Thursday, June 5, 2025
Homeಬೆಂಗಳೂರುಗೋಡೌನ್ ಮೇಲೆ ಸಿಸಿಬಿ ದಾಳಿ : 61.82 ಲಕ್ಷ ರೂ. ಮೌಲ್ಯದ ತಂಬಾಕು-ನಿಕೋಟಿನ್‌ ಪದಾರ್ಥ ವಶ

ಗೋಡೌನ್ ಮೇಲೆ ಸಿಸಿಬಿ ದಾಳಿ : 61.82 ಲಕ್ಷ ರೂ. ಮೌಲ್ಯದ ತಂಬಾಕು-ನಿಕೋಟಿನ್‌ ಪದಾರ್ಥ ವಶ

CCB raids godown: Tobacco-nicotine worth Rs 61.82 lakh seized

ಬೆಂಗಳೂರು, ಜೂ.3-ಗೋಡಾನ್‌ವೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿ 61.82 ಲಕ್ಷ ರೂ. ಮೌಲ್ಯದ ತಂಬಾಕು, ನಿಕೋಟಿನ್‌ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.ತಲಘಟ್ಟಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಕನಕಪುರ ಮುಖ್ಯ ರಸ್ತೆಯಲ್ಲಿರುವ ಗೋಡಾನ್‌ವೊಂದರಲ್ಲಿ ನಿಷೇಧಿತ ತಂಬಾಕು, ನಿಕೋಟಿನ್‌ ಒಳಗೊಂಡ ಪದಾರ್ಥಗಳನ್ನು ಅಕ್ರಮವಾಗಿ ಸಂಗ್ರಹ ಮಾಡಿಕೊಂಡು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರಿಗೆ ಲಭಿಸಿದೆ.

ಈ ಮಾಹಿತಿ ಆಧರಿಸಿದ ಪೊಲೀಸರು ಗೋಡಾನ್‌ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಅವರ ಬಳಿ ಯಾವುದೇ ಪರವಾನಿಗಿ ಇಲ್ಲ ಎಂಬುವುದು ಗೊತ್ತಾಗಿದೆ.

ಗೋಡಾನ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಲ್ಪಟ್ಟಿದ್ದ ಗಣೇಶ್‌ 701 ಟೊಬ್ಯಾಕೋ ಪ್ಯಾಕೇಟ್‌ ಇರುವ 155 ಚೀಲ, ಕೂಲ್‌ ಲಿಪ್‌ ಟೊಬ್ಯಾಕೋ ಇರುವ 160 ಚೀಲ, ಎಸ್‌‍ಜಿಟಿ-1 ಟೊಬ್ಯಾಕೋ ಇರುವ 60 ಬಾಕ್‌್ಸಗಳು, ಸ್ಪಾಗಟ ಪಾನ್‌ ಮಾಸಾಲಾ 60 ಬಾಕ್‌್ಸಗಳನ್ನು ವಶಪಡಿಸಿಕೊಂಡಿದ್ದು ಅವುಗಳ ಒಟ್ಟು ಮೌಲ್ಯ 61.82 ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ.
ತಂಬಾಕು, ನಿಕೋಟಿನ್‌ ಪದಾರ್ಥಗಳನ್ನು ಸರಬರಾಜು ಮಾಡಲು ಬಳಸುತ್ತಿದ್ದ ಒಂದು ಗೂಡ್ಸ್ ವಾಹನವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಇ-ಸಿಗರೇಟ್‌, ವಿದೇಶಿ ಸಿಗರೇಟ್‌ ವಶ :
ಬೆಂಗಳೂರು, ಜೂ.3-ಕಾನೂನು ಬಾಹಿರವಾಗಿ ನಿಷೇಧಿತ ಇ-ಸಿಗರೇಟ್‌ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿ 70 ಸಾವಿರ ಬೆಲೆಯ ಇ-ಸಿಗರೇಟ್‌ ಹುಕ್ಕಾ ಫ್ಲೇವರ್‌ ಮತ್ತು ವಿದೇಶಿ ಸಿಗರೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಚ್‌ಆರ್‌ಬಿಆರ್‌ ಲೇಔಟ್‌ ಎರಡನೇ ಹಂತದಲ್ಲಿರುವ ಅಂಗಡಿಯೊಂದರಲ್ಲಿ ಇ-ಸಿಗರೇಟ್‌ ಸೇರಿದಂತೆ ವಿದೇಶಿ ಸಿಗರೇಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅಂಗಡಿ ಮೇಲೆ ದಾಳಿ ಮಾಡಿ ವ್ಯಕ್ತಿಯೊಬ್ಬನನ್ನು ಬಂಧಿಸಿ ಅಂಗಡಿಯಲ್ಲಿದ್ದ ಸಿಗರೇಟ್‌ ಮತ್ತು ಟೋಬಾಕೋ ವಸ್ತುಗಳ ಬಗ್ಗೆ ವಿಚಾರಣೆ ನಡೆಸಿದಾಗ, ಕಾನೂನು ಬಾಹಿರವಾಗಿ ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.

ಅಂಗಡಿಯಲ್ಲಿದ್ದ 201 ಇ-ಸಿಗರೇಟ್‌ಗಳು,297 ವಿವಿಧ ಹುಕ್ಕಾ ಫ್ಲೇವರ್‌ಗಳು, 6 ವಿದೇಶಿ ಸಿಗರೇಟ್‌ಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಮೌಲ್ಯ 70 ಸಾವಿರ ರೂ.ಗಳೆಂದು ಅಂದಾಜಿಸಲಾಗಿದೆ.ಅಂಗಡಿಯ ಮಾಲೀಕ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರೆದಿದೆ. ಈ ಬಗ್ಗೆ ಬಾಣಸವಾಡಿ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶ್ವ ತಂಬಾಕು ರಹಿತ ಅಭಿಯಾನ : 21.19 ಲಕ್ಷ ರೂ. ದಂಡ ವಸೂಲಿ :
ಬೆಂಗಳೂರು, ಜೂ.3-ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ನಗರ ಪೊಲೀಸರು ನಗರದಾದ್ಯಂತ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ವಿಶೇಷ ಅಭಿಯಾನದಲ್ಲಿ ಒಟ್ಟಾರೆ 11,507 ಪ್ರಕರಣಗಳನ್ನು ದಾಖಲಿಸಿ 21.19 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ನಾಗರಿಕರಿಗೆ ಆರೋಗ್ಯಕರ ಸುರಕ್ಷಿತ ಜೀವನ ಮತ್ತು ಸಧೃಡ ಸಮಾಜಕ್ಕಾಗಿ ತಂಬಾಕು ತ್ಯಜಿಸುವ ಕುರಿತು ಜಾಗೃತಿ ಅಭಿಯಾನಗಳನ್ನು ಕೈಗೊಳ್ಳುವ ಮೂಲಕ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಯಿತು.

ಜನಜಂಗುಳಿ ಹೆಚ್ಚಾಗಿರುವ ನಗರದ ಪ್ರಮುಖ ಸ್ಥಳಗಳಲ್ಲಿ ಸ್ವಯಂ ಸೇವಕರೊಂದಿಗೆ ಗಾಯನ, ಕಿರು ನಾಟಕಗಳು, ಭಿತ್ತಿಚಿತ್ರಗಳು, ಭಾಷಣಗಳು, ಘೋಷಣೆಗಳು ಹಾಗೂ ರ್ಯಾಲಿಗಳ ಮೂಲಕ ಯುವಜನತೆಯಲ್ಲಿ ತಂಬಾಕು ಸೇವನೆ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಅಭಿಯಾನಗಳು ಸಹ ಕೈಗೊಳ್ಳಲಾಗಿತ್ತು.

ನಗರದಾದ್ಯಂತ ವೈನ್‌ಶಾಪ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌್ಸ , ಲಾಡ್‌್ಜಗಳು, ಪಿಜಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮೇ 31 ರಿಂದ ನಿನ್ನೆಯವರೆಗೂ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು, ಕೋಪ್ಟಾ ಕಾಯ್ದೆಯಡಿ 11,324 ಪ್ರಕರಣಗಳನ್ನು ದಾಖಲಿಸಿ 20.91 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. 909 ಪ್ರಕರಣಗಳಲ್ಲಿ ತನಿಖೆಯು ಪ್ರಗತಿಯಲ್ಲಿರುತ್ತದೆ.

135 ಪ್ರಕರಣಗಳಲ್ಲಿ 22,800 ರೂ ದಂಡ, 48 ಪ್ರಕರಣಗಳಲ್ಲಿ 5000 ದಂಡ ವಸೂಲಿ ಮಾಡಲಾಗಿದೆ.ಒಟ್ಟು 863 ಅಽಕಾರಿಗಳು 254 ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಂಡಿದ್ದು, ಒಟ್ಟು 17,033 ವಿದ್ಯಾರ್ಥಿಗಳು ಭಾಗವಹಿಸಿದ್ದರು.ಸ್ಟೂಡೆಂಟ್‌ ಪೊಲೀಸ್‌ ಮಾರ್ಷಲ್‌ಗಳು ನೀಡುವ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿ ನಿರಂತರ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತದೆ.

RELATED ARTICLES

Latest News