ಬೆಂಗಳೂರು,ಅ.7- ಕನ್ನಡ ಜನಶಕ್ತಿ ಕೇಂದ್ರದ ವತಿಯಿಂದ ಕೇಂದ್ರ ಸರ್ಕಾರದ ಭಾಷಾನೀತಿಯನ್ನು ವಿರೋಧಿಸಿ ನವೆಂಬರ್ 9 ರಂದು ಸ್ವಾತಂತ್ರ್ಯ ಉದ್ಯಾನವನದ ಕುವೆಂಪು ಪ್ರತಿಮೆ ಮುಂಭಾಗ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿದೆ. ಸಾ.ರಾ.ಗೋವಿಂದು ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯನ್ನು ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಉದ್ಘಾಟಿಸಲಿದ್ದು, ಕನ್ನಡ ಜನಶಕ್ತಿ ಕೇಂದ್ರದ ಸಿ.ಕೆ.ರಾಮೇಗೌಡ ಅವರು ಕೇಂದ್ರ ಸರ್ಕಾರದ ಭಾಷಾನೀತಿ ಕುರಿತು ಮೊದಲು ಪ್ರಸ್ತಾವನೆ ಮಂಡಿಸಲಿದ್ದಾರೆ.
ಈ ಸಭೆಯಲ್ಲಿ ಕನ್ನಡಪರ ಹೋರಾಟಗಾರರಾದ ಶೇ.ಭೊ.ರಾಧಾಕೃಷ್ಣ, ಎಂ.ತಿಮಯ್ಯ, ಮಂಜುನಾಥ ದೇವ್, ಡಾ.ತಲಕಾಡು ಚಿತ್ತರಂಗೇಗೌಡ, ಕರವೇ ಶಿವರಾಮೇಗೌಡ, ಕೆ.ಸಿ.ಜಗನ್ನಾಥರೆಡ್ಡಿ, ನ.ಶ್ರೀಧರ್, ಕೆ.ಎನ್.ಲಿಂಗೇಗೌಡ, ಗುರುದೇವ್ ನಾರಾಯಣಕುಮಾರ್, ನಾಗೇಶ್, ಡಿ.ಎಲ್.ಶಿವಕುಮಾರ್, ಎಂ.ಬಿ.ವಿಜಯಲಕ್ಷ್ಮಿ,
ರವೀಂದ್ರ, ಕನ್ನಡ ದಿನೇಶ್, ಕನ್ನಡ ಸಂಘದ ವೆಂಕಟೇಶ್, ಯತಿರಾಜು, ಸಿ.ಟಿ.ನಾಗೇಶ್, ಬಸವರಾಜ ಪಡಕೋಟಿ,
ರಾಜೇಶ್, ನಾಗರಾಜಸ್ವಾಮಿ, ಚಂದ್ರಪ್ಪ ಅವಲಹಳ್ಳಿ ಭಾಗವಹಿಸಿದ್ದರು.