ಬೆಂಗಳೂರು,ಜು.17- ಕಾವೇರಿ ಆರತಿ ನಡೆಸುವ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ನ್ಯಾಯಾಲಯದಿಂದ ಇತ್ಯರ್ಥವಾದ ನಂತರ ನಾವು ಕಾವೇರಿ ಆರತಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಮಾಡಲು ಉದ್ದೇಶಿಸಲಾಗಿದೆ. ಈ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಅದು ಮುಗಿದ ಬಳಿಕ ನಾವು ಸೂಕ್ತ ತೀರ್ಮಾನ ಮಾಡುತ್ತೇವೆ ಎಂದರು.
ರಾಜ್ಯಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯವರು ವಿರೋಧಿಸಿದರು. ಆದರೆ ದೆಹಲಿಯಲ್ಲಿ ಅವರೇ ಜಾರಿಗೆ ತಂದರು. ಬಿಜೆಪಿಯವರು ಹೇಳಿದಂತೆ ನಡೆದುಕೊಂಡಿಲ್ಲ. ಗ್ಯಾರಂಟಿ ಯೋಜನೆಗಳು ಅನುಕೂಲವಾಗಿವೆ. ಈಗ ಬಿಹಾರ ರಾಜ್ಯದಲ್ಲೂ ಗ್ಯಾರಂಟಿಯನ್ನು ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.
ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುತ್ತಿದ್ದು, ಬಿಜೆಪಿಯವರ ಗ್ಯಾರಂಟಿಗಳಿಗೆ ನಮ ವಿರೋಧವೇನೂ ಇಲ್ಲ. ಅವರು ಕೂಡ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಜನರಿಗೆ ಒಳ್ಳೆಯದನ್ನು ಮಾಡಲಿ ಎಂದರು.
- ಹಿಂದೂ, ಬೌದ್ಧ, ಸಿಖ್ ಬಿಟ್ಟು ಅನ್ಯ ಧರ್ಮಿಯರ ಎಸ್ಸಿ ಪ್ರಮಾಣ ಪತ್ರ ರದ್ದು ; ಫಡ್ನವಿಸ್
- ಬೆಂಗಳೂರಿನ ಹಲವು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ
- ವರದಕ್ಷಿಣೆ ಕಿರುಕುಳಕ್ಕೆ ನೊಂದು ಗರ್ಭಿಣಿ ಆತ್ಮಹತ್ಯೆ
- ರಾತ್ರಿಯಿಡೀ ಬೀದಿನಾಯಿಗಳ ಗೋಳಾಟ-ಬೊಗಳಾಟ, ನಿದ್ರೆ ಇಲ್ಲದೆ ಸ್ಥಳೀಯರ ಪರದಾಟ
- ದ್ವೇಷ ರಾಜಕಾರಣಕ್ಕಾಗಿ ವಿಪಕ್ಷ ಶಾಸಕರನ್ನು ಟಾರ್ಗೆಟ್ ಮಾಡಿದರೆ ಉಗ್ರ ಹೋರಾಟ : ಅಶೋಕ್ ಎಚ್ಚರಿಕೆ