Tuesday, May 13, 2025
Homeರಾಜ್ಯಕದನ ವಿರಾಮ ಅತ್ಯಂತ ಸೂಕ್ಷ್ಮ ವಿಚಾರ, ಬಹಿರಂಗವಾಗಿ ಚರ್ಚೆ ಮಾಡಲ್ಲ : ಖರ್ಗೆ

ಕದನ ವಿರಾಮ ಅತ್ಯಂತ ಸೂಕ್ಷ್ಮ ವಿಚಾರ, ಬಹಿರಂಗವಾಗಿ ಚರ್ಚೆ ಮಾಡಲ್ಲ : ಖರ್ಗೆ

Ceasefire is a very sensitive issue, will not be discussed openly: Kharge

ಕಲಬುರಗಿ,ಮೇ.13– ಕದನ ವಿರಾಮ ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ನಾನು ಈ ಬಗ್ಗೆ ಬಹಿರಂಗವಾಗಿ ಚರ್ಚಿಸುವುದಿಲ್ಲ, ಸರ್ವಪಕ್ಷ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಸಂಧಾನಕ್ಕೆ ಮಣಿದಿದ್ದಾರೆ ಎಂಬ ಚರ್ಚೆಗಳ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಟ್ರಂಪ್‌ ಕದನ ವಿರಾಮದ ಕ್ರೆಡಿಟ್‌ ತೆಗೆದುಕೊಳ್ಳಲು ಮಾತನಾಡುತ್ತಿದ್ದಾರೆ. ಇಲ್ಲ ಎಂದು ಮೋದಿಯವರು ಹೇಳುತ್ತಿದ್ದಾರೆ. ಇದು ಸೂಕ್ಷ್ಮ ವಿಚಾರ.

ಸರ್ವಪಕ್ಷಗಳ ಸಭೆ ಕರೆಯುತ್ತಾರೆ. ಅಲ್ಲಿ ನಾವು ಮಾತನಾಡುತ್ತೇವೆ ಎಂದರು.ದೂರವಾಣಿ ಸಂಭಾಷಣೆ ನೀಡಲು ಏನೆಲ್ಲಾ ಚರ್ಚೆಗಳಾಗಿವೆ ಎಂಬುದನ್ನು ನಾವು ಬಹಿರಂಗವಾಗಿ ಚರ್ಚೆ ಮಾಡಲಾಗುವುದಿಲ್ಲ. ಏನೆಲ್ಲಾ ನಡೆದಿದೆ ಎಂಬುದನ್ನು ಸರ್ವಪಕ್ಷ ಸಭೆಯಲ್ಲೇ ಮಾತನಾಡುತ್ತೇವೆ.

ಇಂದು ನಮ ಪಕ್ಷದ ಸಭೆ ಇದೆ. ಅಲ್ಲಿ ಚರ್ಚೆ ಮಾಡುತ್ತೇವೆ. ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆಯಬೇಕು ಎಂದು ಒತ್ತಾಯಿಸುತ್ತೇವೆ ಎಂದು ಹೇಳಿದರು. ಸರ್ವಪಕ್ಷ ಸಭೆಗೆ ಮೋದಿ ಗೈರು ಹಾಜರಾಗುವ ಬಗ್ಗೆಯೂ ಖರ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ತಟಸ್ಥರಾದರು.

RELATED ARTICLES

Latest News