Friday, November 22, 2024
Homeರಾಜ್ಯಕೇಂದ್ರ ಸರ್ಕಾರ ರಾಜ್ಯಕ್ಕೆ ನಯಾಪೈಸೆ ಬರ ಪರಿಹಾರ ನೀಡಿಲ್ಲ : ಪರಮೇಶ್ವರ್

ಕೇಂದ್ರ ಸರ್ಕಾರ ರಾಜ್ಯಕ್ಕೆ ನಯಾಪೈಸೆ ಬರ ಪರಿಹಾರ ನೀಡಿಲ್ಲ : ಪರಮೇಶ್ವರ್

ಬೆಂಗಳೂರು, ನ.2- ರಾಜ್ಯದಲ್ಲಿನ ಬರ ಪರಿಹಾರ ಹಣ ನೀಡಬೇಕಾದ ಕೇಂದ್ರ ಸರ್ಕಾರ, ಅಧಿಕಾರಿಗಳ ತಂಡದಿಂದ ಕಾಟಾಚಾರದ ಅಧ್ಯಯನ ನಡೆಸಿದ್ದು, ಈವರೆಗೂ ರಾಜ್ಯಕ್ಕೆ ನಯಾ ಪೈಸೆ ಅನುದಾನ ನೀಡಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ನಿಂತು ಮೂರು ತಿಂಗಳಾಗಿದೆ, ಆಗಿನಿಂದಲೇ ಬರ ಪರಿಸ್ಥಿತಿ ಇದೆ. ಬಿಜೆಪಿಯವರು ಇಷ್ಟು ದಿನ ಏಕೆ ಸುಮ್ಮನ್ನಿದ್ದರು. ಈಗ ಬರ ಅಧ್ಯಯನ ಪ್ರವಾಸ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ರಾಜ್ಯ ಸರ್ಕಾರ 200ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ. ಸುಮಾರು 32 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. 17 ಸಾವಿರ ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ, ಬಿಜೆಪಿಯವರು ಮೊದಲು ಹಣ ಕೊಡಿಸಲಿ ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರದಿಂದ ಈವರೆಗೂ ಒಂದು ಪೈಸೆ ಬಿಡುಗಡೆಯಾಗಿಲ್ಲ. ಕೇಂದ್ರದಿಂದ ಆಗಮಿಸಿದ ಬರ ಅಧ್ಯಯನ ತಂಡ ತಾವು ನೋಡಿದ ಕಡೆ ಹಸಿರು ಇದೆ ಎಂದು ವರದಿ ನೀಡಿದೆ. ತಂಡ ಬರುವ ಮುನ್ನಾ ಎರಡು ಮೂರು ದಿನ ರಾಜ್ಯದಲ್ಲಿ ಮಳೆಯಾಗಿತ್ತು, ಹಾಗಾಗಿ ಹಸಿರು ಕಾಣಿಸಿದೆ. ಅಂದ ಮಾತ್ರಕ್ಕೆ ಬೆಳೆಯಾಗಿದೆ ಎಂದು ಅರ್ಥವೇ. ಕೂಲಂಕುಶವಾಗಿ ಪರಿಶೀಲನೆ ನಡೆಸಬೇಕಿತ್ತಲ್ಲವೇ ? ಕೇಂದ್ರ ಸರ್ಕಾರಕ್ಕೆ ಬರ ಪರಿಹಾರಕ್ಕೆ ಹಣ ನೀಡಬೇಕು ಎಂಬ ಕಾಳಜಿ ಇದ್ದರೆ ಕೇಂದ್ರ ತಂಡ ರಾಜ್ಯದ ಅಕಾರಿಗಳು, ಸಚಿವರು, ಮುಖ್ಯಮಂತ್ರಿಯವರ ಜೊತೆ ಕುಲಂಕುಶವಾಗಿ ಚರ್ಚೆ ಮಾಡಬೇಕಿತ್ತು. ನೆಪ ಮಾತ್ರಕ್ಕೆ ಕಾಟಾಚಾರಕ್ಕೆ ಅಧ್ಯಯನ ಮಾಡಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆ ಆಧಾರಿಸಿ ಎನ್‍ಡಿಆರ್‍ಎಫ್ ಅಡಿ ನೀಡಬೇಕಾದ ಹಣವನ್ನಾದರೂ ಮುಂಗಡವಾಗಿ ನೀಡಬೇಕಿತ್ತು ಅಥವಾ ವಿಶೇಷ ಅನುದಾನವನ್ನಾದರೂ ನೀಡಬೇಕು. ಹಿಂದೆಲ್ಲಾ ಕಾಂಗ್ರೆಸ್ ಸರ್ಕಾರದಲ್ಲಿ ಮನಮೋಹನಸಿಂಗ್ ಪ್ರಧಾನಿಯಾಗಿದ್ದಾಗ ವಿಶೇಷ ಅನುದಾನವನ್ನಾಗಿ 2 ಸಾವಿರ ಕೋಟಿ ರೂಪಾಯಿ ನೀಡಲಾಗಿತ್ತು. ಈಗಲೂ ರಾಜ್ಯದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿಗೆ ಕೇಂದ್ರದಿಂದ ಹೆಚ್ಚಿನ ನೆರವು ಪಡೆಯಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಸರ್ವ ಪಕ್ಷ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗಲು ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸಲಾಗುವುದು. ಸಾಧ್ಯವಾಗದಿದ್ದರೆ ರಾಜ್ಯ ಸರ್ಕಾರದ ಎಲ್ಲಾ ಸಚಿವರು ದೆಹಲಿಗೆ ಹೋಗಿ ಪ್ರಯತ್ನಿಸುವ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದರು.

ಭಾರತಕ್ಕೆ ಬರುತ್ತಿದ್ದಾರೆ ಅಮೆರಿಕ ವಿದೇಶಾಂಗ, ರಕ್ಷಣಾ ಕಾರ್ಯದರ್ಶಿಗಳು

ಬಿಜೆಪಿಯವರು ವಸೂಲಿಗೆ ಬರುತ್ತಿದ್ದರೆ ?
ಕಾಂಗ್ರೆಸ್‍ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಬೆಂಗಳೂರಿಗೆ ಬಂದು ಸಭೆ ನಡೆಸಿದಾಕ್ಷಣ ಪಂಚರಾಜ್ಯಗಳ ಚುನಾವಣೆಗೆ ಹಣ ವಸೂಲಿ ಮಾಡಲು ಬಂದಿದ್ದರು ಎಂದು ಬಿಜೆಪಿಯವರು ಆಧಾರ ರಹಿತ ಟೀಕೆ ಮಾಡುತ್ತಿದ್ದಾರೆ. ಅದನ್ನು ಬಿಟ್ಟು ಅವರು ಬೇರೆ ಏನನ್ನು ಹೇಳಲು ಸಾಧ್ಯ. ಕಾಂಗ್ರೆಸ್‍ನ ನಾಯಕರು ಹಣವನ್ನು ಬ್ಯಾಗಿನಲ್ಲಿ ತುಂಬಿಕೊಂಡು ಹೆಗಲೆ ಮೇಲೆ ಹಾಕಿಕೊಂಡು ಹೋಗಿದ್ದಾರೆಯೇ ? ಸುಮ್ಮನ್ನೆ ಬಾಯಿಗೆ ಬಂದಂತೆ ಮಾತನಾಡಬಾರದು ಎಂದರು ತಿರುಗೇಟು ನೀಡದರು.

ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಅಕಾರದಲ್ಲಿದ್ದಾಗ ಅವರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಪದೇ ಪದೇ ಬೆಂಗಳೂರಿಗೆ ಬರುತ್ತಿದ್ದರು. ಆಗಲೂ ವಸೂಲಿಗೆ ಬರುತ್ತಿದ್ದರೂ ಎಂದು ಭಾವಿಸಬೇಕಲ್ಲವೇ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್‍ನಲ್ಲಿ ಶಾಸಕರು, ಸಚಿವರು, ನಾಯಕರ ಪೈಕಿ ಸರ್ಕಾರದ ಪರವಾಗಿ ಮಾತನಾಡುವವರಿಗೆ ಅಡ್ಡಿ ಇಲ್ಲ. ಪಕ್ಷ ಅಥವಾ ಸರ್ಕಾರದ ವಿರುದ್ಧ ಮಾತನಾಡಬಾರದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಸೂಚನೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ನಮಗೆ ಹೆಚ್ಚಿನ ಮಾಹಿತಿ ಇಲ್ಲ. ನಮ್ಮನ್ನು ಕರೆಸಿ ಯಾವುದೇ ಚರ್ಚೆ ಮಾಡಿಲ್ಲ, ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತ್ರ ಚರ್ಚೆ ಮಾಡಿದ್ದಾರೆ. ನಿಗಮ ಮಂಡಳಿಯ ನೇಮಕಾತಿ ಬಗ್ಗೆ ಚರ್ಚೆ ನಡೆದಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದರು.

ಕನ್ನಡ ಬಾವುಟಕ್ಕೆ ಅಧಿಕೃತ ಸ್ಥಾನ ಮಾನ ದೊರೆಯಬೇಕಿದೆ. ನಿನ್ನೆ ಕೂಡ ಅದು ಚರ್ಚೆಯಾಗುತ್ತಿತ್ತು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಾನ್ಯತೆ ನೀಡುವಂತೆ ಮತ್ತೊಮ್ಮೆ ಪತ್ರ ಬರೆದು ಒತ್ತಡ ಹೇರಲಾಗುವುದು. ಅದನ್ನು ಬಿಟ್ಟು ತಲೆಯ ಮೇಲೆ ಕಲ್ಲು ಇಡಲಾಗುವುದಿಲ್ಲ ಎಂದರು.

ಕರ್ನಾಟಕ ಪರೀಕ್ಷಾ ಪ್ರಾಕಾರದಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ಪೆÇಲೀಸರಿಂದ ತನಿಖೆ ನಡೆಸಲಾಗುತ್ತಿದೆ. ಹಿಂದಿನ ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಆರೋಪಿಯಾಗಿದ್ದ ಆರ್.ಡಿ.ಪಾಟೀಲ್‍ಗೂ ಕೆಇಎ ಪರೀಕ್ಷೆಯ ಅಕ್ರಮದಲ್ಲಿ ಸಂಪರ್ಕ ಇದೆ ಎಂದು ಹೇಳಲಾಗುತ್ತಿದೆ. ಅದು ನಿಜವಾಗಿದ್ದರೆ ತನಿಖೆಗೆ ಮತ್ತಷ್ಟು ಸಾಕ್ಷ್ಯ ದೊರೆತು ಬೆಂಬಲವಾಗಲಿದೆ. ಮರು ಪರೀಕ್ಷೆ ನಡೆಸಬೇಕು ಎಂಬುದು ಗೃಹ ಇಲಾಖೆ ವ್ಯಾಪ್ತಿಯಲ್ಲಿಲ್ಲ. ಸಂಬಂಸಿದವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

RELATED ARTICLES

Latest News