Tuesday, August 26, 2025
Homeರಾಷ್ಟ್ರೀಯ | National350 ಕೋಟಿ ರೂ. ವಂಚಿಸಿದ ಹೈಟೆಕ್ ಸೈಬರ್‌ ಕ್ರೈಂ ಸಿಂಡಿಕೇಟ್‌ ಪತ್ತೆ, ಮೂವರ ಬಂಧನ

350 ಕೋಟಿ ರೂ. ವಂಚಿಸಿದ ಹೈಟೆಕ್ ಸೈಬರ್‌ ಕ್ರೈಂ ಸಿಂಡಿಕೇಟ್‌ ಪತ್ತೆ, ಮೂವರ ಬಂಧನ

CBI Busts Cybercrime Gang That Duped US Citizens Of Over Rs 350 Crore, 3 Arrested

ನವದೆಹಲಿ, ಆ.26– ಅಮೆರಿಕದ ಮೂಲದ ವ್ಯಕ್ತಿಗೆ 350 ಕೋಟಿ ರೂ.ಗಳಿಗೂ ಹೆಚ್ಚು ವಂಚಿಸಿದ ಅತ್ಯಾಧುನಿಕ ಸೈಬರ್‌ ಅಪರಾಧ ಸಿಂಡಿಕೇಟ್‌ಅನ್ನು ಸಿಬಿಐ ಪತ್ತೆಹಚ್ಚಿ ಮೂವರು ವಂಚಕರನ್ನು ಬಂಧಿಸಿದೆ.

ಅಮೆರಿಕದ ಫೆಡರಲ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್‌ ಜೊತೆ ನಿಕಟ ಸಮನ್ವಯದೊಂದಿಗೆ ನಡೆಸಲಾದ ಈ ಸೂಕ್ಷ್ಮ ಕಾರ್ಯಾಚರಣೆಯಲ್ಲಿ ಗ್ಯಾಂಗ್‌ನ ಮೂವರು ಪ್ರಮುಖ ಆರೋಪಿಗಳಾದ ಜಿಗರ್‌ ಅಹದ್‌ ,ಯಶ್‌ ಖುರಾನಾ ಮತ್ತು ಇಂದರ್‌ ಜೀತ್‌ ಸಿಂಗ್‌ ಬಾಲಿ ಅವರನ್ನು ಬಂಧಿಸಿ 54 ಲಕ್ಷ ಹಣ ,ಎಂಟು ಮೊಬೈಲ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಆ.18 ರಂದು ಪ್ರಕರಣ ದಾಖಲಾದ ನಂತರ ಅಮೃತಸರ ಮತ್ತು ದೆಹಲಿಯಲ್ಲಿ ಸಿಬಿಐ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಅಮೆರಿಕದ ನಾಗರಿಕರನ್ನು ಗುರಿಯಾಗಿಸಲಾಗಿತ್ತು ಮತ್ತು ಇದು ಪಂಜಾಬ್‌ನಿಂದ ವಾಷಿಂಗ್ಟನ್‌ ಡಿಸಿವರೆಗೆ ವ್ಯಾಪಿಸಿರುವ ವಂಚನೆ ಎಂದು ಕಾಂಡುಬಂದಿತ್ತು.

ಅಧೕಕಾರಿಗಳು ಡಿಜಿಟಲ್‌ ಕುಶಲತೆ ಮತ್ತು ಆರ್ಥಿಕ ಕುಶಲತೆಯಿಂದ ಕೆಲವೇ ದಿನದಲ್ಲಿ ಜಾಲವನ್ನು ಭೇದಿಸಿದೆ ಎಂದು ಅವರು ಹೇಳಿದರು.2023-2025ರ ಅವಧಿಯಲ್ಲಿ, ಆರೋಪಿಗಳು ಅಮೆರಿಕ ಪ್ರಜೆಯ ಕಂಪ್ಯೂಟರ್‌ ವ್ಯವಸ್ಥೆಗಳು ಮತ್ತು ಬ್ಯಾಂಕ್‌ ಖಾತೆಗಳಿಗೆ ಅನಧಿಕೃತ ರಿಮೋಟ್‌ ಪ್ರವೇಶವನ್ನು ಪಡೆಯುವ ಮೂಲಕ ಸಂಚು ರೂಪಿಸಿದ್ದರು.

ನಂತರ ರಿಮೋಟ್‌ ಪ್ರವೇಶ ಸಾಫ್‌್ಟವೇರ್‌ ಅನ್ನು ಬಳಸಿಕೊಂಡು, ವಂಚಕರು ಅಮೆರಿಕದ ಪ್ರಜೆಗಳ ಕಂಪ್ಯೂಟರ್‌ ವ್ಯವಸ್ಥೆಗಳು ಮತ್ತು ಬ್ಯಾಂಕ್‌ ಖಾತೆಗಳಿಗೆ ನುಸುಳಿ, ಅವರ ಹಣಕಾಸಿನ ಮೇಲೆ ಹಿಡಿತ ಸಾಧಿಸಿದರು ಎಂದು ಸಿಬಿಐ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಮ ಭಾರಿ ಮ್ರಮಾಣದ ಹಣ ಸಿಲುಕಿಕೊಂಡಿದೆ ಎಂದು ಸುಳ್ಳು ಹೇಳಿಆರೋಪಿಗಳು ಅಮೆರಿಕ ಪ್ರಜೆಯಿಮದ 40 ಮಿಲಿಯನ್‌ ಯುಎಸ್‌‍ ಡಾಲರ್‌ (ರೂ. 350 ಕೋಟಿ) ಅನ್ನು ತಮ ನಿಯಂತ್ರಣದಲ್ಲಿರುವ ಕ್ರಿಪ್ಟೋಕರೆನ್ಸಿ ವ್ಯಾಯಾಲೆಟ್‌ಗಳಿಗೆ ವರ್ಗಾಯಿಸುವಂತೆ ಮಾಡಿದ್ದರು.
ಕಾರ್ಯಾಚರಣೆಯ ಸಮಯದಲ್ಲಿ, ಅಕ್ರಮ ಕಾಲ್‌ ಸೆಂಟರ್‌ನಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ 34 ಜನರನ್ನು ಸಿಬಿಐ ರೆಡ್‌ ಹ್ಯಾಂಡ್‌ ಆಗಿ ಬಂಧಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಮೃತಸರದ ಖಾಲ್ಸಾ ಮಹಿಳಾ ಕಾಲೇಜಿನ ಎದುರಿನ ಗ್ಲೋಬಲ್‌ ಟವರ್‌ನಲ್ಲಿ ಡಿಜಿಕಾಪ್‌್ಸ ದಿ ಫ್ಯೂಚರ್‌ ಆಫ್‌ ಡಿಜಿಟಲ್‌‍ ಹೆಸರಿನಲ್ಲಿ ಆರೋಪಿಗಳು ನಿರ್ವಹಿಸುತ್ತಿದ್ದ ಕಾಲ್‌ ಸೆಂಟರ್‌ ಅನ್ನು ತನಿಖಾ ಸಂಸ್ಥೆ ಪತ್ತೆ ಮಾಡಿದೆ.

ಕಾಲ್‌ ಸೆಂಟರ್‌ ಮೇಲೆ ನಡೆದ ದಾಳಿಯಲ್ಲಿ 85 ಹಾರ್ಡ್‌ ಡ್ರೈವ್‌ಗಳು, 16 ಲ್ಯಾಪ್‌ಟಾಪ್‌ಗಳು ಮತ್ತು 44 ಮೊಬೈಲ್‌ ಫೋನ್‌ಗಳಲ್ಲಿ ಡಿಜಿಟಲ್‌ ಪುರಾವೆಗಳು ಮತ್ತು ಅಕ್ರಮ ಆಸ್ತಿಗಳು ಪತ್ತೆಯಾಗಿದ್ದು, ಜಾಗತಿಕ ವಂಚನೆಯ ಮೂಲವನ್ನು ಪತ್ತೆಹಚ್ಚುವ ಡಿಜಿಟಲ್‌ ಹಾದಿಯನ್ನು ಬಹಿರಂಗಪಡಿಸುವ ಅಪರಾಧ ದತ್ತಾಂಶಗಳಿಂದ ತುಂಬಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಆಪರೇಷನ್‌ ಚಕ್ರರ ಭಾಗವಾಗಿ, ಸಿಬಿಐನ ಅಂತರರಾಷ್ಟ್ರೀಯ ಕಾರ್ಯಾಚರಣೆ ವಿಭಾಗವು ಇಂಟರ್‌ಪೋಲ್‌‍ ಮತ್ತು ವಿದೇಶಿ ಕಾನೂನು ಜಾರಿ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಸಂಘಟಿತ ತಂತ್ರಜ್ಞಾನ ಸಕ್ರಿಯಗೊಳಿಸಿದ ಅಪರಾಧ ಜಾಲವನ್ನು ತ್ವರಿತವಾಗಿ ಗುರುತಿಸುತ್ತಿದೆ ಮತ್ತು ಕ್ರಮ ಕೈಗೊಳ್ಳುತ್ತಿದೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿ ಹೇಳಿದರು.

RELATED ARTICLES

Latest News