Saturday, May 4, 2024
Homeಬೆಂಗಳೂರುಅಕ್ರಮ ಕುದರೆ ರೇಸ್ ಬೆಟ್ಟಿಂಗ್ : ಸಿಸಿಬಿ ದಾಳಿ 3.45 ಕೋಟಿ ನಗದು ಜಪ್ತಿ

ಅಕ್ರಮ ಕುದರೆ ರೇಸ್ ಬೆಟ್ಟಿಂಗ್ : ಸಿಸಿಬಿ ದಾಳಿ 3.45 ಕೋಟಿ ನಗದು ಜಪ್ತಿ

ಬೆಂಗಳೂರು, ಜ.13- ಅಕ್ರಮ ಕುದರೆ ರೇಸ್ ಬೆಟ್ಟಿಂಗ್ ಸ್ಟಾಲ್‍ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ 66 ಮಂದಿಯನ್ನು ವಶಕ್ಕೆ ಪಡೆದು 3.45ಕೋಟಿ ರೂ. ನಗದು ಹಾಗೂ 55 ಮೊಬೈಲ್‍ಗಳನ್ನು ಜಪ್ತಿಮಾಡಿದ್ದಾರೆ.

ರೇಸ್‍ಕೋರ್ಸ್ ರಸ್ತೆಯ ಬೆಂಗಳೂರು ಟರ್ಫ್ ಕ್ಲಬ್ ಆವರಣದಲ್ಲಿ ಯಾವುದೇ ಅನಧಿಕೃತ ಪರವಾನಗೆ ಇಲ್ಲದೆ ಅಕ್ರಮ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕೆಲವರು ಟರ್ಫ್ ಕ್ಲಬ್ ಪರವಾಗಿರುವ ಲೀಗಲ್ ಬುಕ್ಕಿಗಳೆಂದು ಹೇಳಿಕೊಂಡು ಬೆಂಗಳೂರು ಟರ್ಫ್ ಕ್ಲಬ್‍ಗೆ ಸಮನಾಂತರವಾಗಿ ಸಾರ್ವಜನಿಕರು, ಪಂಟುರುಗಳಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಅಕ್ರಮ ರೇಸ್ ಬೆಟ್ಟಿಂಗ್ ನಡೆಸುತ್ತಿದ್ದರು.

ಪರವಾನೆಗೆ ಪಡೆದ ಕೆಲವು ಎಂಜೆಟ್‍ಗಳು ಸರ್ಕಾದ ಆದೇಶಗಳನ್ನು ಸ್ಟಾಲ್‍ಗಳಲ್ಲಿ ಪ್ರಕಟಿಸದೆ, ಸರಿಯಾದ ಲೆಕ್ಕ ನಿರ್ವಹಣೆ ಮಾಡದೆ. ಗಿರಾಕಿಗಳಿಂದ ಪಡೆದುಕೊಂಡ ಹಣಕ್ಕೆ ಯಾವುದೇ ಸೂಕ್ತ ದಾಖಲೆಗಳನ್ನು ನಿರ್ವಹಣ ಮಾಡದೇ, ಅನಧಿಕೃತ ರೇಸ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿಕೊಂಡು ಸರ್ಕಾರಕ್ಕೆ ತೆರಿಗೆ ವಂಚಿಸಿ ಮೋಸ ಮಾಡುತ್ತಿದ್ದರು.

ಕೋಚಿಮೂಲ್ ನೇಮಕಾತಿ ಅಕ್ರಮ : 10 ಮಂದಿಗೆ ಇಡಿ ನೋಟಿಸ್

ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ಟರ್ಫ್ ಕ್ಲಬ್ ಮೇಲೆ ದಾಳಿ ನಡೆಸಿ, ಅಕ್ರಮ ರೇಸ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ 66 ಜನರನ್ನು ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ್ದ 55 ಮೊಬೈಲ್‍ಗಳು, ದಾಖಲಾತಿಗಳು ಹಾಗೂ 3.45.78.148 ರೂ, ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಪ್ರಕರಣದಲ್ಲಿ 9 ಮಂದಿ ತಲೆಮರೆಸಿಕೊಂಡಿದ್ದಾರೆ. ಹೈಗ್ರೌಂಡ್ಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

RELATED ARTICLES

Latest News