Friday, November 22, 2024
Homeರಾಷ್ಟ್ರೀಯ | Nationalಕರ್ನಾಟಕ-ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶಕ್ಕೆ ಕೇಂದ್ರ ತಂಡ ಭೇಟಿ

ಕರ್ನಾಟಕ-ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶಕ್ಕೆ ಕೇಂದ್ರ ತಂಡ ಭೇಟಿ

ನವದೆಹಲಿ,ಜೂ.26- ಕಾವೇರಿ ಜಲಾನಯನ ಪ್ರದೇಶದ ಜಲವಿಜ್ಞಾನದ ಪರಿಸ್ಥಿತಿಯನ್ನು ಪರಿಶೀಲಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ)ದಿಂದ ಕೇಂದ್ರ ತಂಡ ಕರ್ನಾಟಕಕ್ಕೆ ಭೇಟಿ ನೀಡಲಿದೆ. ಕಾವೇರಿ ಜಲಾನಯನ ಪ್ರದೇಶದ ನೀರಿನ ಪರಿಸ್ಥಿತಿಯನ್ನು ಪರಿಶೀಲಿಸಲು ಹಾಗೂ ಜಲಾಶಯಗಳಲ್ಲಿನ ನೀರಿನ ಮಟ್ಟವನ್ನು ಪರಿಶೀಲಿಸಲು ಬರುತ್ತಿದೆ.

ತಮಿಳುನಾಡು ಕಾವೇರಿ ನೀರು ಬೀಡಬೇಕು ಎಂದು ಮನವಿ ಮಾಡಿದೆ. ಜೂ.14ರಂದು ನಡೆದ 97ನೇ ಸಿಡಬ್ಲ್ಯುಆರ್‌ಸಿ ಸಭೆಯ ಆದೇಶದ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಂದ ಸಿಡಬ್ಲ್ಯುಎಂಎ 31 ನೇ ಸಭೆಯಲ್ಲಿ ಅಧಿಕಾರಿಗಳು ಅಹವಾಲುಗಳನ್ನು ಆಲಿಸಿದ್ದಾರೆ.

ಬಿಲ್ಲಿಗುಂಡುಲುನಲ್ಲಿನ ಕೊರತೆಯನ್ನು ನೀಗಿಸಲು 5.37 ಟಿಎಂಸಿ ಅಡಿ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ತಮಿಳುನಾಡು ಸಿಡಬ್ಲ್ಯೂಎಂಎಗೆ ಒತ್ತಾಯಿಸಿದೆ. ಆದರೆ, ಕರ್ನಾಟಕವು ತನ್ನ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ಪ್ರಸ್ತುತ ಶೇ.70ರಷ್ಟು ಕೊರತೆಯಿದೆ. ಕುಡಿಯುವ ನೀರಿಗೆ ರಾಜ್ಯ ಆದ್ಯತೆ ನೀಡುತ್ತಿದೆ. ಕಾಲುವೆಗಳಿಗೂ ನೀರು ಬಿಡುತ್ತಿಲ್ಲ. ಯಾವುದೇ ಆದೇಶವನ್ನು ಅನುಸರಿಸಲು ಕಷ್ಟವಾಗುತ್ತದೆ. ತಮಿಳುನಾಡು ತನ್ನ ಜಲಾಶಯಗಳಿಂದ ನದಿಗೆ ನೀರು ಬಿಡುತ್ತಿದೆ ಎಂದು ತಿಳಿಸಿದೆ.

ಕರ್ನಾಟಕವು ತನ್ನ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ಇದುವರೆಗೆ ಶೇಕಡಾ 70ರಷ್ಟು ನೀರಿನ ಕೊರತೆಯಿದೆ ಎಂದು ಹೇಳಿದೆ. ಆದ್ದರಿಂದ ಯಾವುದೇ ಆದೇಶವನ್ನು ಅನುಸರಿಸಲು ಕಷ್ಟವಾಗುತ್ತದೆ. ಜೂನ್‌ 1ರಿಂದ 24 ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಒಳಹರಿವು 7.307 ಟಿಎಂಸಿ ಇದ್ದು, ಇದೇ ಅವಧಿಯಲ್ಲಿ ಕಳೆದ 30 ವರ್ಷಗಳ ಸರಾಸರಿ ಒಳಹರಿವು 24.448 ಟಿಎಂಸಿ ಆಗಿದೆ.

ಸುಪ್ರೀಂ ಕೋರ್ಟ್‌ ಮಾರ್ಪಡಿಸಿದಂತೆ ಕಾವೇರಿ ಜಲವಿವಾದ ನ್ಯಾಯಮಂಡಳಿಯ (ಅಖಿಂ) ಅಂತಿಮ ತೀರ್ಪಿನ ಪ್ರಕಾರ ಸಾಮಾನ್ಯ ವರ್ಷದಲ್ಲಿ 9.19 ಟಿಎಂಸಿ ಅಂದರೆ ಸುಮಾರು 3,550 ಕ್ಯೂಸೆಕ್‌‍ಗಳ ಅಂತಾರಾಜ್ಯ ಬಿಂದು ಬಿಳಿಗುಂಡ್ಲುವಿನಲ್ಲಿ ಇರುವುದನ್ನು ಖಚಿತಪಡಿಸಿದೆ.ಬಿಳಿಗುಂಡ್ಲು ಜೂನ್‌ 24ಕ್ಕೆ 5.367ಕ್ಕೆ 2 ಟಿಎಂಸಿಗಿಂತ ಕಡಿಮೆಯಾಗಿದೆ. ಜೂನ್ 24 ಕ್ಕೆ ಬಿಳಿಗುಂಡ್ಲುವಿನಲ್ಲಿ 5.367 ಟಿಎಂಸಿ ಕೊರತೆ ಹರಿಯುವಂತೆ ಕರ್ನಾಟಕಕ್ಕೆ ನಿರ್ದೇಶಿಸಬೇಕು.

ಜೂನ್‌ 2024ರ ಉಳಿದ ಅವಧಿಗೆ ಮತ್ತು ಜುಲೈ 2024ಕ್ಕೆ 31.24 ಟಿಎಂಸಿ ನಿಗದಿತ ನೀರು ಹರಿಯುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಮಿಳುನಾಡು ಒತ್ತಾಯಿಸಿದೆ. ಮುಂದಿನ ತಿಂಗಳು ಜುಲೈ 26 ರಂದು ನಡೆಯುವ ಮುಂದಿನ ಸಭೆಯ ವೇಳಾಪಟ್ಟಿಯಲ್ಲಿ ಜಲವಿಜ್ಞಾನದ ಪರಿಸ್ಥಿತಿಯನ್ನು ಪರಿಶೀಲಿಸಲು ತಂಡವನ್ನು ನೇಮಿಸಲು ಪ್ರಾಧಿಕಾರವು ಸ್ಪಷ್ಟವಾಗಿ ನಿರ್ಧರಿಸಿದೆ. ಕರ್ನಾಟಕದ ಜಲಾಶಯದ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ, ಆದೇಶವನ್ನು ರವಾನಿಸಲಾಗುತ್ತದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ 150 ದಿನಗಳ ಮುಂಗಾರಿನಲ್ಲಿ ಕೇವಲ 12 ದಿನಗಳ ಮಳೆಯಾಗಿದೆ. ಕಳೆದ ವರ್ಷದ ಸಂಕಷ್ಟದ ಪರಿಸ್ಥಿತಿಗಳಿಂದಾಗಿ ವಿವಿಧ ನದಿಗಳು ಮತ್ತು ಜಲಾಶಯಗಳ ಆದ್ರ್ರೀಕರಣ ಮಟ್ಟವನ್ನು ತಲುಪಲು ಸಮಯ ಹಿಡಿಯುತ್ತದೆ ಎಂದು ಸಿಡಬ್ಲ್ಯುಎಂಎ ಅಧ್ಯಕ್ಷ ಸೌಮಿತ್ರ ಕುಮಾರ್‌ ಹಲ್ದಾರ್‌ ತಿಳಿಸಿದ್ದಾರೆ.

ಜೂ.1ರಿಂದ ಜೂ.24ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವು 7.307 ಟಿಎಂಸಿ ಆಗಿತ್ತು, ಕಳೆದ 30 ವರ್ಷಗಳ ಸರಾಸರಿ ಒಳಹರಿವು 24.45 ಟಿಎಂಸಿ ಇತ್ತು. ಅಧಿಕಾರಿಗಳ ಪ್ರಕಾರ, ಜೂನ್‌ 24 ಕ್ಕೆ ಬಿಳಿಗುಂಡ್ಲುನಲ್ಲಿ 5.37 ಟಿಎಂಸಿ ನೀರು ಇರಬೇಕಾಗಿತ್ತು ಆದರೆ, ಅದು 2 ಟಿಎಂಸಿಗಿಂತ ಕಡಿಮೆಯಾಗಿದೆ.

ಜುಲೈನಲ್ಲಿ 31.24 ಟಿಎಂಸಿ ನೀರು ಬಿಡುಗಡೆ ಮಾಡುವ ಸುಪ್ರೀಂಕೋರ್ಟ್‌ ತೀರ್ಪಿಗೆ ಕರ್ನಾಟಕ ಬದ್ಧರಾಗಿರಬೇಕು. ಜೂನ್‌ 1 ರಿಂದ 24 ರವರೆಗೆ ಬಿಳಿಗುಂಡ್ಲುನಲ್ಲಿ ಕೇವಲ 1.99 ಟಿಎಂಸಿ ಅಡಿ ನೀರು ಮಾತ್ರ ಬಂದಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್‌ ಸಕ್ಸೇನಾ ತಿಳಿಸಿದ್ದಾರೆ. ಜೂನ್‌ 24 ಕ್ಕೆ ಬಿಳಿಗುಂಡ್ಲುವಿಗೆ 5.37 ಟಿಎಂಸಿ ನೀರು ಇರುವಂತೆ ನೀರು ಹರಿಸಬೇಕು ಎಂದು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಮತ್ತು ಜೂನ್ನ ಉಳಿದ ಅವಧಿಗೆ ಮತ್ತು ಸುಪ್ರೀಂಕೋರ್ಟ್‌ ಮಾರ್ಪಡಿಸಿದ ವೇಳಾಪಟ್ಟಿಯಂತೆ ಜುಲೈಗೆ 31.24 ಟಿಎಂಸಿ ಎಫ್ಟಿ ಹರಿವನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಮಿಳುನಾಡು ಒತ್ತಾಯಿಸಿದೆ.

ಮೆಟ್ಟೂರು ಜಲಾಶಯದ ಪ್ರಸ್ತುತ ಸಂಗ್ರಹಣೆ 12.49 ಟಿಎಂಸಿ ಆಗಿದ್ದು, ಬಳಕೆಗೆ 2 ಟಿಎಂಸಿ ಮಾತ್ರ ಲಭ್ಯವಿದೆ. ಕುಡಿಯುವ ನೀರು ಮತ್ತು ಪರಿಸರ ಅಗತ್ಯಗಳಿಗಾಗಿ ಪ್ರತಿದಿನ ಸುಮಾರು 1,000 ಕ್ಯೂಸೆಕ್ಗಳನ್ನು ಬಿಡಲಾಗುತ್ತಿರುವುದರಿಂದ, ಜೂನ್‌ 12 ರಂದು ನಿಗದಿಯಂತೆ ನೀರಾವರಿಗಾಗಿ ಡ್ಯಾಂ ಓಪನ್‌ ಮಾಡಲು ಸಾಧ್ಯವಾಗಲಿಲ್ಲ ಎಂದು ಸಂದೀಪ್‌ ಸಕ್ಸೇನಾ ತಿಳಿಸಿದ್ದಾರೆ.

RELATED ARTICLES

Latest News