50 ಗ್ರಾಮ್ ಚಿನ್ನವನ್ನು ಪರಿಶೋಧನೆಯಲ್ಲಿ ಪತ್ತೆ ಹಚ್ಚಲಾಗಿದೆ. […]

ಶಾಸಕರಾದ ಎ.ಟಿ.ರಾಮಸ್ವಾಮಿ, ಶಿವಲಿಂಗೇಗೌಡಗೆ ಜೆಡಿಎಸ್ ಟಿಕೆಟ್ ಡೌಟ್

ಬೆಂಗಳೂರು,ಫೆ.5- ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಜೆಡಿಎಸ್‍ನ ಮತ್ತಿಬ್ಬರು ಶಾಸಕರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಇಲ್ಲ. ಜೆಡಿಎಸ್ ಶಾಸಕರಾದ ಗುಬ್ಬಿಯ ಶ್ರೀನಿವಾಸ್, ಕೋಲಾರದ ಶ್ರೀನಿವಾಸ್ ಗೌಡ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಹಾಗೂ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರಿಗೂ ಟಿಕೆಟ್ ಕೈ ತಪ್ಪುವುದು ಬಹುತೇಕ ಖಚಿತ. ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದ್ದ ಶಾಸಕರಾದ ಶ್ರೀನಿವಾಸ್ ಹಾಗೂ ಶ್ರೀನಿವಾಸ್ ಗೌಡ ಅವರ ಕ್ಷೇತ್ರಗಳಿಗೆ ಬದಲಿ ಅಭ್ಯರ್ಥಿಗಳನ್ನು […]

ಕುತೂಹಲ ಕೆರಳಿಸಿದ ಬೊಮ್ಮಾಯಿ ಹಾಗೂ ಬಿಎಸ್‌ವೈ ದೆಹಲಿ ಪ್ರವಾಸ

ಬೆಂಗಳೂರು,ಫೆ.5- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಒಟ್ಟಾಗಿ ಇಂದು ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳುತ್ತಿರುವುದು ಭಾರೀ ಕುತೂಹಲ ಕೆರಳಿಸಿದೆ. ದೆಹಲಿ ಪ್ರವಾಸ ಕೈಗೊಂಡಿರು ಉಭಯ ನಾಯಕರು ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಹಲವು ಮಹತ್ವದ ವಿಷಯಗಳ ಕುರಿತು ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ. ಇಂದು ಮಧ್ಯಾಹ್ನ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ದೆಹಲಿಗೆ ತೆರಳಲಿದ್ದು, ಇಂದು ರಾತ್ರಿಯೇ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. […]