Tuesday, May 7, 2024
Homeರಾಜ್ಯಪ್ರತ್ಯೇಕ ಅಪಘಾತ : ಸ್ವಿಗ್ಗಿ ಮ್ಯಾನೇಜರ್-ಜೊಮೊಟೋ ಡೆಲಿವರಿ ಬಾಯ್ ಸಾವು

ಪ್ರತ್ಯೇಕ ಅಪಘಾತ : ಸ್ವಿಗ್ಗಿ ಮ್ಯಾನೇಜರ್-ಜೊಮೊಟೋ ಡೆಲಿವರಿ ಬಾಯ್ ಸಾವು

ಬೆಂಗಳೂರು,ಜ.13- ನಗರದಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ ಸ್ವಿಗ್ಗಿ ಮ್ಯಾನೇಜರ್ ಹಾಗೂ ಜೊಮೊಟೊ ಫುಡ್ ಡೆಲಿವರಿ ಬಾಯ್ ಮೃತಪಟ್ಟಿದ್ದಾರೆ.

ಯಶವಂತಪುರ ಸಂಚಾರ: ಕೆಲಸ ಮುಗಿಸಿಕೊಂಡು ಸ್ವಿಗ್ಗಿ ಮ್ಯಾನೇಜರ್ ಮೋಟಾರ್ ಬೈಕ್‍ನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಕಬ್ಬಿಣದ ಗ್ರಿಲ್ ಚುಚ್ಚಿದ ಪರಿಣಾಮ ಮೃತಪಟ್ಟಿದ್ದಾರೆ. ಮತ್ತಿಕೆರೆ ನಿವಾಸಿ ಅನಿಲ್‍ಕುಮಾರ್(29) ಮೃತಪಟ್ಟ ಸ್ವಿಗ್ಗಿ ಮ್ಯಾನೇಜರ್.

ಕೆಲಸ ಮುಗಿಸಿಕೊಂಡು ಇಂದು ಬೆಳಗಿನ ಜಾವ 12.45ರ ಸಮಯದಲ್ಲಿ ಬೈಕ್‍ನಲ್ಲಿ ಹೋಗುತ್ತಿದ್ದಾಗ ಜೆ.ಪಿ.ಪಾರ್ಕ್ ಟ್ಯಾಂಕ್ ಬಂಡ್ ರಸ್ತೆಯ ಅಕ್ಕಯಮ್ಮ ಬಾರ್ ಬಳಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಾಗ ಕಬ್ಬಿಣದ ಗ್ರಿಲ್ ಆತನ ಎದೆಗೆ ಹಾಗೂ ಕುತ್ತಿಗೆ ಬಳಿ ತಗುಲಿ ತೀವ್ರ ರಕ್ತಸ್ರಾವವಾಗಿ ಸ್ವಲ್ಪ ದೂರ ಉಜ್ಜಿಕೊಂಡು ಹೋಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಯಶವಂತಪುರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಎಚ್‍ಎಎಲ್ ಏರ್‍ಪೋರ್ಟ್: ಜೊಮೊಟೊ ಫುಡ್ ಡೆಲಿವರಿ ಬಾಯ್ ಇಂದು ಬೆಳಗಿನ ಜಾವ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಅದೇ ರಸ್ತೆಯಲ್ಲಿ ಬರುತ್ತಿದ್ದ ಕ್ಯಾಬ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿರುವ ಘಟನೆ ಎಚ್‍ಎಎಲ್ ಏರ್‍ಪೋರ್ಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಉತ್ತರಪ್ರದೇಶದ ರಾಜೇಶ್‍ಕುಮಾರ್(32) ಮೃತಪಟ್ಟ ಫುಡ್ ಡೆಲಿವರಿ ಬಾಯ್.

ದೆಹಲಿ ವಿವಿಯ ಮಹಿಳಾ ಶೌಚಾಲಯಗಳ ಮುಂದೆ ಸಿಸಿ ಕ್ಯಾಮರಾ ಅಳವಡಿಕೆ

ಇಂದಿರಾನಗರದಲ್ಲಿ ವಾಸವಾಗಿದ್ದ ರಾಜೇಶ್‍ಕುಮಾರ್ ಅವರು ಕೆಲಸ ಮುಗಿಸಿಕೊಂಡು ಇಂದು ಬೆಳಗಿನ ಜಾವ 1 ಗಂಟೆ ಸುಮಾರಿನಲ್ಲಿ ದ್ವಿಚಕ್ರ ವಾಹನದಲ್ಲಿ ಸುರಂಜನ್‍ದಾಸ್ ರಸ್ತೆಯಲ್ಲಿ ಎಚ್‍ಎಎಲ್ ಮುಖ್ಯಗೇಟ್ ಕಡೆಯಿಂದ ಜೆಬಿನಗರ ಕ್ರಾಸ್ ಕಡೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಹಿಂದಿನಿಂದ ಬರುತ್ತಿದ್ದ ಕ್ಯಾಬ್ ಅತಿವೇಗದಿಂದಾಗಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಕೆಳಗೆ ಬಿದ್ದು ತಲೆಗೆ ಗಂಭೀರ ಪೆಟ್ಟಾಗಿದೆ.

ತಕ್ಷಣ ಅವರನ್ನು ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋದರಾದರೂ ವೈದ್ಯರು ಪರೀಕ್ಷಿಸಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. ಈ ಬಗ್ಗೆ ಎಚ್‍ಎಎಲ್ ಏರ್‍ಪೊರ್ಟ್ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅಪಘಾತವೆಸಗಿದ ಕ್ಯಾಬ್ ಹಾಗೂ ಚಾಲಕನ ಪತ್ತೆಗಾಗಿ ಶೋಧ ಕೈಗೊಂಡಿದ್ದಾರೆ.

RELATED ARTICLES

Latest News