ಅಮಾನುಷವಾಗಿ ಥಳಿಸಿದ ಉಪನ್ಯಾಸಕ, ಪ್ರಜ್ಞೆ ತಪ್ಪಿದ ವಿದ್ಯಾರ್ಥಿ

ತುಮಕೂರು,ಡಿ.2- ಉಪನ್ಯಾಸಕರೊಬ್ಬರು ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ್ದು ಆತ ಪ್ರಜ್ಞೆಹೀನ ಸ್ಥಿತಿಗೆ ತಲುಪಿದ ಪ್ರಕರಣ ತುಮಕೂರಿನ ದೇವರಾಯನದುರ್ಗದಲ್ಲಿರುವ ನವೋದಯ ಶಾಲೆಯಲ್ಲಿ ನಡೆದಿದೆ. ಉಪನ್ಯಾಸಕರ ಹೊಡೆತಕ್ಕೆ ವಿದ್ಯಾರ್ಥಿ ಪ್ರಜ್ಞೆ ತಪ್ಪಿದ್ದು, ಕೆಲ ಕಾಲ ಸಂಸ್ಥೆಯ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತುಮಕೂರು ತಾಲ್ಲೂಕು ಹೆಬ್ಬೂರು ಭಾಗದ ವಿದ್ಯಾರ್ಥಿಗೆ ಉಪನ್ಯಾಸಕರು ಥಳಿಸಿರುವುದು ಗೋತ್ತಾಗಿದೆ. ಪೋಷಕರು ಸ್ಥಳಕ್ಕೆ ತೆರಳಿ ಪ್ರತಿಭಟನೆ ನಡೆಸಿದ್ದು, ಉಪನ್ಯಾಸಕರ ವಿರುದ್ಧ ವಾರದ ಒಳಗೆ ಕ್ರಮ ಕೈಗೊಳ್ಳಬೇಕು ಎಂದು ಪ್ರಾಂಶುಪಾಲರಿಗೆ ಮುತ್ತಿಗೆ ಹಾಕಿ ಎಚ್ಚರಿಕೆ ನೀಡಿದ್ದಾರೆ. ಇಲ್ಲದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ […]

ರಾಜಕೀಯ ದ್ವೇಷ : ಕೆರೆಗೆ ಕ್ರಿಮಿನಾಶಕ ಹಾಕಿ 5 ಲಕ್ಷ ಮೀನುಗಳನ್ನು ಕೊಂದ ಪಾಪಿಗಳು

ಕುಣಿಗಲ್,ನ.28- ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಕೆರೆಗೆ ಕ್ರಿಮಿನಾಶಕ ಸಿಂಪಡಿಸಿದ ಪರಿಣಾಮ ಸುಮಾರು 5 ಲಕ್ಷಕ್ಕೂ ಹೆಚ್ಚು ಮೀನಿನ ಮರಿಗಳು ಸಾವನಪ್ಪಿರುವ ಘಟನೆ ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಹುತ್ರಿ ದುರ್ಗ ಹೋಬಳಿ ವಡಾಘಟ್ಟ ಗ್ರಾಮದ ಕೆರೆಯಲ್ಲಿ ಈ ಕ್ರತ್ಯ ಎಸಗಲಾಗಿದೆ. ಗ್ರಾಮದ ರೈತ ಚಂದನ್ ಎಂಬುವವರು ಗ್ರಾಮ ಪಂಚಾಯತಿ ಹರಾಜಿನಲ್ಲಿ ಕೆರೆಯಲ್ಲಿ ಮೀನು ಸಾಕಲು ಗುತ್ತಿಗೆ ಪಡೆದು ಈ ಸಂಬಂಧ ಗ್ರಾಮದ ದೇವಾಲಯಕ್ಕೆ 2.50 ಲಕ್ಷ ರೂ. ಹಾಗೂ ಪಂಚಾಯತಿಗೂ ಹಣ ನೀಡಿ […]

ಬೆಲ್ಟ್ ಹಾಗೂ ದೊಣ್ಣೆಯಿಂದ ವಸತಿ ಶಾಲೆಯ ಮಕ್ಕಳ ಮೇಲೆ ಹಲ್ಲೆ

ತುಮಕೂರು, ನ. 25- ವಸತಿ ಶಾಲೆಯ ಮಕ್ಕಳ ಮೇಲೆ ಶಾಲೆಯ ಕಾರ್ಯದರ್ಶಿಯ ಮಗ ಹಲ್ಲೇ ನಡೆಸಿರುವ ಆರೋಪ ಕೇಳಿ ಬಂದಿದೆ. ಮಲ್ಲಸಂದ್ರದ ವಿಶ್ವಭಾರತಿ ಶಾಲೆಯಲ್ಲಿ ಮಕ್ಕಳ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಶಾಲೆಯ ಕಾರ್ಯದರ್ಶಿ ಎನ್.ಮೂರ್ತಿ ಅವರ ಪುತ್ರ ಭರತ್ ಈ ಕೃತ್ಯವೆಸಗಿದ್ದು, ಕುಡಿದ ಅಮಲಿನಲ್ಲಿ ವಸತಿ ಶಾಲೆಯ 42 ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಬೆಲ್ಟ ಹಾಗೂ ದೊಣ್ಣೆಯಿಂದ ಮನಬಂದಂತೆ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ. ಶಾಲಾ ಕಾರ್ಯದರ್ಶಿಯ ಮಗನ ದರ್ಪದಿಂದ 42 ಮಕ್ಕಳ ಪೈಕಿ ಒಂದು […]

ಹೆಂಡತಿ-ಮಗುವನ್ನು ಬರ್ಬರವಾಗಿ ಹತ್ಯೆಗೈದ ಪಾಪಿ ಪತಿ

ಚೇಳೂರು,ಅ.19- ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹೆಂಡತಿ ಹಾಗೂ ಮಗುವನ್ನು ಬರ್ಬರವಾಗಿ ಪತಿ ಹತ್ಯೆಗೈದಿರುವ ಘಟನೆ ಗುಬ್ಬಿ ತಾಲ್ಲೂಕಿನ ಕೊಂಡ್ಲಿ ಸಮೀಪದ ಮಾವಿನಹಳ್ಳಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ನಡೆದಿದೆ. ಕವಿತ (24) ಹಾಗೂ ಜೀವನ್ (4) ಹತ್ಯೆಯಾದ ತಾಯಿ-ಮಗು. ಸ್ವಾಮಿ ಬಂತ ಆರೋಪಿ. ಇಂದು ಬೆಳಗಿನ ಜಾವ ಪತಿ ಹಾಗೂ ಮಗುವನ್ನು ಆರೆಯಿಂದ ತಿವಿದು ಪರಾರಿಯಾಗುತ್ತಿದ್ದಾಗ ಗ್ರಾಮಸ್ಥರು ಸ್ವಾಮಿಯನ್ನು ಹಿಡಿದು ಕೈ ಕಾಲು ಕಟ್ಟಿ ಪೆÇಲೀಸರಿಗೆ ಒಪ್ಪಿಸಿದ್ದಾರೆ.ತಾಯಿ ಹಾಗೂ ಮಗುವಿಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. […]

ಮಧುಗಿರಿಯಲ್ಲಿ ಭಾರೀ ಮಳೆಗೆ ಮನೆ ಕುಸಿದು ವೃದ್ಧೆ ಸಾವು, ಕೊಚ್ಚಿಹೋದ ಕಾರು

ತುಮಕೂರು, ಅ.14- ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಭಾರೀಮಳೆಗೆ ಅಲ್ಲಲ್ಲಿ ಹಾನಿಯಾಗಿದ್ದು, ಮಧುಗಿರಿ ತಾಲ್ಲೂಕಿನ ತುಂಗೋಟಿ ಗ್ರಾಮದಲ್ಲಿ ಮನೆ ಚಾವಣಿ ಕುಸಿದು ಚೌಡಮ್ಮ (70)ಎಂಬುವವರು ಮೃತಪಟ್ಟಿದ್ದಾರೆ.ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ದಾಸಲುಕುಂಟೆ ಗ್ರಾಮದ ಕೆರೆ ಭಾರೀ ಮಳೆಯಿಂದ ಸುಮಾರು 18 ವರ್ಷಗಳ ನಂತರ ಕೋಡಿ ಬಿದ್ದಿದೆ. ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ, ಕೋಡಿ ನೀರು ಬಹು ದೊಡ್ಡ ಪ್ರಮಾಣದಲ್ಲಿ ಹರಿದು ಬರುತ್ತಿದೆ.ಇದನ್ನು ಗಮನಿಸದ ಕಾರು ಚಾಲಕ ಬುಧವಾರ ರಾತ್ರಿ ತುಮಕೂರು ಮಾರ್ಗವಾಗಿ ತೋವಿನಕೆರೆ ಬರುತ್ತಿದ್ದು, ಈ […]

8 ವರ್ಷಗಳಾದರೂ ವಾಪಸ್ಸಾಗದ ಹೆರಿಗೆಗೆ ತವರಿಗೆ ಹೋಗಿದ್ದ ಮಡದಿ, ಪತಿ ಆತ್ಮಹತ್ಯೆ

ಕೊರಟಗೆರೆ, ಸೆ.1- ತವರು ಮನೆಗೆ ಹೆರಿಗೆಗೆ ಹೋದ ಮಡದಿ 8 ವರ್ಷಗಳಾದರೂ ಮತ್ತೆ ವಾಪಸ್ ಬಾರದ ಕಾರಣ ಮನನೊಂದು ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ತಾಲೂಕಿನ ಮಾವತ್ತೂರು ಬಳಿಯ ಮಿಣಸಂದ್ರ ಗ್ರಾಮದಲ್ಲಿ ಈ ಘಟನೆ ಜರಗಿದ್ದು, ಮಹೇಂದ್ರ (34) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.ಮಹೇಂದ್ರನ ಪತ್ನಿ ಹೆರಿಗೆಗೆಂದು ತವರು ಮನೆಗೆ ಹೋಗಿದ್ದಾರೆ. ಇವರಿಬ್ಬರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಎಂಟು ವರ್ಷಗಳಾದರೂ ಮನೆಗೆ ಬಾರದ ಕಾರಣ […]

ಅಪರಿಚಿತ ವಾಹನಕ್ಕೆ ಕಾರು ಡಿಕ್ಕಿ ತಂದೆ-ಮಗಳು ಸೇರಿ ಮೂವರ ಸಾವು

ಶಿರಾ, ಆ.20- ಅಪರಿಚಿತ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ತಂದೆ-ಮಗಳು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ತರೂರು ಗೇಟ್ ಬಳಿ ತಡರಾತ್ರಿ ನಡೆದಿದೆ. ತಾಲ್ಲೂಕಿನ ಕಡವಿಗೆರೆ ಗ್ರಾಮದ ನಿವಾಸಿ ಅವಿನಾಶ್ (28) ಮತ್ತು ಅವರ ಮಗಳು ಪ್ರಣಂತಿ (5)ಹಾಗೂ ಅವಿನಾಶ್ ಸಂಬಂಕರ ಮಗಳು ಸೌಖ್ಯ (5) ಮೃತಪಟ್ಟ ದುರ್ದೈವಿಗಳು. ಕೆಲಸದ ನಿಮಿತ್ತ ತರೂರಿನಿಂದ ತುಮಕೂರಿಗೆ ಸ್ವಿಫ್ಟ್ ಕಾರಿನಲ್ಲಿ ತೆರಳುತ್ತಿದ್ದಾಗ ತರೂರು ಗೇಟ್ ಬಳಿ ಕಾರು ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ ಯಾವುದೋ ವಾಹನಕ್ಕೆ ಡಿಕ್ಕಿ […]

BIG NEWS: ಶಿವಮೊಗ್ಗ ಬಳಿಕ ತುಮಕೂರಿನಲ್ಲೂ ಸಾವರ್ಕರ್ ಭಾವಚಿತ್ರ ಹರಿದ ಕಿಡಿಗೇಡಿಗಳು

ತುಮಕೂರು, ಆ.16- ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಭಾವಚಿತ್ರವನ್ನು ಹರಿದ ಬೆನ್ನಲ್ಲೇ ತುಮಕೂರು ನಗರದಲ್ಲಿಯೂ ವೀರ ಸಾವರ್ಕರ್ ಭಾವಚಿತ್ರವನ್ನು ಕಿಡಿಗೇಡಿಗಳು ಹರಿದು ಹಾಕಿರುವುದು ಆತಂಕಕ್ಕೆ ಕಾರಣವಾಗಿದೆ. ನಗರದ ಎಂಪ್ರೆಸ್ ಶಾಲೆ ಮುಂಭಾಗ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಳವಡಿಸಲಾಗಿದ್ದ ಫ್ಲೆಕ್ಸ್‍ ಅನ್ನು ಕಿಡಿಗೇಡಿಗಳು ತಡರಾತ್ರಿ ಹರಿದುಹಾಕಿದ್ದು, ನಗರದಲ್ಲಿ ಆತಂಕ ಮನೆ ಮಾಡಿದೆ. ವೀರ ಸಾವರ್ಕರ್ ಭಾವಚಿತ್ರ ಹರಿದಿರುವ ಬೆನ್ನಲ್ಲೇ ನಗರದಲ್ಲಿ ಶಾಂತಿ ಕದಡದಂತೆ ಕ್ರಮ ಕೈಗೊಳ್ಳಲು ಪೊಲೀಸರು ಆಯಕಟ್ಟಿನ ಪ್ರದೇಶಗಳ ಮೇಲೆ ನಿಗಾ ವಹಿಸಿದ್ದಾರೆ.

ಮಾರ್ಕೋನಹಳ್ಳಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವರ ಭೇಟಿ

ತುಮಕೂರು, ಆ.12- ಸತತ ಮಳೆಯಿಂದ ಜಿಲ್ಲೆಯ ವಿವಿಧ ಕೆರೆ-ಕಟ್ಟೆಗಳು, ಅಣೆಕಟ್ಟೆಗಳು ತುಂಬಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಅವರು ಜಿಲ್ಲೆಯ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯದಲ್ಲಿ ಸತತವಾಗಿ ಮುಂಗಾರು ಮಳೆಯಾಗುತ್ತಿರುವ ಹಾಗೆಯೇ ತುಮಕೂರು ಜಿಲ್ಲೆಯಲ್ಲಿಯೂ ನಿರಂತರವಾಗಿ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಹುಟ್ಟುವ ಶಿಂಸಾ, ಜಯಮಂಗಲ, ಗರುಡಧ್ವಜ, ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ ನದಿಗಳು ತುಂಬಿ ಹರಿದ ಪರಿಣಾಮ ನದಿಪಾತ್ರಗಳ ಕೆರೆ-ಕಟ್ಟೆಗಳು ಸಹ ತುಂಬಿ ಕೋಡಿ ಬಿದ್ದಿವೆ. ಶಿಂಷಾ […]

ಅರುಂಧತಿ ಸಿನಿಮಾ ಹುಚ್ಚು : ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ

ತುಮಕೂರು, ಆ.11- ತೆಲುಗಿನ ಅರುಂಧತಿ ಸಿನಿಮಾದ ಗೀಳು ಅಂಟಿಸಿಕೊಂಡ ಯುವಕ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವ ಘಟನೆ ಮಧುಗಿರಿ ತಾಲೂಕಿನ ಗಿಡ್ಡನಪಾಳ್ಯದಲ್ಲಿ ನಡೆದಿದೆ. ಗಿಡ್ಡನಪಾಳ್ಯದ ರೇಣುಕಯ್ಯ ಬೆಂಕಿ ಹಚ್ಚಿಕೊಂಡ ಯುವಕ. ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದ ಈತನನ್ನು ತುಮಕೂರಿನ ಕಾಲೇಜಿಗೆ ಸೇರಿಸಲಾಗಿತ್ತು. ನಂತರ ಹಾಸ್ಟೆಲ್ ವಿದ್ಯಾರ್ಥಿಗಳೊಂದಿಗೆ ಸಿನಿಮಾ ಗೀಳು ಅಂಟಿಸಿಕೊಂಡಿದ್ದ ಎನ್ನಲಾಗಿದೆ. ತೆಲುಗಿನಲ್ಲಿ ತೆರೆಕಂಡಿದ್ದ ಅರುಂಧತಿ ಸಿನಿಮಾದಿಂದ ಪ್ರಭಾವಿತಗೊಂಡಿದ್ದ ಈತ ಪದೇ ಪದೇ ಈ ಸಿನಿಮಾ ವೀಕ್ಷಣೆ ಮಾಡುತ್ತಿದ್ದ ಎನ್ನಲಾಗಿದ್ದು, ವಿದ್ಯಾಭ್ಯಾಸ ಬಿಟ್ಟು ಮನೆಗೂ ಬರದೆ ತುಮಕೂರಿನಲ್ಲಿ […]