BIG NEWS: ಶಿವಮೊಗ್ಗ ಬಳಿಕ ತುಮಕೂರಿನಲ್ಲೂ ಸಾವರ್ಕರ್ ಭಾವಚಿತ್ರ ಹರಿದ ಕಿಡಿಗೇಡಿಗಳು

ತುಮಕೂರು, ಆ.16- ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಭಾವಚಿತ್ರವನ್ನು ಹರಿದ ಬೆನ್ನಲ್ಲೇ ತುಮಕೂರು ನಗರದಲ್ಲಿಯೂ ವೀರ ಸಾವರ್ಕರ್ ಭಾವಚಿತ್ರವನ್ನು ಕಿಡಿಗೇಡಿಗಳು ಹರಿದು ಹಾಕಿರುವುದು ಆತಂಕಕ್ಕೆ ಕಾರಣವಾಗಿದೆ. ನಗರದ ಎಂಪ್ರೆಸ್ ಶಾಲೆ ಮುಂಭಾಗ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಳವಡಿಸಲಾಗಿದ್ದ ಫ್ಲೆಕ್ಸ್‍ ಅನ್ನು ಕಿಡಿಗೇಡಿಗಳು ತಡರಾತ್ರಿ ಹರಿದುಹಾಕಿದ್ದು, ನಗರದಲ್ಲಿ ಆತಂಕ ಮನೆ ಮಾಡಿದೆ. ವೀರ ಸಾವರ್ಕರ್ ಭಾವಚಿತ್ರ ಹರಿದಿರುವ ಬೆನ್ನಲ್ಲೇ ನಗರದಲ್ಲಿ ಶಾಂತಿ ಕದಡದಂತೆ ಕ್ರಮ ಕೈಗೊಳ್ಳಲು ಪೊಲೀಸರು ಆಯಕಟ್ಟಿನ ಪ್ರದೇಶಗಳ ಮೇಲೆ ನಿಗಾ ವಹಿಸಿದ್ದಾರೆ.

ಮಾರ್ಕೋನಹಳ್ಳಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವರ ಭೇಟಿ

ತುಮಕೂರು, ಆ.12- ಸತತ ಮಳೆಯಿಂದ ಜಿಲ್ಲೆಯ ವಿವಿಧ ಕೆರೆ-ಕಟ್ಟೆಗಳು, ಅಣೆಕಟ್ಟೆಗಳು ತುಂಬಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಅವರು ಜಿಲ್ಲೆಯ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯದಲ್ಲಿ ಸತತವಾಗಿ ಮುಂಗಾರು ಮಳೆಯಾಗುತ್ತಿರುವ ಹಾಗೆಯೇ ತುಮಕೂರು ಜಿಲ್ಲೆಯಲ್ಲಿಯೂ ನಿರಂತರವಾಗಿ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಹುಟ್ಟುವ ಶಿಂಸಾ, ಜಯಮಂಗಲ, ಗರುಡಧ್ವಜ, ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ ನದಿಗಳು ತುಂಬಿ ಹರಿದ ಪರಿಣಾಮ ನದಿಪಾತ್ರಗಳ ಕೆರೆ-ಕಟ್ಟೆಗಳು ಸಹ ತುಂಬಿ ಕೋಡಿ ಬಿದ್ದಿವೆ. ಶಿಂಷಾ […]

ಅರುಂಧತಿ ಸಿನಿಮಾ ಹುಚ್ಚು : ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ

ತುಮಕೂರು, ಆ.11- ತೆಲುಗಿನ ಅರುಂಧತಿ ಸಿನಿಮಾದ ಗೀಳು ಅಂಟಿಸಿಕೊಂಡ ಯುವಕ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವ ಘಟನೆ ಮಧುಗಿರಿ ತಾಲೂಕಿನ ಗಿಡ್ಡನಪಾಳ್ಯದಲ್ಲಿ ನಡೆದಿದೆ. ಗಿಡ್ಡನಪಾಳ್ಯದ ರೇಣುಕಯ್ಯ ಬೆಂಕಿ ಹಚ್ಚಿಕೊಂಡ ಯುವಕ. ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದ ಈತನನ್ನು ತುಮಕೂರಿನ ಕಾಲೇಜಿಗೆ ಸೇರಿಸಲಾಗಿತ್ತು. ನಂತರ ಹಾಸ್ಟೆಲ್ ವಿದ್ಯಾರ್ಥಿಗಳೊಂದಿಗೆ ಸಿನಿಮಾ ಗೀಳು ಅಂಟಿಸಿಕೊಂಡಿದ್ದ ಎನ್ನಲಾಗಿದೆ. ತೆಲುಗಿನಲ್ಲಿ ತೆರೆಕಂಡಿದ್ದ ಅರುಂಧತಿ ಸಿನಿಮಾದಿಂದ ಪ್ರಭಾವಿತಗೊಂಡಿದ್ದ ಈತ ಪದೇ ಪದೇ ಈ ಸಿನಿಮಾ ವೀಕ್ಷಣೆ ಮಾಡುತ್ತಿದ್ದ ಎನ್ನಲಾಗಿದ್ದು, ವಿದ್ಯಾಭ್ಯಾಸ ಬಿಟ್ಟು ಮನೆಗೂ ಬರದೆ ತುಮಕೂರಿನಲ್ಲಿ […]

ಆರ್‌ಟಿಐ ಕಾರ್ಯಕರ್ತ ಅನುಮಾನಾಸ್ಪದ ಸಾವು, ಹೂತಿದ್ದ ಮೃತದೇಹ ಮರುಪರೀಕ್ಷೆ

ತುಮಕೂರು, ಜು.27- ಕಳೆದ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಮೃತದೇಹವನ್ನು ಹೊರತೆಗೆದು ಶವಪರೀಕ್ಷೆಗೆ ಕಳುಹಿಸಿರುವ ಘಟನೆ ತುರುವೇಕೆರೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿ ನಡೆದಿದೆ. ಆರ್‌ಟಿಐ ಕಾರ್ಯಕರ್ತ ಬೀಚನಹಳ್ಳಿ ಕಿರಣ್ ಕುಮಾರ್ ಮೇ 13ರಂದು ಶೌಚಾಲಯಕ್ಕೆ ಹೋಗಿ ಬರುವಾಗ ಹೃದಯಾ ಘಾತಕ್ಕೆ ಒಳಗಾಗಿದ್ದರು ಎಂದು ಸಂಬಂಧಿಕರೆಲ್ಲ ಸೇರಿ ಶವಸಂಸ್ಕಾರವನ್ನು ಮಾಡಿದ್ದರು. ಮೃತ ಕಿರಣ್ ಅವರ ತಮ್ಮನ ಮಗ ವೈಭವ್ ತಮ್ಮ ದೊಡ್ಡಪ್ಪನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಕಳೆದ 15 ದಿನದ ಹಿಂದೆ […]

ಹಣದ ಆಸೆಗೆ 6.62 ಲಕ್ಷ ಕಳೆದುಕೊಂಡ ವಿದ್ಯಾರ್ಥಿ..!

ತುಮಕೂರು,ಜು.20- ದಿನ ಬೆಳಗಾದರೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರ ಬಗ್ಗೆ ಪೊಲೀಸರು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಇದಕ್ಕೊಂದು ಉದಾರಣೆ ಎಂದರೆ ಹಣದ ಆಸೆಗೆ ಇಲ್ಲೊಬ್ಬ ವಿದ್ಯಾರ್ಥಿ ಸುಮಾರು 6.62 ಲಕ್ಷ ರೂ. ಕಳೆದುಕೊಂಡಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ. ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ ಕಿಟ್ಟಗಳ್ಳಿಯ ವಿದ್ಯಾರ್ಥಿ ಭೀಮ್ ಸೇನ್ ಮೊಬೈಲ್‍ಗೆ ಪ್ರತಿದಿನ 7000 ಸಂಪಾದಿಸುವ ಕೆಲಸ ಖಾಲಿ ಇದೆ ಎಂಬ ಮೆಸೇಜ್ ಬಂದಿದೆ. ಹಣದ ಆಸೆಗೆ ವಿದ್ಯಾರ್ಥಿ ಲಿಂಕ್ ಕ್ಲಿಕ್ ಮಾಡಿದ್ದಾನೆ. […]

ವಿಡಿಯೋ ಮಾಡಲು ಹೋಗಿ ರಾಜಕಾಲುವೆಗೆ ಬಿದ್ದ ಆಟೋ ಚಾಲಕ

ತುಮಕೂರು, ಜು.17- ರೈಲ್ವೆ ಅಂಡರ್‍ ಪಾಸ್‍ನಲ್ಲಿ ನಿಂತಿದ್ದ ನೀರಿನಲ್ಲಿ ವಿಡಿಯೋ ಮಾಡಲು ಹೋಗಿ ಕಾಲುಜಾರಿ ರಾಜಕಾಲುವೆಗೆ ಬಿದ್ದು ಆಟೋ ಚಾಲಕರೊಬ್ಬರು ಕೊಚ್ಚಿಕೊಂಡು ಹೋಗಿರುವ ಘಟನೆ ನಗರದ ಹೆಗಡೆ ಕಾಲೋನಿ ಸಮೀಪ ಸಂಭವಿಸಿದೆ. ಶಾಂತಿನಗರ ನಿವಾಸಿ ಆಟೋ ಚಾಲಕ ಅಮ್ಜದ್ ಖಾನ್ (44) ನೀರಿನಲ್ಲಿ ಕೊಚ್ಚಿಕೊಂಡು ಹೋದವರಾಗಿದ್ದು, ಅವರ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಆದರೆ, ಸುಳಿವು ಸಿಕ್ಕಿಲ್ಲ. ಘಟನೆ ವಿವರ: ತುಮಕೂರು ನಗರದಲ್ಲಿ ಮಳೆ ಕಾರಣ ರೈಲ್ವೆ ಅಂಡರ್ ಪಾಸ್ ಕೆಳಗೆ ಮಳೆ […]

ಮಟ್ಕಾ ದಂಧೆಗೆ ಕಡಿವಾಣ ಹಾಕದ ಮತ್ತಿಬ್ಬರು ಎಎಸ್‍ಐ ವರ್ಗಾವಣೆ

ತುಮಕೂರು,ಜು.17- ಮಟ್ಕಾ ದಂಧೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಂಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲೀಸ್ ಇನ್‍ಸ್ಪೆಕ್ಟರ್ ಅಮಾನತುಗೊಳಿಸಿದ ಬೆನ್ನಲ್ಲೇ ಇಬ್ಬರು ಎಎಸ್‍ಐ, ಮೂವರು ಕಾನ್‍ಸ್ಟೇಬಲ್‍ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ತಿರುಮಣಿ ಎಎಸ್‍ಐಗಳಾದ ರಾಮಾಂಜಿ ನಯ್ಯ ಅವರನ್ನು ಹುಳಿಯಾರು, ನರಸಿಂಹಮೂರ್ತಿ ಅವರನ್ನು ತುರುವೇಕೆರೆ ಠಾಣೆಗೆ, ವೈಎನ್ ಹೊಸಕೋಟೆ ಠಾಣೆ ಪೇದೆಗಳಾದ ಕೇಶವರಾಜು ತುರುವೇಕೆರೆ ಠಾಣೆ, ಗೋವಿಂದರಾಜು ಹುಲಿಯೂರು ದುರ್ಗ ಠಾಣೆಗೆ, ಪಾವಗಡ ಠಾಣೆಯ ಶ್ರೀನಿವಾಸ್ ತುರುವೇಕೆರೆ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ವರ್ಗಾವಣೆಯಾದ ಸಿಬ್ಬಂದಿ ಮೇಲೆ […]

ನಿಲ್ಲದ ಮಟ್ಕಾ ದಂಧೆ, ಇನ್ಸ್ಪೆಕ್ಟರ್ ಅಮಾನತು

ತುಮಕೂರು.ಜು.14-ಮಟ್ಕಾದಂಧೆ ನಿಯಂತ್ರಿಸಲು ವಿಫಲವಾದ ಪಾವಗಡ ಠಾಣೆ ಇನ್ ಸ್ಪೆಕ್ಟರ್ ಲಕ್ಷ್ಮೀಕಾಂತ್ ಅವರನ್ನು ಅಮಾನತುಗೊಳಿಸಿ ಎಸ್ಪಿ ರಾಹುಲ್ ಕುಮಾರ್ ಶಹಪೂರವಾಡ್ ಆದೇಶಿಸಿದ್ದಾರೆ. ಮಟ್ಕಾ ದಂಧೆಗೆ ಕಡಿವಾಣ ಹಾಕಬೇಕಾದ ಪೊಲೀಸ್ ಸಿಬ್ಬಂದಿಯೇ ಮಟ್ಕಾ ದಂಧೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಿತ್ತು, ಇತ್ತೀಚೆಗೆ ಸಾರ್ವಜನಿಕವಾಗಿ ಮಟ್ಕಾ ದಂಧೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಮಟ್ಕಾ ದಂಧೆಗೆ ಸಹಕರಿಸಿದ್ದ ಆರೋಪದ ಮೇಲೆ ಇಬ್ಬರು ಪೊಲೀಸ್ ಕಾನ್ ಸ್ಟೇಬಲ್ ಗಳನ್ನು ಇತ್ತೀಚೆಗೆ ಅಮಾನತು ಮಾಡಲಾಗಿತ್ತು, ಕರ್ತವ್ಯ ಲೋಪ ಹಿನ್ನೆಲೆಯಲ್ಲಿ […]

ಭಾರತ ಅಭಿವೃದ್ಧಿಯಾಗುತ್ತಿದೆ : ಕೆನಡಾ ಸಂಸತ್ ಸದಸ್ಯ ಚಂದ್ರಕಾಂತ ಆರ್ಯ

ತುಮಕೂರು, ಜು.12- ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಕೆನಡಾ ದೇಶದ ಸಂಸತ್ ಸದಸ್ಯ, ಕನ್ನಡಿಗ ಚಂದ್ರಕಾಂತ್ ಆರ್ಯ ಅಭಿಪ್ರಾಯಪಟ್ಟಿದ್ದಾರೆ. ಕೆನಡಾ ದೇಶದಲ್ಲಿ ಸಂಸತ್ ಸದಸ್ಯರಾಗಿರುವ ಜಿಲ್ಲಾಯ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದವರಾದ ಚಂದ್ರಕಾಂತ ಆರ್ಯ ಅವರು ನಗರದ ರವೀಂದ್ರ ಕಲಾನಿಕೇತನದಲ್ಲಿ ಸಂವಾದ ನಡೆಸಿದರು. ಹಾಲಪ್ಪ ಪ್ರತಿಷ್ಠಾನ, ಮಾತೃಛಾಯ ಸಂಸ್ಥೆ, ಲಯನ್ಸ್, ರೋಟರಿ, ಛೇಂಬರ್ಸ್ ಆಫ್ ಕಾಮರ್ಸ್, ಆದರ್ಶ ಫೌಂಡೇಷನ್, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ […]

ಇಂದಿನಿಂದಲೇ ತುಮಕೂರಿಗೆ ಹೇಮಾವತಿ ನೀರು : ಸಚಿವ ಗೋಪಾಲಯ್ಯ

ತುಮಕೂರು, ಜು.11- ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಲು ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ನಾಲೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ನೀರು ಹರಿಸಲು ಆಗಿರಲಿಲ್ಲ, ಈಗ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಇಂದಿನಿಂದಲೇ ನೀರು ಹರಿಸಲಾಗುವುದು ಎಂದರು. ಬುಗುಡನಹಳ್ಳಿ, ಮದಲೂರು ಸೇರಿದಂತೆ ಜಿಲ್ಲಾಯ ಎಲ್ಲ ಕೆರೆಗಳನ್ನು ತುಂಬಿಸುವಂತೆ ಸಚಿವ ಮಾಧುಸ್ವಾಮಿ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಪತ್ರ ಬರೆದಿದ್ದು, ನೀರು ಹರಿಸಲು ಕ್ರಮ ವಹಿಸಲಾಗಿದೆ […]