Monday, July 8, 2024
Homeರಾಜ್ಯಮತ ಎಣಿಕೆಯ ಪ್ರತಿಯೊಂದು ಟೇಬಲ್‌ಗೂ ಸಿಸಿ ಕ್ಯಾಮೆರಾ

ಮತ ಎಣಿಕೆಯ ಪ್ರತಿಯೊಂದು ಟೇಬಲ್‌ಗೂ ಸಿಸಿ ಕ್ಯಾಮೆರಾ

ಬೆಂಗಳೂರು,ಜೂ.2- ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುವ ಪ್ರತಿ ಟೇಬಲ್‌ಗೂ ತಲಾ ಒಂದೊಂದು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ಗಿರಿನಾಥ್‌ ಇಂದಿಲ್ಲಿ ತಿಳಿಸಿದರು.

ಇವಿಎಂಗಳನ್ನಿಟ್ಟಿರುವ ಸ್ಟ್ರಾಂಗ್‌ ರೂಂಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಾರಿ ಫಲಿತಾಂಶ ಪ್ರಕಟಣೆಗೆ ಇನ್ನಿಲ್ಲದಂತಹ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ನಗರದ ಮೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕೆಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ.ಒಂದೊಂದು ರೂಮಿನಲ್ಲಿ 14 ಟೆಬಲ್‌ಗಳನ್ನು ಹಾಕಲಾಗುವುದು ಈ ಬಾರಿ ಹೆಚ್ಚಿನ ಪ್ರಮಾಣದ ಪೋಸ್ಟಲ್‌ ಬ್ಯಾಲೆಟ್‌ ಬಂದಿರುವುದರಿಂದ ಪೋಸ್ಟಲ್‌ ಬ್ಯಾಲೆಟ್‌ ವ್ಯವಸ್ಥೆಗೆ ಪ್ರತ್ಯೇಕ ರೂಮ್‌ ಮಾಡಲಾಗಿದ್ದು, ಏಕಕಾಲಕ್ಕೆ ಪೋಸ್ಟಲ್‌ ಬ್ಯಾಲೆಟ್‌ಗಳ ಮತ ಎಣಿಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಮತ ಎಣಿಕೆ ಕಾರ್ಯಕ್ಕೆ 1200 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮತ ಎಣಿಕೆ ಸಂದರ್ಭದಲ್ಲಿ ಆನ್‌ ಕೋರ್‌ ಅಂತ ಎಲೆಕ್ಷನ್‌ ಕಮಿಷನ್‌ ಸಾಫ್ಟವೇರ್‌ ಇದೆ ಅದರಲ್ಲಿ ಮಾಹಿತಿ ಎಂಟ್ರಿ ಮಾಡಲಾಗುವುದು ಎಂದು ಅವರು ಹೇಳಿದರು.ಮತ ಎಣಿಕೆ ಮಾಡುವ ಪ್ರತಿ ಟೆಬಲ್‌ಗೂ ಒಂದೊಂದು ಸಿಸಿ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಕಾರಿಡಾರ್‌ಗಳಲ್ಲಿ ಆಗು ಚಟುವಟಿಕೆಗಳ ಮೇಲೂ ತೀವ್ರ ನಿಗಾ ವಹಿಸಲಾಗುವುದು ಎಂದು ಅವರು ವಿವರಿಸಿದರು.

ಮಾಧ್ಯಮದವರಿಗೆ ಪ್ರತ್ಯೇಕ ರೂಮ್‌ ವ್ಯವಸ್ಥೆ ಮಾಡಲಾಗಿದೆ ಅವರಿಗೆ ಇನ್‌ಸೈಡ್‌ ಮೊಬೈಲ್‌ ತರುವುದನ್ನು ನಿಷೇಧಿಸಲಾಗಿದೆ ಎಂದು ತುಷಾರ್‌ಗಿರಿನಾಥ್‌ ತಿಳಿಸಿದರು.ಸಾಕಷ್ಟು ಸಂಖ್ಯೆಯಲ್ಲಿ ಮೈಕ್ರೋ ಅಬ್ಸರ್ವರ್‌ ಇರ್ತಾರೆ, ನಾಳೆ ಬೆಳಿಗ್ಗೆ ಯಾವ ಟೇಬಲ್‌ಗೆ ಯಾವ ಸಿಬ್ಬಂದಿ ಹೋಗಬೇಕು ಅಂತ ಅಬ್ಸರ್ವರ್‌ ಎದುರು ತೀರ್ಮಾನ ಮಾಡಲಾಗುತ್ತದೆ ಎಂದರು.

ಬೆಂಗಳೂರು ನಗರ ಜಿಲ್ಲೆಯ 3 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಮತ್ತು ಸ್ಟ್ರಾಂಗ್‌ ರೂಂ ಕೇಂದ್ರಗಳ ವಿವರ:

  1. ಬೆಂಗಳೂರು ಕೇಂದ್ರ: ಮೌಂಟ್‌ ಕಾರ್ಮೆಲ್‌ ಕಾಲೇಜು, ಅರಮನೆ ರಸ್ತೆ, ವಸಂತನಗರ, ಬೆಂಗಳೂರು.

ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 8
ಮತಗಟ್ಟೆಗಳ ಸಂಖ್ಯೆ: 2125
ಮತ ಎಣಿಕೆ ಕೊಠಡಿಗಳ ಸಂಖ್ಯೆ: 10
ಒಟ್ಟು ಟೇಬಲ್‌ ಗಳ ಸಂಖ್ಯೆ: 135
ಒಟ್ಟು ಸಿಬ್ಬಂದಿಯ ಸಂಖ್ಯೆ: 416

  1. ಬೆಂಗಳೂರು ಉತ್ತರ: ಸೆಂಟ್‌ ಜೋಸೆಫ್‌ ಕಾಲೇಜು, ಮಲ್ಯ ರಸ್ತೆ, ಬೆಂಗಳೂರು.

ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 8
ಮತಗಟ್ಟೆಗಳ ಸಂಖ್ಯೆ: 2911
ಮತ ಎಣಿಕೆ ಕೊಠಡಿಗಳ ಸಂಖ್ಯೆ: 19
ಒಟ್ಟು ಟೇಬಲ್‌ ಗಳ ಸಂಖ್ಯೆ: 130
ಒಟ್ಟು ಸಿಬ್ಬಂದಿಯ ಸಂಖ್ಯೆ: 390

  1. ಬೆಂಗಳೂರು ದಕ್ಷಿಣ: ಎಸ್‌‍.ಎಸ್‌‍.ಎಂ.ರ್ಆ.ವಿ ಕಾಲೇಜು, 9ನೇ ಬ್ಲಾಕ್‌‍, ಜಯನಗರ, ಬೆಂಗಳೂರು.

ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 8
ಮತಗಟ್ಟೆಗಳ ಸಂಖ್ಯೆ: 2120
ಮತ ಎಣಿಕೆ ಕೊಠಡಿಗಳ ಸಂಖ್ಯೆ: 9
ಒಟ್ಟು ಟೇಬಲ್‌ ಗಳ ಸಂಖ್ಯೆ: 118
ಒಟ್ಟು ಸಿಬ್ಬಂದಿಯ ಸಂಖ್ಯೆ: 354

ಈ ವೇಳೆ ಚುನಾವಣಾಧಿಕಾರಿಗಳಾದ ಡಾ. ಕೆ. ಹರೀಶ್‌ ಕುಮಾರ್‌ , ದಯಾನಂದ್‌‍, ವಿನೋತ್‌ ಪ್ರಿಯಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

Latest News