Wednesday, February 26, 2025
Homeರಾಷ್ಟ್ರೀಯ | Nationalತಿರುಪತಿ ಲಡ್ಡು ಕಲಬೆರಕೆ ಪ್ರಕರಣ : ತಪ್ರೊಪ್ಪಿಕೊಂಡ ಆರೋಪಿ

ತಿರುಪತಿ ಲಡ್ಡು ಕಲಬೆರಕೆ ಪ್ರಕರಣ : ತಪ್ರೊಪ್ಪಿಕೊಂಡ ಆರೋಪಿ

CBI seeks fresh custody of accused in Tirupati laddu adulteration case

ತಿರುಮಲ( ಆಂಧ್ರಪ್ರದೇಶ), ಫೆ.26- ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ತಯಾರಿಕೆಗೆ ಸರಬರಾಜು ಮಾಡಿದ ತುಪ್ಪದಲ್ಲಿ ಕಲಬೆರಕೆ ಮಾಡಲಾಗಿದೆ ಎಂದು ಎ-5 ಆರೋಪಿ ಅಪೂರ್ವ ಚಾಪ್ಟಾ ವಿಶೇಷ ತನಿಖಾ ತಂಡದ ಎದುರು ಬಾಯ್ದಿಟ್ಟಿದ್ದಾನೆ. ಎಸ್‌ಐಟಿಯ ವಿಚಾರಣೆ ವೇಳೆ, ತಾನು ಕೆಮಿಕಲ್ ಎಂಜಿನಿಯರಿಂಗ್ ಓದಿದ್ದು, ತುಪ್ಪದಲ್ಲಿ ರಾಸಾಯನಿಕ ಬೆರೆಸಿರುವುದನ್ನು ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ.

ಕಸ್ಟಡಿಗೆ ನೀಡಲು ಎಸ್‌ಐಟಿ ಅರ್ಜಿ:
ರಾಸಾಯನಿಕಗಳನ್ನು ಎಲ್ಲಿಂದ ಸಂಗ್ರಹಿಸಲಾಗಿದೆ, ಎಷ್ಟು ಪ್ರಮಾಣದಲ್ಲಿ ಬಳಸಲಾಗಿದೆ ಮತ್ತು ಯಾರ ಪಾತ್ರವಿದೆ ಎಂಬುದರ ಕುರಿತು ಹೆಚ್ಚಿನ ತನಿಖೆ ಅಗತ್ಯವಿದೆ. ಅದಕ್ಕಾಗಿ ಅಪೂರ್ವ ಚಾವ್ಹಾನನ್ನು ಮತ್ತೊಮ್ಮೆ ಕಸ್ಟಡಿಗೆ ಒಪ್ಪಿಸುವಂತೆ ತಿರುಪತಿಯ 2ನೇ ಹೆಚ್ಚುವರಿ ಮುನ್ಸಿಫ್ ನ್ಯಾಯಾಲಯದಲ್ಲಿ ಎಸ್‌ಐಟಿ ಪರವಾಗಿ ವಕೀಲರು ಅರ್ಜಿ ಸಲ್ಲಿಸಿದ್ದಾರೆ.

ಜಾಮೀನು ಅರ್ಜಿ ಹಿಂಪಡೆದ ಆರೋಪಿಗಳು:
ಇವರೊಂದಿಗೆ ಪ್ರಕರಣದ ಎ3 ಆರೋಪಿ ವಿಪಿನ್ ಜೈನ್ ಅವರನ್ನೂ ಕಸ್ಟಡಿಗೆ
ನೀಡುವಂತೆ ಕೋರಲಾಗಿತ್ತು. ಎಸ್‌ಐಟಿ ಪರವಾಗಿ ಸ್ಥಳೀಯ ಎಪಿಪಿ ಮತ್ತು ವಿಜಯವಾಡದ ಸಿಬಿಐ ನ್ಯಾಯಾಲಯದ ಎಪಿಪಿ ವಾದ ಆಲಿಸಿದರು. ಮತ್ತೊಂದೆಡೆ, ಭೋಲೆಬಾಬಾ ಸಾವಯವ ಡೈರಿ ನಿರ್ದೇಶಕರಾದ ವಿಪಿನ್ ಜೈನ್ (ಎ 3) ಮತ್ತು ಪೊಮಿಲ್ ಜೈನ್ (ಎ 4) ಅವರು ತಮ್ಮ ವಕೀಲರಾದ ಎಪಿಪಿ ಪಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದಾರೆ ಎಂದು ಜಯಶೇಖರ್ ಹೇಳಿದ್ದಾರೆ.

ಕಸ್ಟಡಿ ಅರ್ಜಿ ಬಾಕಿ ಇರುವುದರಿಂದ ಜಾಮೀನು ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ಅವರ ವಕೀಲರು ತಿಳಿಸಿದ್ದಾರೆ. ನ್ಯಾಯಾಧೀಶ ಕೋಟೇಶ್ವರ ರಾವ್ ಅವರು ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದರು. ಅಪೂರ್ವ ಚಾವ್ಹಾ ಸಲ್ಲಿಸಿದ್ದ ಜಾಮೀನು ಅರ್ಜಿ ಹಾಗೂ ಎಸ್‌ಐಟಿ ಸಲ್ಲಿಸಿದ್ದ ಕಸ್ಟಡಿ ಅರ್ಜಿ ವಿಚಾರಣೆಯನ್ನು ಇದೇ 27ಕ್ಕೆ ಮುಂದೂಡಲಾಗಿದೆ.

RELATED ARTICLES

Latest News