ಕೋಲ್ಕತ್ತಾ, ಅ.8- ರಾಜ್ಯದಲ್ಲಿನ ಪೌರ ಸಂಸ್ಥೆಗಳ ನೇಮಕಾತಿಯಲ್ಲಿನ ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಇಂದು ಬೆಳಿಗ್ಗೆ ಇಲ್ಲಿ ಹಿರಿಯ ಸಚಿವ ಫಿರ್ಹಾದ್ ಹಕೀಮ್ ಅವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಲ್ಕತ್ತಾದ ಮೇಯರ್ ಆಗಿದ್ದ ಹಕೀಮ್ ಅವರು ಪ್ರಸ್ತುತ ಮಮತಾ ಸರ್ಕಾರದಲ್ಲಿ ನಗರಾಭಿವೃದ್ಧಿ ಮತ್ತು ಮುನ್ಸಿಪಲ್ ವ್ಯವಹಾರಗಳ ಸಚಿವರಾಗಿದ್ದರೆ.
ಸಿಬಿಐ ಅಧಿಕಾರಿಗಳ ತಂಡವು ಕೇಂದ್ರ ಪಡೆಗಳ ದೊಡ್ಡ ತುಕಡಿಯೊಂದಿಗೆ ದಕ್ಷಿಣ ಕೋಲ್ಕತ್ತಾದ ಚೆಟ್ಲಾ ಪ್ರದೇಶದಲ್ಲಿ ಹಕೀಮ್ ಅವರ ನಿವಾಸ ಇಂದು ಬೆಳ್ಳಂಬೆಳಿಗೆ ತಲುಪಿ ಶೋಧ ಕಾರ್ಯ ನಡೆಸಿದ್ದಾರೆ. ಇಬ್ಬರು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮನೆಯ ಹೊರಗೆ ಜಮಾಯಿಸಿ ಟಿಎಂಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಸೋಮಶೇಖರ್ ಅಸಮಾಧಾನ ತಣಿಸುವ ಜವಾಬ್ದಾರಿ ಬಿಎಸ್‍ವೈ ಹೆಗಲಿಗೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಗುರುವಾರ, ಜಾರಿ ನಿರ್ದೇಶನಾಲಯ (ಇಡಿ) ಆಹಾರ ಮತ್ತು ಸರಬರಾಜು ಸಚಿವ ರಥಿನ್ ಘೋಷ್ ಅವರ ನಿವಾಸ ಸೇರಿದಂತೆ ಅನೇಕ ಸ್ಥಳಗಳಲ್ಲಿ ಶೋಧ ನಡೆಸಿತು.
ಕಳೆದ 2014 ಮತ್ತು 2018 ರ ನಡುವೆ ರಾಜ್ಯದ ವಿವಿಧ ನಾಗರಿಕ ಸಂಸ್ಥೆಗಳು ವಿತ್ತೀಯ ಪರಿಗಣನೆಗೆ ವಿರುದ್ಧವಾಗಿ ಸುಮಾರು 1,500 ಜನರನ್ನು ಅಕ್ರಮವಾಗಿ ನೇಮಕ ಮಾಡಿಕೊಂಡಿವೆ ಎಂದು ಕೇಂದ್ರ ತನಿಖಾ ಸಂಸ್ಥೆಗಳು ಆರೋಪಿಸಿವೆ.