ಬೆಂಗಳೂರು,ಅ.15- ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ನಾಳೆಯಿಂದ ಕಾವೇರಿ ನೀರು ಸರಬರಾಜಗುತ್ತಿರುವುದರಿಂದ ಆ ಭಾಗದ ಬಹುದಿನದ ಬೇಡಿಕೆ ಈಡೇರಿದಂತಾಗಿದೆ. 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಕಾವೇರಿ ಐದನೇ ಹಂತದ ಯೋಜನೆ ಜಾರಿಗೆ ನಾಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದಾರೆ.
ಕಳೆದ 15 ವರ್ಷಗಳಿಂದ ಕಾವೇರಿ ನೀರಿಗೆ ಪರಿತಪ್ಪಿಸುತ್ತಿದ 110 ಹಳ್ಳಿಯ ಜನರ ಬಾಯರಿಕೆ ನೀಗಿಸೋ ಕಾಲ ಕೂಡಿಬಂದಿದೆ..ಹೌದು ..ಕಾವೇರಿ 5 ನೇ ಹಂತದ ಕೂಡಿಯುವ ನೀರು ಪೂರೈಕೆಗೆ ನಾಳೆ ಸಿಎಂ ಹಾಗೂ ಡಿಸಿಎಂ ಚಾಲನೆ ನೀಡಲಿದರೆ..
ಸದ್ಯ ಬೆಂಗಳೂರಿಗೆ 1400… ಎಂಎಲ್‌ಡಿ ನೀರು ಸರಬರಾಜು ಆಗ್ತಿದೆ..ಈಗ ಹೆಚ್ಚುವರಿಯಾಗಿ 750… ಎಂ.ಎಲ್.ಡಿ ನೀರು ಸೇರ್ಪಡೆ ಮಾಡಲಾಗಿದೆ. ಕನಿಷ್ಠ ಹತ್ತು ವರ್ಷ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಅಂತಾ ಯೋಜನೆ ರೂಪಿಸಲಾಗಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿ ಬಳಿ ಇರೋ ಜಲಮಂಡಳಿ ಘಟಕದಿಂದ ಈ 5 ನೇ ಹಂತದ ಕಾವೇರಿ ನೀರು ಪೂರೈಕೆ ಅಗಲಿದ್ದು. ಈ ಯೋಜನೆಗೆ 1.45 ಲಕ್ಷ ಮೆಗಾ ಟನ್ ಸ್ಟೀಲ್ ಪೈಪ್ ಬಳಕೆ ಮಾಡಲಾಗಿದೆ.
110 ಕಿ.ಮೀಟರ್ ದೂರದಿಂದ ಬೆಂಗಳೂರಿಗೆ ನೀರು ಹರಿಸೋ ಯೋಜನೆ ಇದಾಗಿದ್ದು.. ಯಶವಂತಪುರ, ಬ್ಯಾಟರಾಯನಪುರ, ದಾಸರಹಳ್ಳಿ ಮತ್ತಿತರ ಪ್ರದೇಶಗಳಿಗೆ ಕಾವೇರಿ ನೀರು ಹರಿಯಲಿದೆ. 110 ಹಳ್ಳಿಗಳಿಗೆ ಒಂದೇ ಹಂತದಲ್ಲಿ 750 ಎಂಎಲ್‌ಡಿ ನೀರು ಸರಬರಾಜು ಮಾಡಲಾಗುತ್ತಿದ್ದು, ಈಗಾಗಲೆ 4 ಲಕ್ಷ ಹೊಸ ನೀರಿನ ಸಂಪರ್ಕ ಕಲ್ಪಿಸಲಾಗಿದೆ.